Friday, November 22, 2024
Homeರಾಷ್ಟ್ರೀಯ | Nationalಛತ್ತೀಸ್‍ಗಢದ ವಸತಿ ಶಾಲೆಯಲ್ಲಿ ಬೆಂಕಿ, 4 ವರ್ಷದ ಬಾಲಕಿ ಸಾವು

ಛತ್ತೀಸ್‍ಗಢದ ವಸತಿ ಶಾಲೆಯಲ್ಲಿ ಬೆಂಕಿ, 4 ವರ್ಷದ ಬಾಲಕಿ ಸಾವು

ಬಿಜಾಪುರ, ಮಾ.7 : ಛತ್ತೀಸ್‍ಗಢದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರಿ ವಸತಿ ಶಾಲೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಅವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಕೊಂಟಾ ಗ್ರಾಮದ ಬಾಲಕಿಯರ ಪೋರ್ಟಾ ಕ್ಯಾಬಿನ್ (ಪ್ರಿಫ್ಯಾಬ್ರಿಕೇಟೆಡ್ ಪೋರ್ಟಬಲ್ ಸ್ಟ್ರಕ್ಚರ್) ಶಾಲೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕಿ ಶಾಲೆಯ ವಿದ್ಯಾರ್ಥಿಯಲ್ಲ. ಆಕೆ ಕಳೆದ ಕೆಲವು ದಿನಗಳಿಂದ ಶಾಲೆಯ ವಿದ್ಯಾರ್ಥಿನಿಯಾಗಿರುವ ತನ್ನ ಅಕ್ಕನೊಂದಿಗೆ ವಾಸಿಸುತ್ತಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ. ಬೆಂಕಿ ಕಾಣಿಸಿದಾಗ ಶಾಲೆಯ ಎಲ್ಲಾ 380 ವಿದ್ಯಾರ್ಥಿಗಳನ್ನು ಪೋರ್ಟಾ ಕ್ಯಾಬಿನ್ ಸಿಬ್ಬಂದಿ ಮತ್ತು ಸ್ಥಳೀಯ ಗ್ರಾಮಸ್ಥರು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಆದರೆ, ನಂತರ ವಿದ್ಯಾರ್ಥಿಯ ತಂಗಿ ಕಾಣೆಯಾಗಿರುವುದು ಕಂಡುಬಂತು ನಂತರ ಹುಡುಕಾಟ ನಡಸಿದಾಗ ಆಕೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದು ಕಂಡುಬಂತು ಎಂದು ಅವರು ಹೇಳಿದರು.

ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಬೆಂಕಿಯನ್ನು ಹತೋಟಿಗೆ ತಂದರು ಶಾಲೆ ಸಂಪೂರ್ಣವಾಗಿ ಸುಟ್ಟುಹೋಗಿದೆ ಮತ್ತು ಅಲ್ಲಿನ ವಸ್ತುಗಳು ನಾಶವಾಗಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ.ರಾಜ್ಯದ ಕೆಲವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಲಾ ಮೂಲಸೌಕರ್ಯಗಳನ್ನು ಸ್ಥಾಪಿಸಲು ಪೋರ್ಟಾ ಕ್ಯಾಬಿನ್‍ಗಳನ್ನು ಬಳಸಲಾಗುತ್ತದೆ ಎಂದು ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವಪಲ್ಲಿ ಪೊಲೀಸರು ತಿಳಿಸಿದ್ದಾರೆ

RELATED ARTICLES

Latest News