ಬೆಂಗಳೂರು,ಫೆ.8- ಈ ಮೊದಲು ಗುತ್ತಿಗೆದಾರರಿಂದ ಶಾಸಕರೇ ನೇರವಾಗಿ ಹಣ ಕೇಳುತ್ತಿದ್ದರೂ ಇದೀಗ ಅಧಿಕಾರಿಗಳೆ ಹಣ ಕೆಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿ ಇದ್ದಂತಹ ಶೇ.40ರಷ್ಟು ಕಮಿಷನ್ ದಂಧೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಕಂಟಿನ್ಯೂ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದೇ ಪರಿಸ್ಥಿತಿ 40 % ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿ ಕಂಟಿನ್ಯೂ ಆಗಿದೆ. ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್ ವಿರುದ್ದವೂ ಗುಡುಗಿರುವ ಅವರು ಸರ್ಕಾರ ಈ ಕೂಡಲೇ ಪ್ಯಾಕೇಜ್ ಟೆಂಡರ್ ಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ಯಾಕೇಜ್ ಟೆಂಡರ್ ಕುರಿತಂತೆ ನಾವು ಹಲವು ಭಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ ಜೊತೆಗೆ ಹತ್ತಾರು ಪತ್ರ ಬರೆದು ಒತ್ತಾಯಿಸಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಪೊಲೀಸ್ ವಸತಿ ಗೃಹ, ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಮಾಡಲಾಗಿದೆ ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗುತ್ತದೆ ಅಲ್ಲದೆ, ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆರೋಪಿಸಿದರು.
ಈ ಕುರಿತಂತೆ ಬಿಬಿಎಂಪಿ ಮುಖ್ಯ ಅಭಿಯಂತರರನ್ನು ಪ್ರಶ್ನಿಸಿದರೆ ಅವರು ಮೇಲಾಧಿಕಾರಿಗಳ ಕಡೆ ಬೊಟ್ಟು ಮಾಡುತ್ತಾರೆ ಸಚಿವರನ್ನು ಕೇಳಿದರೆ ಅವರು ಶಾಸಕರ ಕಡೆ ಬೆರಳು ತೋರಿಸುತ್ತಾರೆ.ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಟೆಂಡರ್ ಕೊಡಿಸಲು ಯತ್ನಿಸುತ್ತಿದ್ದಾರೆ ಇದರಿಂದ ಭಾರಿ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ ಎಂದು ಕೆಂಪಣ್ಣ ಗುಡುಗಿದರು.
ಕಾಂಗ್ರೆಸ್‍ನತ್ತ ಕೆ.ಆರ್.ಪೇಟೆ ಮಾಜಿ ಶಾಸಕ ನಾರಾಯಣಗೌಡ..!?
ಹೀಗಾಗಿ ಈ ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಿದ್ರೆ ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಒಂದು ವಾರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 300 ಕೋಟಿ ರೂ.ಗಳಿಗೂ ಹೆಚ್ಚು ಪ್ಯಾಕೇಜ್ ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್ ಮೇಲೆ ನಮಗೆ ಹಲವಾರು ಅನುಮಾನ ಮೂಡಿದೆ. ಹೀಗಾಗಿ ಪ್ಯಾಕೇಜ್ ಟೆಂಡರ್ ರದ್ದು ಮಾಡಿ ಹೊಸದಾಗಿ ಟೆಂಡರ್ ಕರೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಹೇಗಾದರೂ ಮಾಡಿ ನಮಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳನ್ನು ಕೇಳಿದರೆ ಅವರು ಹಣ ಕೇಳುತ್ತಿದ್ದಾರೆ. ಈ ಹಿಂದೆ ನಾವು ಪೂರ್ಣಗೊಳಿಸಿರುವ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಬಾಕಿ ಬಿಲ್ ಬಿಡುಗಡೆಯಾಗಿಲ್ಲ. ಈಗಲೂ ಶೇ.40 ರಷ್ಟು ಕಮಿಷನ್ ದಂಧೆ ಮುಂದುವರೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಈ ಸರ್ಕಾರದಲ್ಲೂ ಶೇ.40ರಷ್ಟು ಕಮಿಷನ್ ದಂಧೆ ಮುಂದುವರೆದಿರುವ ಬಗ್ಗೆ ನಾವು ದೂರು ನೀಡುತ್ತೇವೆ ಎಂದು ಕೆಂಪಣ್ಣ ಗುಡುಗಿದ್ದಾರೆ.
ಮಲೆನಾಡಿನಲ್ಲಿ ಮಂಗನ ಕಾಯಿಲೆ ಹೆಚ್ಚಳ : ಜನರಲ್ಲಿ ಆತಂಕ
ಬಿಬಿಎಂಪಿಯಲ್ಲಿ 15 ಚೀಪ್ ಇಂಜಿನಿಯರ್‍ಗಳು ಇದ್ದಾರೆ ಅವರು ಪ್ರತಿಯೊಂದು ಟೆಂಡರ್‍ನಲ್ಲೂ ಹಣ ಕೇಳುತ್ತಾರೆ. ಯಾರು ಕಮಿಷನ್ ಕೇಳಿದವರು ಎಂದು ಸದ್ಯಕ್ಕೆ ಹೇಳಲ್ಲ ಅವಶ್ಯಕತೆ ಬಿದ್ದರೆ ಮುಂದೆ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ. ಅಕ್ರಮಗಳ ತನಿಖೆ ನಡೆಸುತ್ತಿರುವ ನಾಗಮೋಹನ್‍ದಾಸ್ ಸಮಿತಿಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೇವೆ ಎಂದು ಅವರು ಹೇಳಿದರು.