Sunday, October 6, 2024
Homeರಾಷ್ಟ್ರೀಯ | Nationalತ್ರಿಪುರಾದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದ 400 ಉಗ್ರರು

ತ್ರಿಪುರಾದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದ 400 ಉಗ್ರರು

400 Militants to Lay Down Their Arms in Tripura on Tuesday

ಅಗರ್ತಲಾ, ಸೆ 24-ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸಹಾ ಅವರ ಮುಂದೆ ಇಂದು ಸುಮಾರು 400 ಉಗ್ರರು ತಮ್ಮ ಶಸ್ತ್ರಾಸ್ತ್ರಗಳನ್ನು ಇಟ್ಟು ಶರಣಾಗಿದ್ದಾರೆ. ಇವರು ನ್ಯಾಷನಲ್‌ ಲಿಬರೇಶನ್‌ ಫ್ರಂಟ್‌ ಆಫ್‌ ತ್ರಿಪುರ (ಎನ್‌ಎಲ್‌ಎಫ್‌ಟಿ) ಮತ್ತು ಆಲ್‌ ತ್ರಿಪುರಾ ಟೈಗರ್‌ ಫೋರ್ಸ್‌ (ಎಟಿಟಿಎಫ್‌) ಗೆ ಸೇರಿದವರಾಗಿದ್ದು,ಕಳೆದಸೆ. 4 ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂದು ಅವರು ಶರಣಾಗಿದ್ದಾರೆ.

ಎನ್‌ಎಲ್‌ಎಫ್‌ಟಿ ಮತ್ತು ಎಟಿಟಿಎಫ್‌ನ ಸುಮಾರು 400 ದಂಗೆಕೋರರು ಜಂಪೂಯಿಜಾಲಾದ ತ್ರಿಪುರ ಸ್ಟೇಟ್‌ ರೈಫಲಸ್ (ಟಿಎಸ್‌‍ಆರ್‌) ನ 7 ನೇ ಬೆಟಾಲಿಯನ್‌ನ ಪ್ರಧಾನ ಕಚೇರಿಯಲ್ಲಿ ಸಿಎಂ ಮುಂದೆ ತಮ ಶಸ್ತ್ರಾಸ್ತ್ರಗಳನ್ನು ಇಡಲಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಕಾನೂನುಬಾಹಿರ ಗುಂಪುಗಳ ಎಲ್ಲಾ ನಾಯಕರು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡಲು ತಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾರೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಗುಂಪುಗಳು 1990 ರ ದಶಕದ ಉತ್ತರಾರ್ಧದಿಂದ ಎರಡು ದಶಕಗಳ ಕಾಲ ರಾಜ್ಯದಲ್ಲಿ ವಿನಾಶವನ್ನುಂಟುಮಾಡಿದವು. ದಂಗೆಯಿಂದಾಗಿ ಸಾವಿರಾರು ಜನರು, ವಿಶೇಷವಾಗಿ ಆದಿವಾಸಿಗಳಲ್ಲದವರು ಸ್ಥಳಾಂತರಗೊಂಡರು. ಎರಡು ಸಂಘಟನೆಗಳ ಉಗ್ರಗಾಮಿಗಳ ಪುನರ್ವಸತಿಗಾಗಿ ಕೇಂದ್ರವು 250 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ.

RELATED ARTICLES

Latest News