Friday, October 4, 2024
Homeರಾಷ್ಟ್ರೀಯ | Nationalಪೊಲೀಸ್‌‍ ಗುಂಡಿಗೆ ಬಲಿಯಾದ ಲೈಂಗಿಕ ದೌರ್ಜನ್ಯದ ಆರೋಪಿ

ಪೊಲೀಸ್‌‍ ಗುಂಡಿಗೆ ಬಲಿಯಾದ ಲೈಂಗಿಕ ದೌರ್ಜನ್ಯದ ಆರೋಪಿ

Badlapur Sexual Assault: Accused Akshay Shinde shot dead by police in encounter

ಥಾಣೆ, ಸೆ 24- ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯೊಬ್ಬ ಇಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.ಥಾಣೆ ಜಿಲ್ಲೆಯ ಬದ್ಲಾಪುರ್‌ ಪಟ್ಟಣದ ಶಾಲೆಯೊಂದರ ಶೌಚಾಲಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಕ್ಷಯ್‌ ಶಿಂಧೆ ಎಂಬ ಆರೋಪಿಯನ್ನ ಬಂಧಿಸಲಾಗಿತ್ತು.

ಕಳೆದ ರಾತ್ರಿಥಾಣೆಯಮುಂಬ್ರಾ ಬೈಪಾಸ್‌‍ ಬಳಿ ಆತನನ್ನು ಪೊಲೀಸ್‌‍ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸ್‌‍ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಈ ವೇಳೆ ಭಧ್ರತಾ ಪೊಲೀಸರು ಆತರಕ್ಷಣೆಗಾಗಿ ಗುಂಡು ಹಾರಿಸಿದ್ದು ಒಂದು ಗುಂಡು ಆತನ ದೇಹಕ್ಕೆ ಹೊಕ್ಕಿ ಕುಸಿದು ಬಿದ್ದಿದ್ದು ಆತನನ್ನು ಕಲ್ವಾ ನಾಗರಿಕ ಆಸ್ಪತ್ರೆಯಲ್ಲಿ ದಾಖಲಿಸಯಾಯಿತು ಆದರೆ ಆತ ಕೊನೆಯುಸಿರೆಳೆದಿದ್ದಾನೆ.

ಆರೋಪಿ ಶಿಂಧೆಸಾವಿನ ಘಟನೆಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಹೇಳಿದ್ದಾರೆ.ಮುಂಬೈನ ಸರ್ಕಾರಿ ಜೆಜೆ ಆಸ್ಪತ್ರೆಯಲ್ಲಿ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆದಿದ್ದು ನಂತರ ವಾರಸುದಾರರಿಗೆ ಶವ ಹಸ್ತಾಂತರಿಸಲಾಗುವುದು ಎಂದು ಥಾಣೆಯ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಂಧೆ ಕುಟುಂಬ ಸದಸ್ಯರು ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ಇದು ಪೊಲೀಸರು ಮತ್ತು ಬದ್ಲಾಪುರ ಶಾಲೆಯ ಆಡಳಿತ ಮಂಡಳಿಯ ಪಿತೂರಿ ಎಂದು ಅವರ ತಾಯಿ ಮತ್ತು ಚಿಕ್ಕಪ್ಪ ಆರೋಪಿಸಿದ್ದಾರೆ.

RELATED ARTICLES

Latest News