ಜಬಲ್ಪುರ, ಸೆ. 5- ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ರಾಣಿ ದುರ್ಗಾವತಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 5.2 ಕೆಜಿ ತೂಕದ ಗಂಡು ಮಗುವಿಗೆ ಜನ ನೀಡಿದ್ದಾರೆ .
ಅಂತಹ ಭಾರವಾದ ಶಿಶುಗಳ ಜನನವನ್ನು ವಿರಳ ಎಂದು ವೈದ್ಯರು ಬಣ್ಣಿಸಿದ್ದಾರೆ.
ರಂಜಿ ಪ್ರದೇಶದ ನಿವಾಸಿ ಆನಂದ್ ಚೌಕ್ಸೆಅವರ ಪತ್ನಿ ಶುಭಾಂಗಿಗೆ ಸಿಸೇರಿಯನ್ ಮೂಲಕ ಮಗು ಜನಿಸಿದೆ ಎಂದು ಹೆರಿಗೆ ಘಟಕದ ಮುಖ್ಯಸ್ಥರಾದ ಸ್ತ್ರೀರೋಗ ತಜ್ಞೆ ಡಾ.ಭಾವನಾ ಮಿಶ್ರಾ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ನಾನು ಇಷ್ಟು ಭಾರವಾದ ಮಗುವನ್ನು ನೋಡಿಲ್ಲ ಎಂದು ಅವರು ಹೇಳಿದರು, ಅಂತಹ ಶಿಶುಗಳ ಸಕ್ಕರೆ ಮಟ್ಟವು ಏರಿಳಿತವಾಗುವುದರಿಂದ ಅವುಗಳನ್ನು ಸಾಮಾನ್ಯವಾಗಿ 24 ಗಂಟೆಗಳ ಕಾಲ ವೀಕ್ಷಣೆಯಲ್ಲಿ ಇಡಲಾಗುತ್ತದೆ ಎಂದು ಹೇಳಿದರು.
ಇಂತಹ ಶಿಶುಗಳು ಜನಜಾತ ವೈಪರೀತ್ಯಕ್ಕೆ ಒಳಗಾಗುವ ಸಾಧ್ಯತೆಯಿಂದ ಮಗುವನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ. ಶಿಶುವೈದ್ಯರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ, ಶಿಶು ಚೆನ್ನಾಗಿದೆ ಎಂದು ಅವರು ಎಂದು ಮಿಶ್ರಾ ಮಾಹಿತಿ ನೀಡಿದರು.