Thursday, December 12, 2024
Homeರಾಷ್ಟ್ರೀಯ | Nationalಬಸ್‌‍ಗೆ ಎಸ್‌‍ಯುವಿ ಅಪ್ಪಳಿಸಿ ನಾಲ್ವರು ಮಹಿಳೆಯರೂ ಸೇರಿ ಐವರ ದುರ್ಮರಣ

ಬಸ್‌‍ಗೆ ಎಸ್‌‍ಯುವಿ ಅಪ್ಪಳಿಸಿ ನಾಲ್ವರು ಮಹಿಳೆಯರೂ ಸೇರಿ ಐವರ ದುರ್ಮರಣ

5, including 4 women dead after SUV crashes into bus in UP's Hardoi

ಹರ್ದೋಯಿ, ನ.25 (ಪಿಟಿಐ) ಉತ್ತರ ಪ್ರದೇಶದ ಈ ಜಿಲ್ಲೆಯ ಮಲ್ಲವಾನ್‌ ಪ್ರದೇಶದಲ್ಲಿ ಇಂದು ಎಸ್‌‍ಯುವಿ ಕಾರು ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರೂ ಸೇರಿದಂತೆ ಐವರು ಮತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರಿನಗರ ಪ್ರದೇಶದಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಎಸ್‌‍ಯುವಿ ಮತ್ತು ಬಸ್‌‍ ಪ್ರತ್ಯೇಕ ಮದುವೆಗಳಿಂದ ಜನರನ್ನು ಕರೆದೊಯ್ಯುತ್ತಿದ್ದವು ಎಂದು ಅವರು ಹೇಳಿದರು.

ಅಪಘಾತದಲ್ಲಿ ಸೀಮಾ (40), ಪ್ರತಿಭಾ (32), ಪ್ರತಿಭಾ (42), ರಾಮಲಾಲಿ (52) ಮತ್ತು ಸುಭಮ್‌ (28) ಮತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು ಎಸ್‌‍ಯುವಿಯಲ್ಲಿ ಸಂಚರಿಸುತ್ತಿದ್ದವರು ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್‌‍ ವರಿಷ್ಠಾಧಿಕಾರಿ ನಪೇಂದ್ರ ಕುಮಾರ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಾಣಹಾನಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

RELATED ARTICLES

Latest News