Sunday, April 28, 2024
Homeಆರೋಗ್ಯ / ಜೀವನಶೈಲಿಐಜೆಎಸ್ಎಫ್23ರ ಬಂಪರ್ ಡ್ರಾದಲ್ಲಿ 1 ಕೆಜಿ ಚಿನ್ನ ಗೆದ್ದ 5 ಅದೃಷ್ಟಶಾಲಿ ವಿಜೇತರು

ಐಜೆಎಸ್ಎಫ್23ರ ಬಂಪರ್ ಡ್ರಾದಲ್ಲಿ 1 ಕೆಜಿ ಚಿನ್ನ ಗೆದ್ದ 5 ಅದೃಷ್ಟಶಾಲಿ ವಿಜೇತರು

ಬೆಂಗಳೂರು, ಆಲ್ ಇಂಡಿಯಾ ಜೆಮ್ ಮತ್ತು ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಆಯೋಜಿಸಿದ್ದ ಆಭರಣ ಶಾಪಿಂಗ್ ಉತ್ಸವವಾದ ಇಂಡಿಯಾ ಜ್ಯುವೆಲರಿ ಶಾಪಿಂಗ್ ಫೆಸ್ಟಿವಲ್ 2023 (ಐಜೆಎಸ್‌ಎಫ್‌23) 2023ರ ನವೆಂಬರ್ 26ರಂದು ಮುಕ್ತಾಯಗೊಂಡಿತ್ತು, ಆ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮದ ಪ್ರಕ್ರಿಯೆ ಸಲಹೆಗಾರರಾಗಿದ್ದ ಇವೈ ಸಮ್ಮುಖದಲ್ಲಿ ಡ್ರಾ ನಡೆಸುವ ಮೂಲಕ 1 ಕೆಜಿ ಚಿನ್ನದ ಬಂಪರ್ ಬಹುಮಾನ ವಿಜೇತರನ್ನು ಘೋಷಿಸಲಾಗಿದೆ.

ಪ್ರಕ್ರಿಯೆ ಸಲಹೆಗಾರರಾದ ಇವೈ ಕಾನೂನು ಪ್ರತಿನಿಧಿಗಳು ಮತ್ತು ಮಾಧ್ಯಮಗಳ ಉಪಸ್ಥಿತಿಯಲ್ಲಿ ನ್ಯಾಯಯುತವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಹೈದರಾಬಾದ್, ನಾಗ್ಪುರ, ಕಟಕ್, ಕಾನ್ಪುರ ಮತ್ತು ಛತ್ತೀಸ್‌ಗಢದಿಂದ ಬಂದ ವಿಜೇತರನ್ನು ಆಯ್ಕೆ ಮಾಡಿದ್ದಾರೆ. ಒಟ್ಟು, 48 ನಗರಗಳಲ್ಲಿ 135 ಬಹುಮಾನಗಳನ್ನು ಸಹ ಘೋಷಿಸಲಾಗಿದೆ.

ಐಜೆಎಸ್‌ಎಫ್‌23 ಅಕ್ಟೋಬರ್ 15ರಂದು ಪ್ರಾರಂಭವಾಗಿತ್ತು ಮತ್ತು ನವೆಂಬರ್ 26ರವರೆಗೆ ನಡೆಯಿತು. ಉತ್ಸವದ ಭಾಗವಾಗಿ ಐಜೆಎಸ್‌ಎಫ್‌ ಅದರಲ್ಲಿ ಭಾಗವಹಿಸಿದವರಿಗೆ ರೂ.11 ಕೋಟಿಗಳಷ್ಟು ಮೊತ್ತದ ಬಹುಮಾನಗಳನ್ನು ವಿತರಿಸುತ್ತದೆ.

ಜಿಜೆಸಿ ನಿರ್ದೇಶಕ ಮತ್ತು ಐಜೆಎಸ್‌ಎಫ್‌ ಸಂಚಾಲಕ ಶ್ರೀ ದಿನೇಶ್ ಜೈನ್ ಮಾತನಾಡುತ್ತಾ, ‘ಇಂದು ವಿಜೇತರನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ ಮತ್ತು ಅವರ ಗೆಲುವಿಗಾಗಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ಆಯ್ಕೆಯ ಸಂಪೂರ್ಣ ಪ್ರಕ್ರಿಯೆಯು ಅತ್ಯಂತ ನ್ಯಾಯೋಚಿತ ಮತ್ತು ಪಾರದರ್ಶಕವಾಗಿತ್ತು. ಐಜೆಎಸ್‌ಎಫ್‌ ದೇಶಾದ್ಯಂತ ಪಡೆದ ಉತ್ತಮ ಪ್ರತಿಕ್ರಿಯೆಯಿಂದ ನಮಗೆ ತುಂಬಾ ಸಂತೋಷವಾಗಿದೆ.

ಮುಂದಿನ ವರ್ಷ ದೊಡ್ಡದಾಗಿ ಮತ್ತು ಉತ್ತಮ ರೀತಿಯಲ್ಲಿ ಆಯೋಜಿಸಲು ಇದು ನಮಗೆ ಸಾಕಷ್ಟು ವಿಶ್ವಾಸ ಮತ್ತು ಪ್ರೋತ್ಸಾಹವನ್ನು ನೀಡಿದೆ. ಭಾರತವನ್ನು ಆಭರಣ ಶಾಪಿಂಗ್ ಹಬ್ ಮಾಡುವ ನಿಟ್ಟಿನಲ್ಲಿ ಇದು ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದು ಹೇಳಿದರು.

RELATED ARTICLES

Latest News