ಬೆಂಗಳೂರು, ಏ.12- ಜನಸಂದಣಿ ಇರುವ ಬಿಎಂಟಿಸಿ ಬಸ್ಗಳನ್ನೇ ಗುರಿಯಾಗಿಸಿಕೊಂಡು ಪ್ರಯಾಣಿಕರ ಮೊಬೈಲ್ ಫೋನ್ ಗ ಳನ್ನು ಅವರ ಅರಿವಿಗೆ ಬಾರದಂತೆ ಕಳ್ಳತನ ಮಾಡುತ್ತಿದ್ದ ಆರು ಮಂದಿ ಅಂತಾರಾಜ್ಯ ಆರೋಪಿಗಳನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ಮೌಲ್ಯದ 107 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶ ಮೂಲದ ರವಿತೇಜ, ವೆಂಕಟೇಶ್, ಬಾಲರಾಜು, ಪೆದ್ದರಾಜು, ರಮೇಶ್ ಮತ್ತು ಸಾಯಿಕುಮಾರ್ ಬಂಧಿತ ಆರೋಪಿಗಳು.ಈ ಆರೋಪಿಗಳು ಕದ್ದ ಮೊಬೈಲ್ಗಳನ್ನು ಒಂದು ಕಡೆ ಶೇಖರಿಸಿಟ್ಟು ನಂತರ ಅವುಗಳನ್ನು ಅಂತಾರಾಜ್ಯ ಬಸ್ಗಳ ಮುಖಾಂತರ ಹೊರರಾಜ್ಯಕ್ಕೆ ತೆಗೆದುಕೊಂಡು ಹೋಗಿ, ಮಾರಾಟ ಮಾಡುತ್ತಿದ್ದುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಏ.4ರಂದು ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸು ತ್ತಿದ್ದಾಗ, ಅವರ ಮೊಬೈಲ್ ಕಳ್ಳತನ ವಾಗಿತ್ತು. ಈ ಬಗ್ಗೆ ಅವರು ವೈಟ್ಪೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಚರಣೆ ನಡೆಸಿ ಆಂಧ್ರಪ್ರದೇಶದ 6 ಮಂದಿಯನ್ನು ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿ, ದೂರು ನೀಡಿದ್ದ ವ್ಯಕ್ತಿಯ ಮೊಬೈಲ್ ಫೋನ್ ಸೇರಿದಂತೆ ಒಟ್ಟು ಮೂರು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ನಂತರ ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಆರೋಪಿಗಳು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚೆನ್ನಸಂದ್ರದಲ್ಲಿ ಒಂದು ಬಾಡಿಗೆ ರೂಮ್ನ್ನು ಮಾಡಿಕೊಂಡಿದ್ದರು. ಆ ರೂಮನ್ನು ಪರಿಶೀಲಿಸಿದಾಗ ಬರೋಬ್ಬರಿ 80 ವಿವಿಧ ಕಂಪನಿಯ ಕಳ್ಳತನ ಮಾಡಿರುವ ಮೊಬೈಲ್ ಫೋನ್ ಗಳನ್ನು ಶೇಖರಿಸಿಟ್ಟಿರುವುದು ಕಂಡುಬಂದಿದೆ.
ಅಲ್ಲದೆ ಈ ಆರೋಪಿಗಳು ಅವಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೊಂದು ಬಾಡಿಗೆ ರೂಮ್ನ್ನು ಹೊಂದಿದ್ದು, ಆ ರೂಮ್ನ್ನೂ ಸಹ ಪರಿಶೀಲಿಸಿದಾಗ ಅಲ್ಲಿಯೂ 24 ವಿವಿಧ ಕಂಪನಿಯ ಕಳ್ಳತನ ಮಾಡಿರುವ ಮೊಬೈಲ್ ಫೋನ್ಗಳನ್ನು ಶೇಖರಿಸಿಟ್ಟಿರುವುದು ಕಂಡುಬಂದಿರುತ್ತದೆ. ಒಟ್ಟಾರೆ 107 ಮೊಬೈಲ್ ಫೋನ್ಗಳನ್ನು ಪೊಲಿಸರು ವಶ ಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 3್ತ0 ಲಕ್ಷ ರೂ,ಗಳೆಂದು ಅಂದಾಜಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ವೈಟ್ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಶಿವಕುಮಾರ್ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತೆ ಕವಿತಾ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.