Tuesday, October 8, 2024
Homeರಾಜ್ಯ86 ವರ್ತಕರ ಮೇಲೆ ದಾಳಿ, 64 ಕೋಟಿ ತೆರಿಗೆ ವಂಚನೆ ಪತ್ತೆ

86 ವರ್ತಕರ ಮೇಲೆ ದಾಳಿ, 64 ಕೋಟಿ ತೆರಿಗೆ ವಂಚನೆ ಪತ್ತೆ

ಬೆಂಗಳೂರು, ನ.28- ಕಬ್ಬಿಣ, ಉಕ್ಕು ಹಾಗೂ ಸ್ಕ್ರ್ಯಾಪ್ ವಲಯದಲ್ಲಿನ 86 ವರ್ತಕರ ಮೇಲೆ ದಾಳಿನಡೆಸಿರುವ ವಾಣಿಜ್ಯ ತೆರಿಗೆ ಇಲಾಖೆ 64 ಕೋಟಿ ರೂಪಾಯಿಗಳ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದೆ. ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯ ಜಾರಿ ವಿಭಾಗ ಬೆಂಗಳೂರು ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದೆ. ನಕಲಿ ಹೂಡುವಳಿ, ತೆರಿಗೆ ಜಮೆಯನ್ನು (ಐಟಿಸಿ) ಬಳಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ತೆರಿಗೆಯನ್ನು ವಂಚಿಸಿ ನಷ್ಟ ಉಂಟುಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.

ಈ ಜಾಲ ನಕಲಿ ಬಿಲ್‍ಗಳನ್ನು ವ್ಯವಸ್ಥಿತವಾಗಿ ಸೃಷ್ಟಿಸಿ ತೆರಿಗೆಯನ್ನು ತಪ್ಪಿಸುತ್ತಿತ್ತು, ಎಲ್ಲಾ ವಂಚಕರ ಸಮಗ್ರ ತಪಾಸಣೆ ನಡೆಸಲು ಕಳೆದೆರಡು ತಿಂಗಳ ಅವಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ, ಸದರಿ ವಂಚಕರ ವ್ಯಾಪಾರ ಸ್ಥಳಗಳ ಹೆಚ್ಚಿನ ತಪಾಸಣೆಯನ್ನೂ ಮುಂದುವರೆಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ ತಿಳಿಸಿದ್ದಾರೆ.

ಈ ವರ್ತಕರು ಹೂಡುವಳಿ ತೆರಿಗೆ ಜಮೆಯನ್ನು ಕೃತಕವಾಗಿ ಸೃಷ್ಟಿಸುತ್ತಿದ್ದ ವ್ಯವಸ್ಥಿತ ರೀತಿಯು ಕುತೂಹಲಕಾರಿಯಾಗಿದೆ. ಇಲಾಖೆಯಿಂದ ಈಗಾಗಲೇ ನೋಂದಣಿ ಅಮಾನತ್ತಿನಲ್ಲಿರುವ ಅಥವಾ ರದ್ದುಗೊಂಡಿರುವ ಜಿಎಸ್‍ಟಿಎನ್ ಸಂಖ್ಯೆಗಳನ್ನು ಬಳಸಿಕೊಂಡು ಅವುಗಳಿಂದ ಕೃತಕ ಖರೀದಿ ಬಿಲ್ಲುಗಳನ್ನು ಸೃಷ್ಟಿಸಿ ಅವುಗಳಿಂದ ಐಟಿಸಿಯನ್ನು ಪಡೆದುಕೊಂಡು ತೆರಿಗೆಯನ್ನು ಪಾವತಿಸದೇ ವಂಚಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಬಿಜೆಪಿ ಅಸಮಾಧಾನಿತರೊಂದಿಗೆ ವರಿಷ್ಠರ ಸಮಾಲೋಚನೆ

ಇದರ ಜೊತೆಗೆ ಕೆಲವೊಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳ ಮೂಲಕ ಮೋಸದಿಂದ ಜಿಎಸ್‍ಟಿ ನೋಂದಣಿ ಮಾಡಿಸಿ, ಯಾವುದೇ ವ್ಯವಹಾರ ಸ್ಥಳಗಳನ್ನು ಹೊಂದಿಲ್ಲದೆ ನಕಲಿ ಬಿಲ್ಲುಗಳನ್ನು ನೀಡುವುದರ ಮೂಲಕವೂ ತೆರಿಗೆ ತಪ್ಪಿಸಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ಈ ಜಾಲ ನಕಲಿ ಬಿಲ್‍ಗಳ ಮೂಲಕ 352 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ. ಅದರಿಂದ ಸರ್ಕಾರಕ್ಕೆ 64 ಕೋಟಿ ರೂಪಾಯಿಗಳ ತೆರಿಗೆ ವಂಚನೆಯಾಗಿದೆ. ನಕಲಿ ಬಿಲ್ ತಯಾರಿಕೆ ಹಾಗೂ ತೆರಿಗೆ ವಂಚನೆ ಶಿಕ್ಷಾರ್ಹ ಅಪರಾಧವಾಗಿದೆ. ಜುಲ್ಮಾನೆ ವಿಧಿಸುವಿಕೆ, ಸರಕುಗಳ ಮುಟ್ಟುಗೋಲು, ಸ್ವತ್ತುಗಳ ಮತ್ತು ಬ್ಯಾಂಕ್ ಖಾತೆಗಳ ಮುಟ್ಟುಗೋಲು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಅಮೆರಿಕ ನೆಲೆಗಳ ಛಾಯಾಚಿತ್ರ ತೆಗೆದಿದೆಯಂತೆ ಉತ್ತರ ಕೊರಿಯಾ ಉಪಗ್ರಹ

ತೆರಿಗೆ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಇಲಾಖೆ ನಿರಂತರ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಈ ರೀತಿಯ ಮೋಸಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ತೆರಿಗೆ ವಂಚನೆಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೂ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

Latest News