ನವದೆಹಲಿ,ಮೇ23- ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 58 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ಶನಿವಾರ ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6 ಗಂಟೆಯಿಂದ ಮತದಾನ ನಡೆಯಲಿದೆ. ನಾಳೆ ಅಭ್ಯರ್ಥಿಗಳು ತಮ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಗೆ ಮನೆಗೆ ತೆರಳಿ ಮತ ಯಾಚಿಸಬಹುದು.
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದರು. ಇತ್ತ ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಮುಖರಾದ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರ ಮತಯಾಚಿಸಿದರು.
ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಭರ್ಜರಿ ಬಹಿರಂಗ ಮತಯಾಚನೆ ಮಾಡಿದರೆ ಅತ್ತ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಿತೀಶ್‌ಕುಮಾರ್ ಸೇರಿದಂತೆ ಅನೇಕರು ತಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.
ಪ್ರಮುಖವಾಗಿ ಬಿಹಾರದ 8 ಲೋಕಸಭಾ ಕ್ಷೇತ್ರಗಳಾದ ವಾಲೀಕಿನಗರ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ವೈಶಾಲಿ, ಗೋಪಾಲ್‌ಗಂಜ್, ಶಿವಾನ್, ಮಹಾರಾಜ್‌ಗಂಜ್, ಶಾಹೋರ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಹರಿಯಾಣದ ಅಂಬಾಲ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಲ್, ಸೋನಿಪತ್, ರೋಹಟಕ ಭಿವಾನಿ, ಗುರುಗಾಂವ್, ಫರಿದಾಬಾದ್ ಸೇರಿದಂತೆ 10 ಕ್ಷೇತ್ರಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಕಣಿವೆ ರಾಜ್ಯವಾದ ಜಮುಕಾಶೀರದ ಅನಂತನಾಗ್, ರಸೋರಿ, ಜಾರ್ಖಂಡ್‌ನ ಗಿರಿಧ್, ರಾಂಚಿ, ಜೆಮ್‌ಶೆಡ್‌ಪುರ, ಧನಬಾದ್ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಾದ ಚಾಂದಿನಿಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ ಹಾಗೂ ದಕ್ಷಿಣ ದೆಹಲಿಯಲ್ಲಿ ಮತದಾನ ಜರುಗುವುದು. ಒಡಿಶಾಸದ ಸಂಬಾಲ್‌ಪುರ್, ಕಿಯೋಂಜಂಗ್, ದೆನ್ಕಾನಾಲ್, ಹುರಿ, ಭುವನೇಶ್ವರ್ ಹಾಗೂ ಕಟಕ್‌ನಲ್ಲಿ ಮತದಾನ ನಡೆಯಲಿದೆ.
ಉತ್ತರಪ್ರದೇಶದ ಸುಲ್ತಾನ್‌ಪುರ್, ಪ್ರತಾಪ್‌ಘಡ, ಪೂಲ್‌ಪುರಿ, ಅಲಹಾಬಾದ್, ಅಂಬೇಡ್ಕರ್‌ನಗರ, ಧೊಮರಿಯಾಗಂಜ್, ಸಂತ ಕಬೀರ್ ನಗರ, ಲಾಲ್‌ಗಂಜ್, ಅಜಾಮ್‌ಗಢ, ಜಾನಪುರ್, ಮಚಲಿಶಹರ್, ಬಡೋಲಿ, ಶ್ರವಸ್ತಿ ಮತ್ತು ಬಸ್ತಿ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ತಮ್ಲುಕ್, ಕಂಠಿ, ಘಟಾಲ್, ಜಾರ್ಗ್ರಾಮ್, ಮೇದಿನಿಪುರ್, ಪುರುಲಿಯಾ, ಬಂಕುರಾ, ಬಿಷ್ಣುಪುರದಲ್ಲಿ ಮತದಾನ ನಡೆಯಲಿದೆ.