ಇಂಫಲ, ಅ.29- ನಿಷೇಧಿತ ಯುನೈಟೆಡ್ ಲಿಬರೇಶನ್ -ಫ್ರಾಂಟ್ ಆಫ್ ಮಣಿಪುರ ಸಂಘಟನೆಯ ಎಂಟು ಸದಸ್ಯರನ್ನು ತೌಬಲ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿ, ಅವರ ಬಳಿಯಿದ್ದಶಾಸ್ತ್ರಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ತೌನರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಡೆದಿದ್ದಕ್ಕಾಗಿ ಇವರನ್ನು ಬಂಧಿಸಲಾಗಿದೆ ಎಂದು ಅಧಿಕೃತ ವರದಿಗಳು ಹೇಳಿದೆ.
ಮೂರು ಎಕೆ 47 ರೈಫಲ್ ಎರಡು ಎಕೆ 56 ರೈಫಲ್, ಒಂದು ಎಂ-16 ರೈಫಲ್, ಒಂದು 9 ಎಂಎಂ ಪಿಸ್ತೂಲ್, 147 ಎಕೆ 47 ಹಾಗು ಅಪಾರ ಮದ್ದುಗುಂಡು, ಹದಿನಾರು ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಯುಎನ್‌ಎಲ್‌ಎಫ್ ನ ಪಂಬೆ ಬಣವು 2023ರಲ್ಲಿ ಕೇಂದ್ರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿತು.ಇಂಫಾಲ್‌ನ ಪೂರ್ವದ ಟಾಪ್ ಲೈರಾಕ್ ಮಚಿನ್ ಪ್ರದೇಶದಿಂದ ನಿಷೇಽತ ಸಂಘಟನೆಯ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕೇಡರ್ ಇಂ-ಫಾಲ್ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.