Sunday, November 3, 2024
Homeರಾಷ್ಟ್ರೀಯ | Nationalಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಹೆಮ್ಮೆಯ ಸೇನಾ ಶ್ವಾನ ಫ್ಯಾಂಟಮ್

ಉಗ್ರರ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಹೆಮ್ಮೆಯ ಸೇನಾ ಶ್ವಾನ ಫ್ಯಾಂಟಮ್

Indian Army dog ‘Phantom’ dies heroically in anti-terror operation in J-K, honoured for sacrifice

ನವದೆಹಲಿ,ಅ.29- ಜಮ್ಮುಕಾಶ್ಮೀರದ ಅಖ್ನೂರ್‌ನ ಸುಂದರ‍್ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನ -ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ. ಸುಂದರ‍್ಬನಿ ಸೆಕ್ಟರ್ ಅಸಾನ್ ಬಳಿ ಸೇನಾ ಬೆಂಗಾವಲು ಪಡೆಯ ಮೇಲೆ ಉಗ್ರರು ಬೆಳಗ್ಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಶ್ವಾನ -ಫ್ಯಾಂಟಮ್ ಅಸುನೀಗಿದೆ.

ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನವಾಗಿದ್ದು, 2020ರ ಮೇ 25ರಂದು ಜನಿಸಿತ್ತು. ಅದು ಏ-9 ಘಟಕದ ಆಕ್ರಮಣಕಾರಿ ಶ್ವಾನವಾಗಿತ್ತು. ಇದು ಉಗ್ರರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ತರಬೇತಿ ಪಡೆದ ಶ್ವಾನ ದಳದ ವಿಶೇಷ ಘಟಕವಾಗಿದೆ. ಫ್ಯಾಂಟಮ್‌ನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಸೇನೆ ಹೇಳಿದೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸೇನೆ, ನಮ್ಮ ಶ್ವಾನ -ಫ್ಯಾಂಟಮ್‌ನ ತ್ಯಾಗಕ್ಕೆ ನಮನ ಸಲ್ಲಿಸುತ್ತೇವೆ. ನಮ್ಮ ಸೈನಿಕರು ಸಿಕ್ಕಿಬಿದ್ದ ಭಯೋತ್ಪಾದಕರ ಬಳಿಗೆ ತೆರಳುತ್ತಿದ್ದಾಗ ಫ್ಯಾಂಟಮ್ ಶತ್ರುಗಳ ದಾಳಿಗೆ ಒಳಗಾಯಿತು. ಅವನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.

ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ ಕೌಂಟರ್‌ನಲ್ಲಿ ಯೋಧನ ಜೀವ ಉಳಿಸುವ ವೇಳೆ ಸೇನಾ ಶ್ವಾನ ಕೆಂಟ್ ಸಾವನ್ನಪ್ಪಿತ್ತು. ಅದರ ವಯಸ್ಸು 6 ವರ್ಷ ಆಗಿತ್ತು. ಇದಕ್ಕೂ ಮೊದಲು ಶ್ವಾನ ಕೆಂಟ್ ಕೆ-9 ಕಾರ್ಯಾಚರಣೆಗಳ ಭಾಗವಾಗಿತ್ತು. ಕೆಂಟ್‌ನ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಲಾಗಿತ್ತು. ಸೇನಾ ಯೋಧರು ಕೂಡ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.

ಇತ್ತೀಚೆಗೆ 21ನೇ ಕಾಪ್ರ‍್ಸ ಶ್ವಾನ ಘಟಕದ ಹೆಣ್ಣು ಲ್ಯಾಬ್ರಡಾರ್ ಕೂಡ ರಾಜೌರಿ ಜಿಲ್ಲೆಯಲ್ಲಿ ತನ್ನ ಹ್ಯಾಂಡ್ಲರ್ ಅನ್ನು ಉಳಿಸುವ ಪ್ರಯತ್ನದಲ್ಲಿ ಸಾವನ್ನಪ್ಪಿತ್ತು. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಅಸನ್, ಸುಂದರಬಂಡಿ ಸೆಕ್ರ‍್ನಲ್ಲಿ ಭಯೋತ್ಪಾದಕರು ಸೇನಾ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ದಾಳಿ ನಡೆಸಿದ್ದ ಉಗ್ರರ ಪತ್ತೆಗೆ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸೇನೆಯ ಗುಂಡಿಗೆಬಲಿಯಾಗಿದ್ದಾರೆ.

RELATED ARTICLES

Latest News