Friday, May 17, 2024
Homeರಾಷ್ಟ್ರೀಯಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ 8000ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ 8000ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ

ಅಯೋಧ್ಯೆ,ಡಿ.6- ಸುದೀರ್ಘ ಕಾಲದ ಬಳಿಕ ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದು, ಈ ಐತಿಹಾಸಿಕ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ದೇಶಾದ್ಯಂತ ಸುಮಾರು 8000 ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ರಾಮಜನ್ಮಭೂಮಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ 2019ರಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಈಗ ದೇವಾಲಯವು ಬಹುತೇಕ ಸಿದ್ದಗೊಂಡಿದ್ದು, ಜನವರಿಯಲ್ಲಿ ವಿಗ್ರಹ ಪ್ರತಿಷ್ಠಾಪಿಸಿದ ನಂತರ ವಿಶ್ವದಾದ್ಯಂತ ಇರುವ ಭಕ್ತರಿಗೆ ದೇವಾಲಯ ಮುಕ್ತವಾಗಿರುತ್ತದೆ.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಈಗಾಗಲೇ ಪ್ರಧಾನಿ ನರೇಂದ್ರಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಉಪಸ್ಥಿತರಿರುತ್ತಾರೆ.

ದೇಶಾದ್ಯಂತ ಸುಮಾರು 8000 ಗಣ್ಯ ವ್ಯಕ್ತಿಗಳನ್ನು ದೇವಾಲಯದ ಸಂಘಟನಾ ಸಂಸ್ಥೆಯಾದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಈ ಸಂದರ್ಭಕ್ಕೆ ಸಾಕ್ಷಿಯಾಗಲು ಆಹ್ವಾನಿಸಿದೆ. ಆಹ್ವಾನಿತ ಅತಿಥಿಗಳಲ್ಲಿ ದೇಶದ ಮಹಾನ್ ನಾಯಕರು ಅಥವಾ ಧಾರ್ಮಿಕ ಮುಖಂಡರು ಮತ್ತು ಕಾರ್ಯಕರ್ತರು ಮಾತ್ರವಲ್ಲದೆ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳು, ಮನರಂಜನಾ ಉದ್ಯಮದ ತಾರೆಗಳು ಮತ್ತೂ ಭಾರತೀಯ ಕ್ರಿಕೆಟಿಗರ ಹೆಸರುಗಳೂ ಇದರಲ್ಲಿದೆ.

ಮತ್ತೆ ಅಮೆರಿಕ ಅಧ್ಯಕ್ಷನಾದರೆ ಸರ್ವಾಧಿಕಾರಿಯಾಗಿ ಬದಲಾಗುವುದಿಲ್ಲ : ಟ್ರಂಪ್

ಸಚಿನ್ ಮತ್ತು ವಿರಾಟ್ ಅಲ್ಲದೆ, ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್, ದೇಶದ ದೊಡ್ಡ ಕೈಗಾರಿಕೋದ್ಯಮಿಗಳಾದ ರತನ್ ಟಾಟಾ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಗೂ ಆಹ್ವಾನ ನೀಡಲಾಗಿದೆ. ಇವರಲ್ಲಿ ಎಷ್ಟು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇದೆಲ್ಲದರ ಹೊರತಾಗಿ 1990ರ ರಾಮಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ 50 ಕರಸೇವಕರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ಅನೇಕ ಪತ್ರಕರ್ತರು, ಮಾಜಿ ಸೇನಾಧಿಕಾರಿಗಳು, ನಿವೃತ್ತ ನಾಗರಿಕ ಸೇವಕರು, ವಕೀಲರು ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರನ್ನೂ ಆಹ್ವಾನಿಸಲಾಗಿದೆ.

ವಾಸ್ತವವಾಗಿ, ಜನವರಿ ಅಂತ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಕೂಡ ನಡೆಯಲಿದೆ. ಈ ಸರಣಿಗೆ ಇಂಗ್ಲೆಂಡ್ ತಂಡ ಭಾರತದಲ್ಲಿ ಇರಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಕೂಡ ಸಿದ್ಧತೆಯಲ್ಲಿ ನಿರತವಾಗಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್‍ನಲ್ಲಿ ಆರಂಭವಾಗಲಿದೆ. ಹೀಗಿರುವಾಗ ಕೊಹ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

RELATED ARTICLES

Latest News