Friday, October 11, 2024
Homeರಾಷ್ಟ್ರೀಯ | Nationalಗುಜರಾತ್‌ನ ಸೋಮನಾಥ ದೇವಾಲಯದ ಸುತ್ತ ಅತಿಕ್ರಮಣವಾಗಿದ್ದ 9 ಮಸೀದಿ ಮತ್ತು ದರ್ಗಾಗಳು ತೆರವು

ಗುಜರಾತ್‌ನ ಸೋಮನಾಥ ದೇವಾಲಯದ ಸುತ್ತ ಅತಿಕ್ರಮಣವಾಗಿದ್ದ 9 ಮಸೀದಿ ಮತ್ತು ದರ್ಗಾಗಳು ತೆರವು

9 religious structures on government land razed near Somnath temple

ಗಾಂಧೀನಗರ, ಸೆ.29– ಗುಜರಾತ್‌ನ ಸೋಮನಾಥ ದೇವಾಲಯದ ಸುತ್ತ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದ್ದು, 9 ಮಸೀದಿ ಮತ್ತು ದರ್ಗಾ ಸೇರಿದಂತೆ 45 ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

ಸೋಮನಾಥ ದೇವಾಲಯದ ಬಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವಾಗಿತ್ತು. ಈ ಭೂಮಿಯಲ್ಲಿ ಐವತ್ತಕ್ಕೂ ಹೆಚ್ಚು ಕಟ್ಟಡಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

1.5 ಕಿಮೀ ದೂರದಲ್ಲಿರುವ ಸೋಮನಾಥ ದೇವಾಲಯದ ಬಳಿ 103 ಎಕರೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಪೊಲೀಸ್‌‍ ಮತ್ತು ಆಡಳಿತಾತಕ ಕಾರ್ಯಾಚರಣೆಗೆ ಕಾರಣವಾಯಿತು. ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಭಾಗವಾಗಿ 45 ವಸತಿ ಕಟ್ಟಡಗಳ ಜೊತೆಗೆ ಒಂಬತ್ತು ಧಾರ್ಮಿಕ ಸ್ಥಳಗಳನ್ನು ಕೆಡವಲಾಯಿತು. ಸುಮಾರು 320 ಕೋಟಿ ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಡಿ.ಡಿ. ಸೋಮನಾಥದಲ್ಲಿನ ಅಕ್ರಮ ಒತ್ತುವರಿಯನ್ನು ತೆರವು ಮಾಡುವಂತೆ ಆಡಳಿತದಿಂದ ಬಹಳ ಹಿಂದೆಯೇ ನೋಟಿಸ್‌‍ ನೀಡಲಾಗಿತ್ತು ಎಂದು ಜಡೇಜಾ ಹೇಳಿದ್ದಾರೆ. ಆದರೆ, ಈ ಎಚ್ಚರಿಕೆಗಳ ಹೊರತಾಗಿಯೂ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಉಜ್ಜಯಿನಿ ಕಾರಿಡಾರ್‌ನಂತೆಯೇ, ಸೋಮನಾಥದಲ್ಲಿ ಹೊಸ ಕಾರಿಡಾರ್‌ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮೋದನೆಯನ್ನು ನೀಡಲಾಗಿದೆ. ಸೋಮನಾಥ ದೇವಾಲಯದ ವಿವಿಧ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ.

RELATED ARTICLES

Latest News