Sunday, July 7, 2024
Homeಅಂತಾರಾಷ್ಟ್ರೀಯಅತಿ ಉಷ್ಣಾಂಶ : ಮೆಕ್ಕಾದಲ್ಲಿ 68 ಭಾರತೀಯರೂ ಸೇರಿ 900 ದಾಟಿದ ಸಾವಿನ ಸಂಖ್ಯೆ

ಅತಿ ಉಷ್ಣಾಂಶ : ಮೆಕ್ಕಾದಲ್ಲಿ 68 ಭಾರತೀಯರೂ ಸೇರಿ 900 ದಾಟಿದ ಸಾವಿನ ಸಂಖ್ಯೆ

ಮೆಕ್ಕಾ,ಜೂ.20- ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರವಾದ ಮೆಕ್ಕಾದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿ ಉಷ್ಣಾಂಶದಿಂದ ಉಂಟಾದ ಸಾವಿನ ಸಂಖ್ಯೆ 900 ದಾಟಿದೆ.ಈಗಾಗಲೇ ಮೃತಪಟ್ಟಿರುವ 900 ಮಂದಿಯಲ್ಲಿ ಭಾರತದವರು 68 ಮಂದಿಯಿದ್ದು, ಅವರಲ್ಲಿ ಕರ್ನಾಟಕದ ರಾಯಚೂರು, ಬೆಂಗಳೂರು ಹಾಗೂ ಚಿತ್ರದುರ್ಗದ ತಲಾ ಒಬ್ಬರು ಸೇರಿದ್ದಾರೆಂದು ಮೂಲಗಳು ತಿಳಿಸಿವೆ.

ಮೆಕ್ಕಾಗಿಂತ 8 ಕಿಲೋಮೀಟರ್‌ ದೂರದ ಮೀನಾ ನಗರದಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆರ್‌.ಟಿ ನಗರದ ಕೌಸರ್‌ ರುಕ್ಸಾನ (69) ಮತ್ತು ಫ್ರೆಝರ್‌ ಟೌನ್‌ನ ಮೊಹಮದ್‌ ಇಲಿಯಾಸ್‌‍ (50) ಎಂದು ಗುರುತಿಸಲಾಗಿದೆ. ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ.

ಉಳಿದಂತೆ ಕರ್ನಾಟಕದ ಉಳಿದ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಹಜ್‌ ಕಮಿಟಿ ಕಾರ್ಯನಿರ್ವಾಹಕ ಅಧಿಕಾರಿ ಸರ್ರಾಜ್‌ ಖಾನ್‌ ಮಾಹಿತಿ ನೀಡಿದ್ದಾರೆ. ಈ ಬಾರಿ ಕರ್ನಾಟಕದಿಂದ 10,300 ಮಂದಿ ಹಜ್‌ ಯಾತ್ರೆಗೆ ತೆರಳಿದ್ದರು. ಇವರೊಂದಿಗೆ ರುಕ್ಸಾನ ಸಹ ತಮ ಕುಟುಂಬದ ಜೊತೆಗೆ ಹಜ್‌ ಯಾತ್ರೆಗೆ ತೆರಳಿದ್ದರು.

ಎಎ್‌‍ಪಿ ಸುದ್ದಿ ಸಂಸ್ಧೆಗೆ ಸೌದಿ ಅರೇಬಿಯಾದ ರಾಜತಂತ್ರಜ್ಞರೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಮೃತಪಟ್ಟವರಲ್ಲಿ ಹೆಚ್ಚಿನವರು ಈಜಿಪ್ಟ್ ದೇಶಕ್ಕೆ ಸೇರಿದವರಾಗಿದ್ದಾರೆ. ಈಗಾಗಲೇ ಮೃತಪಟ್ಟಿರುವ 900ರಷ್ಟು ಜನರಲ್ಲಿ ಸುಮಾರು 600 ಮಂದಿ ಈಜಿಪ್‌್ಟ ರಾಷ್ಟ್ರದವರೇ ಆಗಿದ್ದಾರೆ ಎಂದು ಹೇಳಿದ್ದಾರೆ. ಎಎ್‌‍ಪಿ ಕಲೆಹಾಕಿರುವ ಮಾಹಿತಿಯ ಪ್ರಕಾರ, ಸದ್ಯಕ್ಕೆ ಮೃತಪಟ್ಟವರ ಸಂಖ್ಯೆ 922 ಎಂದು ಹೇಳಲಾಗಿದೆ.

ಈಜಿಪ್‌್ಟ ಹೊರತಾಗಿ, ಜೋರ್ಡನ್‌, ಇಂಡೋನೇಷ್ಯಾ, ಇರಾನ್‌, ಸೆನೆಗಲ್‌‍, ಟ್ಯುನೇಷಿಯ ಹಾಗೂ ಇರಾಕ್‌ನ ಸ್ವಾಯತ್ತ ಪ್ರಾಂತ್ಯವಾದ ಖುರ್ದಿಸ್ತಾನ್‌ನಿಂದ ಬಂದಿರುವವರು ಸೇರಿದ್ದಾರೆ. ಇವರಲ್ಲಿ 68 ಭಾರತೀಯರೂ ಸೇರಿರುವುದಾಗಿ, ತಮ ಹೆಸರನ್ನೇಳಲು ಇಚ್ಛಿಸದ ರಾಜತಂತ್ರಜ್ಞರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಭಾರತದಿಂದ ಈ ಬಾರಿ ಮೆಕ್ಕಾಕ್ಕೆ ಹೋದವರಲ್ಲಿ ಅನೇಕರು ವಯಸ್ಸಾದವರಾಗಿದ್ದರು. ಹಾಗಾಗಿ, ಅವರಲ್ಲಿ ಕೆಲವರ ಸಾವು ಸಹಜ ಸಾವು ಆಗಿದ್ದರೆ ಉಳಿದವರು ವಾತಾವರಣದಲ್ಲಿನ ಉಷ್ಣಾಂಶ ಹಾಗೂ ಇನ್ನಿತರ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮೆಕ್ಕಾದಲ್ಲಿ ವಾರ್ಷಿಕವಾಗಿ ಐದು ದಿನಗಳ ಕಾಲ ನಡೆಯುವ ಧಾರ್ಮಿಕ ಆಚರಣೆಯನ್ನು ನೋಡಲೆಂದೇ ಪ್ರಪಂಚದ ನಾನಾ ಭಾಗಗಳಿಂದ ಮುಸ್ಲಿಮರು ಇಲ್ಲಿಗೆ ಆಗಮಿಸುತ್ತಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೋಸ್ಕರ ಹಾಗೂ ಅವರ ಸುರಕ್ಷತೆಗೋಸ್ಕರ ಸೌದಿ ಅರೇಬಿಯಾ ಸರಕಾರ ಸಾವಿರಾರು ಕೋಟಿ ರೂ.ಗಳನ್ನು ವಾರ್ಷಿಕವಾಗಿ ಖರ್ಚು ಮಾಡುತ್ತದೆ. ಆದರೂ, ನಿರೀಕ್ಷೆಗಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಸ್ಥಳೀಯಾಡಳಿತ ಕಲ್ಪಿಸಿರುವ ಎಲ್ಲಾ ಸೌಕರ್ಯಗಳು, ಸುರಕ್ಷತಾ ಸೌಲಭ್ಯಗಳು ಸಾಕಾಗುವುದಿಲ್ಲ. ಹಾಗಾಗಿಯೇ, ಇಂಥ ಸಾವು- ನೋವುಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಮರಣ ಸಂಖ್ಯೆ ಹೆಚ್ಚಿದ್ದು ಏಕೆ? :
ಪ್ರತಿ ವರ್ಷದಂತೆ ಈ ವರ್ಷವೂ ಲಕ್ಷಾಂತರ ಮಂದಿ ಯಾತ್ರಿಕರು ಹಜ್‌ ಯಾತ್ರೆ ಹಮಿಕೊಂಡಿದ್ದರು. ವಿವಿಧ ದೇಶಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಬಂದಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 645 ಮಂದಿ ಯಾತ್ರಿಕರು ಮೃತಪಟ್ಟಿದ್ದು, 2700ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೋಂದಣಿ ಮಾಡಿಕೊಳ್ಳದೇ ಹಜ್‌ ಯಾತ್ರೆಗೆ ಬರುವವರಿಗೆ ಸೂಕ್ತ ಎಸಿ ಸೌಲಭ್ಯ ಇರುವುದಿಲ್ಲ, ಸೂರು ಸಿಗುವುದಿಲ್ಲ. ಈ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗ ಸೌದಿ ಅರೇಬಿಯಾದಲ್ಲಿ ಬೇಸಿಗೆ ಕಾಲವಿದ್ದು, ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮೆಕ್ಕಾದಲ್ಲಿ ವಾರ್ಷಿಕ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವು. ಈ ಬಾರಿ ಅಲ್ಲಿಗೆ 1.8 ಮಿಲಿಯನ್‌ ಭಕ್ತರು ಆಗಮಿಸಿದ್ದರೆಂದು ಹೇಳಲಾಗಿದೆ. ಅವರಲ್ಲಿ ಬಹುತೇಕರು ಭಾರತ ಸೇರಿದಂತೆ ಹೊರ ದೇಶಗಳಿಂದಲೇ ಬಂದವರಾಗಿದ್ದಾರೆ.

RELATED ARTICLES

Latest News