ಶ್ರೀನಗರ, ಜ.4- ಸ್ವಾತಂತ್ರ್ಯ ಭಾರತದ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಕೆರಾನ್ ವಲಯದ ಗಡಿ ನಿಯಂತ್ರಣ ರೇಖೆಯ ಹಳ್ಳಿಗಳಿಗೆ ಬುಧವಾರ ಮೊದಲ ಬಾರಿಗೆ ವಿದ್ಯುತ್ ನೀಡಲಾಗಿದೆ.
ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಕುಪ್ವಾರ ಜಿಲ್ಲೆಯ ಕೆರಾನ್ ಪ್ರದೇಶದ ಕುಂಡಿಯಾನ್ ಮತ್ತು ಪತ್ರೂ
ಗ್ರಾಮಗಳ ನಿವಾಸಿಗಳಿಗೆ 75 ವರ್ಷಗಳಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳು ಬೆಳಗಿದ್ದು, ಇದರಿಂದ ಜನರು ಸಂಭ್ರಮಿಸಿದ್ದಾರೆ.
ಸಮೃದ್ಧ್ ಸೀಮಾ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಎರಡು 250-ಕೆವಿ ಉಪ-ಕೇಂದ್ರಗಳನ್ನು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಅವರು ಉದ್ಘಾಟಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರ ಸರ್ಕಾರಕ್ಕೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ : ಸಚಿವ ರಾಜಣ್ಣ
ವಿದ್ಯುತ್ ದೀಪಗಳು ಅವರ ಮನೆಗಳನ್ನು ಬೆಳಗಿಸಿದಂತೆ ಎಲ್ಲರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ನಮ್ಮ ಹಳ್ಳಿಗೂ ವಿದ್ಯುತ್ ಸಂಪರ್ಕ ಸಿಗುತ್ತದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಾವು ಚಕಿತಗೊಂಡಿದ್ದೇವು. ಸದಾ ಗುಂಡಿನ ಸದ್ದು ಕೇಳುತ್ತ ಬಹುತೇಕ ಸಮಯ ಮಂದ ಬೆಳಕಿನಲ್ಲಿ ನಾವು ವಾಸಿಸುತ್ತಿದ್ದೇವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮಗೂ ನಾಗರಿಕ ಸೇವೆ ಸಿಕ್ಕ ಖುಷಿ ಉಂಟಾಗಿ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕಾಶ್ಮೀರ ವಿದ್ಯುತ್ ಸರಬರಾಜು ಮಂಡಳಿ (ಕೆಪಿಡಿಸಿಎಲ್) ಎಲೆಕ್ಟ್ರಿಕ್ ವಿಭಾಗ, ಕುಪ್ವಾರದಿಂದ ಎರಡು ತಿಂಗಳಲ್ಲಿ ವಿದ್ಯುದ್ದೀಕರಣ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.