Homeರಾಜ್ಯರಾಜ್ಯದಲ್ಲಿ 3 ವರ್ಷಗಳಲ್ಲಿ ಸಿಎಂ ಸೇರಿದಂತೆ ವಿಐಪಿಗಳ ವಾಯುಯಾನಕ್ಕೆ 62 ಕೋಟಿ ರೂ. ವೆಚ್ಚ

ರಾಜ್ಯದಲ್ಲಿ 3 ವರ್ಷಗಳಲ್ಲಿ ಸಿಎಂ ಸೇರಿದಂತೆ ವಿಐಪಿಗಳ ವಾಯುಯಾನಕ್ಕೆ 62 ಕೋಟಿ ರೂ. ವೆಚ್ಚ

Rs 62 crore spent on air travel for VIPs including CM in 3 years

ಬೆಂಗಳೂರು,ಮೇ 18- ಸಿಎಂ ಸಿದ್ದರಾಮಯ್ಯ ಹಾಗೂ ಅತಿ ಗಣ್ಯ ವ್ಯಕ್ತಿಗಳು ರಾಜ್ಯದ ವಿವಿಧ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡಲು ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್‌ ಬಳಕೆ ಮಾಡುತ್ತಾರೆ. ಕಳೆದ 3 ವರ್ಷಗಳಲ್ಲಿ ಇದಕ್ಕಾಗಿ ಬರೋಬ್ಬರಿ 62 ಕೋಟಿ ಖರ್ಚು ಮಾಡಲಾಗಿದೆ. ಬೆಂಗಳೂರು ಮೂಲದ ಖಾಸಗಿ ವೈಮಾನಿಕ ಸಂಸ್ಥೆ ರಾಜ್ಯ ಸರ್ಕಾರಕ್ಕೆ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್‌ ಸೇವೆಯನ್ನು ನೀಡುತ್ತಾ ಬಂದಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರ ಪ್ರಯಾಣಕ್ಕಾಗಿ ವಿಶೇಷ ವಿಮಾನ ಮತ್ತು ಹೆಲಿಕಾಪ್ಟರ್‌ ಬಳಕೆ ಮಾಡಲಾಗಿದೆ. 2023-24 ರಲ್ಲಿ 48 ಬಾರಿ, 2024-25 ರಲ್ಲಿ 85 ಬಾರಿ ಹಾಗೂ 2025-26 ರಲ್ಲಿ 106 ಬಾರಿ ಈ ಸೇವೆಯನ್ನು ಬಳಕೆ ಮಾಡಲಾಗಿದೆ. 2023 – 24 ರಲ್ಲಿ 12 ಕೋಟಿ ವೆಚ್ಚವಾದರೆ, 2024-25 ರಲ್ಲಿ 21 ಕೋಟಿ ಹಾಗೂ 2025-26 ರಲ್ಲಿ 29 ಕೋಟಿಯಾಗಿದೆ.

4ಜಿ ವಿನಾಯಿತಿ :
ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ಪ್ರವಾಸಕ್ಕೆ ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್‌ ಗಳ ಸೇವೆಯನ್ನು ಪಡೆದುಕೊಳ್ಳಲು ಅವಕಾಶ ಇದೆ. ಈ ಸೇವೆಯನ್ನು ಪಡೆದುಕೊಳ್ಳಲು ಕರ್ನಾಟಕ ಪಾರದರ್ಶಕ ಅಧಿನಿಯಮದಡಿಯಲ್ಲಿ 4 (ಜಿ) ವಿನಾಯಿತಿ ನೀಡಲಾಗಿದೆ.ಈ ವಿನಾಯಿತಿ ಅನ್ವಯ ಕರ್ನಾಟಕದಲ್ಲಿ ಅತಿ ಗಣ್ಯರ ಪ್ರವಾಸಕ್ಕಾಗಿ ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್‌ ಸೇವೆಗಳನ್ನು ಖಾಸಗಿ ಸಂಸ್ಥೆಯಿಂದ ಸರ್ಕಾರ ಪಡೆದುಕೊಳ್ಳುತ್ತಿದೆ.

ಸಿಎಂ ಸಿದ್ದರಾಮಯ್ಯ ಅವರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡುವಾಗ ಹೆಲಿಕಾಪ್ಟರ್‌ ಸೇವೆಯನ್ನು ಪಡೆದುಕೊಂಡಿದ್ದಾರೆ. ಇನ್ನು ದೆಹಲಿ, ಗೋವಾ ಸೇರಿದಂತೆ ಕೆಲವು ರಾಜ್ಯಗಳಿಗೆ ಪ್ರವಾಸ ಮಾಡುವ ಸಂದರ್ಭದಲ್ಲಿ ವಿಶೇಷ ವಿಮಾನ ಸೇವೆಯನ್ನು ಪಡೆದುಕೊಂಡಿದ್ದಾರೆ.

ಯಾವ ವೈಮಾನಿಕ ಸೇವೆ ಬಳಕೆ :
ರಾಜ್ಯ ಸರ್ಕಾರ ಜಿಲ್ಲೆ ಹಾಗೂ ಇತರ ರಾಜ್ಯಗಳ ಪ್ರಯಾಣಕ್ಕೆ ಜಿಎಂಪಿ ಏರ್‌ ಚಾರ್ಟರ್ಸ್‌ ಹೆಲಿಕಾಪ್ಟರ್‌ ಸೇವೆಯನ್ನು ಬಳಕೆ ಮಾಡುತ್ತಿದೆ. 2023 ರಿಂದ 2026ರವರೆಗೆ ಇದೇ ಸಂಸ್ಥೆಯ ಹೆಲಿಕಾಪ್ಟರ್‌ ಹಾಗೂ ಕಿರು ವಿಮಾನ ಸೇವೆಯನ್ನು ಬಳಕೆ ಮಾಡಿದೆ. ಜಿಎಂಪಿ ಏರ್‌ ಚಾರ್ಟರ್ಸ್‌ ಬೆಂಗಳೂರು ಮೂಲದ ಸಂಸ್ಥೆಯಾಗಿದೆ.

ಈ ಸಂಸ್ಥೆಯು ವಿಮಾನ ಚಾರ್ಟರ್‌, ಹೆಲಿಕಾಪ್ಟರ್‌ ಬಾಡಿಗೆ ಮತ್ತು ಸರಕು ಸಾಗಣೆ ವ್ಯವಸ್ಥೆಗಳಲ್ಲಿ ಪರಿಣತಿ ಹೊಂದಿದೆ. 2017 ರಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಕರ್ನಾಟಕದೊಳಗೆ ವಿಐಪಿ ಸಂಚಾರಕ್ಕೆ ಅಗತ್ಯವಿರುವ ಹೆಲಿಕಾಪ್ಟರ್‌ ಹಾಗೂ ವಾಯುಯಾನ ಸೌಲಭ್ಯವನ್ನು ಒದಗಿಸುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳ ವಿಮಾನ ಪ್ರಯಾಣದ ಜವಾಬ್ದಾರಿಯನ್ನು ಈ ಸಂಸ್ಥೆ ನಿರ್ವಹಣೆ ಮಾಡುತ್ತಿದೆ.

ವರದಿಗಳ ಪ್ರಕಾರ, ಮೇ 2023 ರಿಂದ ನವೆಂಬರ್‌ 2025 ರ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಒಟ್ಟು 181 ಚಾರ್ಟರ್ಡ್‌ ವಿಮಾನ/ಹೆಲಿಕಾಪ್ಟರ್‌ ಪ್ರಯಾಣಗಳಿಗೆ ಈ ಸಂಸ್ಥೆ ವ್ಯವಸ್ಥೆಯನ್ನು ಕಲ್ಪಿಸಿದೆ.

ವರ್ಷವಾರು ವಿವರ ಹೀಗಿದೆ :
2023-24 : 12 ಕೋಟಿ, 23 ಲಕ್ಷ, 44 ಸಾವಿರದ, 365
2024-25: 21 ಕೋಟಿ, 11 ಲಕ್ಷ, 38 ಸಾವಿರದ, 784
2025-26: 29 ಕೋಟಿ, 47 ಲಕ್ಷ, 45 ಸಾವಿರದ, 179

RELATED ARTICLES

Latest News