Homeರಾಷ್ಟ್ರೀಯಎಎಪಿ ನಾಯಕನ ಮನೆ ಮೇಲೆ ಇಡಿ ದಾಳಿ

ಎಎಪಿ ನಾಯಕನ ಮನೆ ಮೇಲೆ ಇಡಿ ದಾಳಿ

ED conducts raids at premises linked to AAP leader Deepak Singla in Delhi, Goa

ನವದೆಹಲಿ, ಮೇ 18 (ಪಿಟಿಐ) ಬ್ಯಾಂಕ್‌ ಸಾಲ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ದೆಹಲಿ ರಾಜಕಾರಣಿ ದೀಪಕ್‌ ಸಿಂಗ್ಲಾ ಮತ್ತು ಇತರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ.

ಸಿಂಗ್ಲಾ ಅವರ ದೆಹಲಿ ಮತ್ತು ಗೋವಾದಲ್ಲಿರುವ ನಿವಾಸಗಳು ಮತ್ತಿತರ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.ಸಿಂಗ್ಲಾ ವಿಶ್ವಾಸ್‌‍ ನಗರ ವಿಧಾನಸಭಾ ಸ್ಥಾನದಿಂದ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿದ್ದರು. ತನಿಖೆಯ ಭಾಗವಾಗಿ 2024 ರಲ್ಲಿಯೂ ಅವರ ಮೇಲೆ ಇಡಿ ದಾಳಿ ನಡೆಸಲಾಗಿತ್ತು.

ರಾಜಕಾರಣಿಯನ್ನು ತಕ್ಷಣ ಸಂಪರ್ಕಿಸಲು ಸಾಧ್ಯವಾಗಲಿಲ್ಲ.ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಹೂಡಿಕೆ ವಂಚನೆಯ ಮೂಲಕ ಕೆಲವು ವ್ಯಕ್ತಿಗಳಿಗೆ 180 ಕೋಟಿ ರೂ.ಗಳಷ್ಟು ವಂಚನೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಸುತ್ತಿದೆ.
ದೆಹಲಿಯ ಸುಭಾಷ್‌ ನಗರದ ಬಾಬಾಜಿ ಫೈನಾನ್‌್ಸ ಗ್ರೂಪ್‌ನ ರಾಮ್‌ ಸಿಂಗ್‌ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದ ಮೇಲೆ ತನಿಖೆಯ ಭಾಗವಾಗಿ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News