ಅಮೃತಸರ,ಜ.5- ಪಾಕಿಸ್ತಾನ ಮೂಲದ ಕಳ್ಳಸಾಗಣೆದಾರರು ನಡೆಸುತ್ತಿದ್ದ ಗಡಿಯಾಚೆಗಿನ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ದಂಧೆಯನ್ನು ಅಮೃತಸರದಲ್ಲಿ ಭೇದಿಸಲಾಗಿದ್ದು, 2 ಕೆಜಿ ಐಸ್ ಡ್ರಗ್ (ಮೆಥಾಂಫೆಟಮೈನ್) ವಶಪಡಿಸಿಕೊಂಡು ಪ್ರಮುಖ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಕಳ್ಳಸಾಗಾಣಿಕೆದಾರನನ್ನು ಅಮೃತಸರದ ಗಗ್ಗರ್ಮಲ್ ಗ್ರಾಮದ ನಿವಾಸಿ ಸಿಮ್ರಂಜಿತ್ ಸಿಂಗ್ ಅಲಿಯಾಸ್ ಸಿಮರ್ ಮಾನ್ ಎಂದು ಗುರುತಿಸಲಾಗಿದೆ. ಐಸ್ ಡ್ರಗ್ಸ್‍ನ ರವಾನೆಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ, ಪೊಲೀಸ್ ತಂಡಗಳು ಆತನ ಬಳಿಯಿಂದ ಐದು ಜೀವಂತ ಕಾಟ್ರಿಡ್ಜ್‍ಗಳ ಜೊತೆಗೆ ಹೆಚ್ಚು ಅತ್ಯಾಧುನಿಕ 30-ಬೋರ್ ಚೈನೀಸ್ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿವೆ ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೀನಾಕ್ಕಿಂತ ಭಾರತದ ಹೂಡಿಕೆ ಗಮನಾರ್ಹ : ವಿಶ್ವಸಂಸ್ಥೆ
ಬಂಧಿತ ಆರೋಪಿ ಪಾಕಿಸ್ತಾನ ಮೂಲದ ಸ್ಮಗ್ಲರ್‍ಗಳಾದ ಪಠಾಣ್ ಮತ್ತು ಅಮೇರ್ ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಅವರಿಗೆ ಡ್ರೋನ್ ಮೂಲಕ ಐಸ್ ಡ್ರಗಸ್ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಅಮೃತಸರದ ಪೊಲೀಸ್ ಕಮಿಷನರ್ ಗುರ್‍ಪ್ರೀತ್ ಸಿಂಗ್ ಭುಲ್ಲರ್ ಅವರು , ರಾಜ್ಯದಲ್ಲಿ ಪಾಕ್ ಮೂಲದ ಕಳ್ಳಸಾಗಾಣಿಕೆದಾರರಿಂದ ಹೆಚ್ಚಿನ ಪ್ರಮಾಣದ ಐಸ್ ಡ್ರಗ್ ಮತ್ತು ಶಸ್ತ್ರಾಸ್ತ್ರಗಳ ಸಾಗಣೆಯ ಪ್ರಯತ್ನದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ನಂತರ, ಪೊಲೀಸ್ ತಂಡಗಳು ಚೆಹರ್ತಾದಲ್ಲಿ ವ್ಯಾಪಕ ಕಾರ್ಯಾಚರಣೆಯನ್ನು ನಡೆಸಿವೆ ಎಂದು ತಿಳಿಸಿದ್ದಾರೆ.