Friday, November 22, 2024
Homeರಾಜ್ಯಡಿಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣದ ಕೈದಿಗಳ ಬಿಡುಗಡೆಗೆ ಡಿಸಿಎಂ ಬಳಿ ಮನವಿ

ಡಿಜೆ ಹಳ್ಳಿ-ಕೆಜೆ ಹಳ್ಳಿ ಪ್ರಕರಣದ ಕೈದಿಗಳ ಬಿಡುಗಡೆಗೆ ಡಿಸಿಎಂ ಬಳಿ ಮನವಿ

ಬೆಂಗಳೂರು,ಜ.6- ಡಿ.ಜೆ.ಹಳ್ಳಿ/ಕೆ.ಜೆ.ಹಳ್ಳಿ ಗುಂಪು ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ 37 ಮಂದಿಯನ್ನು ಬಿಡುಗಡೆ ಮಾಡಿಸಬೇಕು ಎಂದು ಕುಟುಂಬದ ಸದಸ್ಯರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ರವರಲ್ಲಿ ಮನವಿ ಮಾಡಿದ್ದಾರೆ. ಶಿವಾಜಿನಗರದ ಆರ್‍ಬಿಎಎನ್‍ಎಂಎನ್‍ಎಂಎಸ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಜನತಾದರ್ಶನದಲ್ಲಿ ಭಾಗವಹಿಸಿದ್ದ ಕುಟುಂಬದ ಸದಸ್ಯರು ಲಿಖಿತ ಮನವಿ ಸಲ್ಲಿಸಿದ್ದಾರೆ.

37 ಮಂದಿ ಆರೋಪಿಗಳ ಕುಟುಂಬ ಸದಸ್ಯರ ಮಹಿಳೆಯರು ಈ ಸಂದರ್ಭದಲ್ಲಿ ಮಾತನಾಡಿ, ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ನಮ್ಮ ಮನೆಯವರು ಯಾವುದೇ ಗಲಾಟೆಯಲ್ಲಿ ಭಾಗವಹಿಸಿಲ್ಲ. ಗಲಭೆ ನಡೆಯುತ್ತಿದ್ದುದನ್ನು ನೋಡುತ್ತಾ ನಿಂತಿದ್ದರು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಯುಎಪಿಎಯಂತಹ ಪ್ರಬಲ ಕಾನೂನು ಹಾಕಲಾಗಿದೆ ಎಂದು ಅಳಲು ತೋಡಿಕೊಂಡರು.

ಕಳೆದ ಮೂರೂವರೆ ವರ್ಷಗಳಿಂದಲೂ ದುಡಿಯುವ ಗಂಡಸರನ್ನು ಜೈಲಿನಲ್ಲಿಟ್ಟಿದ್ದಾರೆ. ಇದರಿಂದ ಕುಟುಂಬಗಳು ಅನಾಥವಾಗಿವೆ. ಕಾಂಗ್ರೆಸ್ ವಿಧಾನಸಭೆ ಚುನಾವಣೆಗೂ ಮುನ್ನ ಕೆ.ಜೆ.ಹಳ್ಳಿ/ಡಿ.ಜೆ.ಹಳ್ಳಿ ಗಲಭೆಯಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡುವಂತೆ ಭರವಸೆ ನೀಡಿತ್ತು. ಸರ್ಕಾರ ಬಂದು 7 ತಿಂಗಳಾಗಿವೆ.

ರಾಜಕೀಯದ ಲಾಭಕ್ಕಾಗಿ ಬಿಜೆಪಿ ಹಿಂದುತ್ವದ ಚರ್ಚೆ ಮಾಡುತ್ತಿದೆ : ಸಚಿವ ಸಂತೋಷ್ ಲಾಡ್

ಈವರೆಗೂ ಕ್ರಮ ಕೈಗೊಂಡಿಲ್ಲ. ಶಾಸಕರು ಸೇರಿದಂತೆ ಹಲವರಿಗೆ ಮನವಿ ನೀಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೂ ಮುನ್ನ ಮಹಿಳೆಯರು ಮನವಿಗಳನ್ನು ನೋಂದಣಿ ಮಾಡಿಸಿ ನಂತರ ಡಿಸಿಎಂಗೆ ಅರ್ಜಿ ಸಲ್ಲಿಸಿದರು.

RELATED ARTICLES

Latest News