Friday, December 13, 2024
Homeರಾಷ್ಟ್ರೀಯ | Nationalಅನಾರೋಗ್ಯದ ನಡುವೆಯೂ ಜನಸ್ಪಂದನದಲ್ಲಿ ಭಾಗವಹಿಸಿ ಗಮನ ಸೆಳೆದ ಡಿಸಿಎಂ

ಅನಾರೋಗ್ಯದ ನಡುವೆಯೂ ಜನಸ್ಪಂದನದಲ್ಲಿ ಭಾಗವಹಿಸಿ ಗಮನ ಸೆಳೆದ ಡಿಸಿಎಂ

ಬೆಂಗಳೂರು,ಜ.6- ಅನಾರೋಗ್ಯದ ನಡುವೆಯೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು. ಕೈಗೆ ಇಂಜೆಕ್ಷನ್ ಹಾಕಿಕೊಳ್ಳುವ ಬ್ಯಾಂಡೇಜ್‍ನೊಂದಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‍ರವರು ಅನಾರೋಗ್ಯವನ್ನು ಮರೆತು ಜನರ ಸಮಸ್ಯೆ ಕೇಳಲು ಮುಂದಾದರು.

ಸಂಪೂರ್ಣ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದರೂ ಅದನ್ನು ಕಡೆಗಣಿಸಿ ಉಪಮುಖ್ಯಮಂತ್ರಿಯವರು ನಿಮ್ಮ ಕಷ್ಟ ಕೇಳಲು ಆಗಮಿಸಿದ್ದಾರೆ. ಅವರ ಬದ್ಧತೆ ಅನುಕರಣನೀಯ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೊಂಡಾಡಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಿನ್ನೆಯಿಂದಲೂ ನನ್ನ ಆರೋಗ್ಯದಲ್ಲಿ ಏರುಪೇರಾಗಿದೆ. ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದಾರೆ. ಆದರೆ ನಾನೇ ಸಮಯ ನೀಡಿ ಈ ಕಾರ್ಯಕ್ರಮ ನಿಗದಿ ಮಾಡಿದ್ದೇನೆ. ಗೈರುಹಾಜರಾದರೆ ಅದು ಸರಿಯಲ್ಲ ಎಂಬ ಕಾರಣಕ್ಕಾಗಿ ಬಂದಿದ್ದೇನೆ ಎಂದರು.

ರಾಜಕೀಯದ ಲಾಭಕ್ಕಾಗಿ ಬಿಜೆಪಿ ಹಿಂದುತ್ವದ ಚರ್ಚೆ ಮಾಡುತ್ತಿದೆ : ಸಚಿವ ಸಂತೋಷ್ ಲಾಡ್

ಈವರೆಗೂ ಬೆಂಗಳೂರಿನಲ್ಲಿ 6 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 7 ಸಾವಿರ ಜನ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿ ಮಾಡಿದ್ದಾರೆ. ಸಂಜೆ 6 ಗಂಟೆಯವರೆಗೂ ಕುಳಿತು ಜನರ ಸಮಸ್ಯೆ ಆಲಿಸಿದ್ದೇನೆ. ಇಂದು ಅನಾರೋಗ್ಯ ಇರುವುದರಿಂದ ಹೆಚ್ಚು ಸಮಯ ಇಲ್ಲಿರಲು ಸಾಧ್ಯವಿಲ್ಲ. ನಾನೇ ನಿಮ್ಮ ಬಳಿ ಬಂದು ಅರ್ಜಿ ಪಡೆದುಕೊಳ್ಳುತ್ತೇನೆ. ಒಂದು ವೇಳೆ ನನ್ನನ್ನು ಖುದ್ದು ಭೇಟಿ ಮಾಡಿ ದೂರು ಹೇಳಿಕೊಳ್ಳಬೇಕು ಎನ್ನುವವರು ಇಂದು ಸಾಧ್ಯವಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಇತರ ಕ್ಷೇತ್ರಗಳಲ್ಲಿ ನಡೆಯುವ ಜನಸ್ಪಂದನದಲ್ಲೂ ಭಾಗವಹಿಸಿ ಭೇಟಿ ಮಾಡಬಹುದು ಎಂದರು.

ಆದರೆ ಇಲ್ಲಿ ಅರ್ಜಿಗಳನ್ನು ನೋಂದಣಿ ಮಾಡಿಸಿಕೊಂಡರೆ ನನಗೆ ಅರ್ಜಿ ನೀಡಿದಂತೆಯೇ ಲೆಕ್ಕ. ನಿಮ್ಮ ಸಮಸ್ಯೆಗೆ ಸ್ಪಂದನೆ ದೊರೆಯುತ್ತದೆ. ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News