ಜೈಪುರ, ಜ.8: ರಾಜಸ್ಥಾನ ರಾಜ್ಯದ ಕಾರನ್‍ಪುರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಸಚಿವ ಸುರೇಂದ್ರ ಪಾಲ್ ಸಿಂಗ್ ಅವರನ್ನು ಕಾಂಗ್ರೆಸ್‍ನ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನಾರ್ ಮಣಿಸಿದ್ದಾರೆ. ಒಟ್ಟು 18 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಸುಮಾರು 11,283 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ಜಯ ಸಾಧಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ವಿಧಾನ ಸಭೆ ಚುನಾವಣೆಯಲ್ಲಿ 199 ಸ್ಥಾನಗಳ ಪೈಕಿ 115 ಸ್ಥಾನಗಳನ್ನು ಗೆದ್ದು ಬಿಜೆಪಿ ಜಯಗಳಿಸಿ ಅಧಿಕಾರ ಚುಕ್ಕಾಣಿ ಹಿಡಿದಿತು.
ಜನವರಿ 5ರಂದು ಮತದಾನ ನಡೆದಿತು ಸುಮಾರು 1.85ಲಕ್ಷ ಜನ ಮತಚಲಾಯಿಸಿದ್ದರು ಇಂದು ಮತ ಎಣಿಕೆ ನಡೆಯಿತು ಬಿಜೆಪಿ ಸಚಿವ ಸುರೇಂದ್ರ ಪಾಲ್ ಸಿಂಗ್ 84ಸಾವಿರಕ್ಕೂ ಹೆಚ್ಚು ಮತ ಗಳಿಸಿದರೆ ರೂಪಿಂದರ್ ಸಿಂಗ್ ಕೂನರ್95 ಸಾವಿರಕ್ಕೂ ಹೆಚ್ಚು ಮತ ಗಳಿಸಿ ಗೆಲುವು ಸದಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು ಕೂನಾರ್ ಅವರ ಗೆಲುವಿಗೆ ಮುಂಚಿತವಾಗಿ ಅಭಿನಂದಿಸಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ, ಸಿಂಗ್ ಅವರು ಸಚಿವರಾಗಿದ್ದು ಶಾಸನ ಸಭೆಗೆ ಆಯ್ಕೆಯಾಗಲು ಆರು ತಿಂಗಳುಗಳಿವೆ. ಕೂನರ್ ಗೆಲುವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್‍ನಲ್ಲಿ ಪೋಸ್ಟ್‍ನಲ್ಲಿ,ಅಭಿನಂದಿಸಿ ಕರಣಪುರದ ಜನರು ಬಿಜೆಪಿಯ ದುರಹಂಕಾರವನ್ನು ಮುರಿದಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ನಿಧನದ ಕಾರಣ ಕರಣ್‍ಪುರ ಚುನಾವಣೆಯನ್ನು ಮುಂದೂಡಲಾಗಿದೆ. ನಂತರ ಕಾಂಗ್ರೆಸ್ ಅವರ ಪುತ್ರ ರೂಪಿಂದರ್ ಸಿಂಗ್ ಕೂನರ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿತು.