ತರೀಕೆರೆ, ಜ. 10 – ಜನವರಿ 1 ರಂದು ತಾಲೂಕಿನ ಗೇರಮರಡಿ ಗ್ರಾಮದಲ್ಲಿ ದಲಿತ ಯುವಕ ಮಾರುತಿ ಮೇಲೆ ನಡೆದ ಅಸ್ಪೃಶ್ಯತೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ರಾಜ್ಯ ಮುಖಂಡರು ಮತ್ತು ಸ್ಥಳೀಯ ದಲಿತ ಮುಖಂಡರು ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಗೇರಮರಡಿ ಗ್ರಾಮದ ಶ್ರೀ ಕಂಬದ ರಂಗನಾಥಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶ ಮಾಡಿ, ಪೂಜೆ ಸಲ್ಲಿಸಿದರು.
ಉಪವಿಭಾಗಾಕಾರಿ, ತಹಸೀಲ್ದಾರ್, ಪೊಲೀಸ್ ಅಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಗೇರಮರಡಿ ಗ್ರಾಮ ಪ್ರವೇಶಿಸಿದ ಮುಖಂಡರು, ದೇವಸ್ಥಾನ ಪ್ರವೇಶಿಸಲು ಮುಂದಾದರು.ದೇವಸ್ಥಾನದ ಬಾಗಿಲ ಬೀಗದ ಕೀ ದೇವಸ್ಥಾನದ ಪೂಜಾರಿ ಬಳಿಇದೆ. ಅವರು ಊರಲ್ಲಿ ಇಲ್ಲ ಎಂಬ ಮಾಹಿತಿ ಬರುತ್ತಿದ್ದಂತೆ ತಾಲೂಕು ಆಡಳಿತ ಬೀಗ ತೆಗೆಸಿ ಒಳ ಕಳುಹಿಸಲು ನಿರ್ಧರಿಸಿತು.
ಸಂವಿಧಾನ ಬೋಧನೆ: ಬೀಗ ಒಡೆದು ದೇವಸ್ಥಾನದ ಒಳಗೆ ಪ್ರವೇಶಿಸಿದ ಮುಖಂಡರು, ಹಲ್ಲೆಗೊಳಗಾಗಿದ್ದ ಮಾರುತಿ ಕೈಯಲ್ಲಿ ದೇವರಿಗೆ ಪೂಜೆ ಮಾಡಿಸಿದರು. ನಂತರ ಮುಖಂಡರು ದೇವಸ್ಥಾನದ ಮುಂದೆ ಸಂವಿಧಾನದ ಪೀಠಿಕೆ ಬೋಸಲಾಯಿತು.ಸಂವಿಧಾನ ಸಮಾನತೆಯ ಭಾವ ಬಿತ್ತಿದೆ. ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ನೀಡಿದೆ. ಸಂವಿಧಾನಕ್ಕೆ ಬದ್ದವಾಗಿ ಎಲ್ಲರೂ ಬದುಕಬೇಕಿದೆ. ಉಲ್ಲಂಘಿಸಿದರೆ ಅನುಭವಿಸುವ ಶಿಕ್ಷೆ ಬಗ್ಗೆ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಪಟ್ಟಣದ ಅರಮನೆ ಹೋಟೆಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಪ್ರೊ.ಹರಿರಾಮ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಮನಸ್ಸಾಕ್ಷಿ ಇಲ್ಲದ ವ್ಯಕ್ತಿತ್ವ ಇಡೀ ಮಾನವ ಕುಲಕ್ಕೆ ಮಾಡಿರುವ ಅವಮಾನವಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಟಿವಿ ನೇರ ಸಂದರ್ಶನದಲ್ಲಿ ಪ್ರತ್ಯಕ್ಷರಾದ ಬಂದೂಕುದಾರಿಗಳ ಬಂಧನ
ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಎಲ್ಲಾ ಗೊಲ್ಲರಹಟ್ಟಿಗಳಲ್ಲಿ ಅಸ್ಪಶ್ಯತೆ ಆಚರಣೆ ಜೀವಂತವಾಗಿದೆ. ಮಾದಿಗ ಸಮುದಾಯದವರು ಅವರ ಹಟ್ಟಿಯ ಒಳಗೆ ಹೋಗುವಂತಿಲ್ಲ. ಗೊಲ್ಲರ ಸಮುದಾಯದ ಚಿಂತಕರು ಗೊಲ್ಲರಹಟ್ಟಿಗಳಿಗೆ ಹೋಗಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಮೂಢನಂಬಿಕೆ ತೊಲಗಲಿ:
ವಕೀಲ ಕೆ.ಚಂದ್ರಪ್ಪ ಮಾತನಾಡಿ, ಎಲ್ಲಾ ಕಡೆ ಜಾತೀಯತೆ ಜೀವಂತವಾಗಿದೆ. ಗೊಲ್ಲರಹಟ್ಟಿಗಳಲ್ಲಿ ಕಠೋರ ಮೌಢ್ಯ ಆವರಿಸಿದ್ದು, ಮೂಢನಂಬಿಕೆ ಮೇಲೆ ಬದುಕು ನಡೆಸುತ್ತಿದ್ದಾರೆ. ಇದು ತೊಲಗಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಡಾ.ಕೋದಂಡರಾಮ್, ಭಾಸ್ಕರ್‍ಪ್ರಸಾದ್, ಕೆ.ಸಿ.ನಾಗರಾಜ್, ಚಳುವಳಿ ಕೆ.ಅಯ್ಯಪ್ಪ, ಶಂಕರ್‍ರಾಮಲಿಂಗಯ್ಯ, ದಲಿತ್ ರಮೇಶ್, ಟೈಗರ್ ಅರುಣ್, ಕರ್ಣನ್, ಕರಿಯಪ್ಪ ಗುಡಿಮನೆ, ಡಾ.ಶಿವಪ್ರಸಾದ್, ಓಂಕಾರಪ್ಪ, ಸುನಿಲ್ ಹಾಗೂ ಇತರರು ಇದ್ದರು.
ಎಸಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ದಲಿತ ಮುಖಂಡರಿಗೆ ಕಾನೂನುಬದ್ದವಾಗಿ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಸಮಾನತೆಯಿಂದ ಬದುಕುವ ಅವಕಾಶವನ್ನು ಸಂವಿಧಾನ ನೀಡಿದೆ ಎಂದರು.
ನಂತರ ದೇವಸ್ಥಾನದ ಬಾಗಿಲಿಗೆ ಶೀಲ್ ಮಾಡಲಾಯಿತು. ಎಸಿ, ತಹಸೀಲ್ದಾರ್, ಪೊಲೀಸ್ ಇನ್ಸ್‍ಪೆಕ್ಟರ್ ಸಹಿ ಮಾಡಿದ ಪತ್ರವನ್ನು ಬಾಗಿಲಿಗೆ ಅಂಟಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ತಹಸೀಲ್ದಾರ್ ವಿ.ಎಸ್.ರಾಜೀವ್, ಡಿವೈಎಸ್‍ಪಿ ಹಾಲಮೂರ್ತಿರಾವ್, ಪೊಲೀಸ್ ಇನ್ಸ್‍ಪೆಕ್ಟರ್ ವೀರೇಂದ್ರ ಹಾಗೂ ಇತರರು ಇದ್ದರು.