Friday, November 22, 2024
Homeರಾಷ್ಟ್ರೀಯ | Nationalಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?

ಅಯೋಧ್ಯೆ,ಜ.10- ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶ, ವಿದೇಶದಲ್ಲಿರುವ ರಾಮಭಕ್ತರಿಂದ ಇದುವರೆಗೂ 5 ಸಾವಿರ ಕೋಟಿ ರೂ. ಹೆಚ್ಚು ದೇಣಿಗೆ ಸ್ವೀಕರಿಸಲಾಗಿದೆ ಈಗಲೂ ರಾಮ ಭಕ್ತರು ನಿರಂತರವಾಗಿ ದೇಣಿಗೆ ನೀಡುತ್ತಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಇದೇ 22ರಂದು ರಾಮಲಲ್ಲಾ ಮಹಾಮಸ್ತಕಾಭಿಷೇಕ ನಡೆಯಲಿದೆ. ದೇವಾಲಯದ ಮೊದಲ ಮಹಡಿಯನ್ನು ಭಕ್ತರು ನೀಡಿದ ದೇಣಿಗೆಯ ಬಡ್ಡಿಯ ಹಣದಿಂದ ನಿರ್ಮಿಸಲಾಗಿದೆ ಎಂದು ಹೇಳಿದೆ.

ದೇಶವಷ್ಟೇ ಅಲ್ಲ, ಹೊರ ದೇಶಗಳಲ್ಲಿ ಕುಳಿತಿರುವ ರಾಮಭಕ್ತರು ಕೂಡ ರಾಮಮಂದಿರಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ನಾವು ದೇಶದ ಬಗ್ಗೆ ಮಾತನಾಡುವುದಾದರೆ, ರಾಮಮಂದಿರಕ್ಕಾಗಿ ದೇಣಿಗೆ ನೀಡಿದವರಲ್ಲಿ ಖ್ಯಾತ ಕಥೆಗಾರ ಮತ್ತು ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರ ಹೆಸರು ಅಗ್ರಸ್ಥಾನದಲ್ಲಿದೆ. ಅವರು 11.3 ಕೋಟಿ ರೂ. ನೀಡಿದ್ದಾರೆ ಎಂದು ತಿಳಿಸಿದೆ.

ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಅಯೋಧ್ಯೆಯ ರಾಮಮಂದಿರಕ್ಕೆ ಮೊದಲ ವಿದೇಶಿ ದೇಣಿಗೆ ಅಮೆರಿಕದಿಂದಲೇ ಬಂದಿದೆ. ಅಮೆರಿಕದಲ್ಲಿ ಕುಳಿತಿದ್ದ ರಾಮಭಕ್ತರೊಬ್ಬರು ಈ ಹಿಂದೆ ದೇವಸ್ಥಾನದ ಟ್ರಸ್ಟ್‍ಗೆ 11,000 ರೂ. ದೇಣಿಗೆಯಾಗಿ ಕಳುಹಿಸಿದ್ದರು. ಈ ಹಿಂದೆ ರಾಮ ಮಂದಿರಕ್ಕೆ ವಿದೇಶಿ ದೇಣಿಗೆಗೆ ಅವಕಾಶವಿರಲಿಲ್ಲ, ಆದರೆ ಗೃಹ ಸಚಿವಾಲಯದಿಂದ ಎಫ್‍ಸಿಆರ್‍ಎ ಅನುಮೋದನೆ ಪಡೆದ ನಂತರ ಈಗ ವಿದೇಶದಲ್ಲಿರುವ ರಾಮಭಕ್ತರಿಗೆ ಮಂದಿರ ನಿರ್ಮಾಣದಲ್ಲಿ ಸಹಕರಿಸುವುದು ಸುಲಭವಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ರಾಮ ಮಂದಿರ ನಿರ್ಮಾಣಕ್ಕಾಗಿ ಇದುವರೆಗೆ ಸುಮಾರು 18 ಕೋಟಿ ರಾಮಭಕ್ತರು ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜÁಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಖಾತೆಗಳಲ್ಲಿ ಸುಮಾರು 3,200 ಕೋಟಿ ರೂ.ಗಳ ಸಮರ್ಪಣಾ ನಿಯನ್ನು ಜಮೆ ಮಾಡಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.

RELATED ARTICLES

Latest News