Wednesday, October 16, 2024
Homeರಾಷ್ಟ್ರೀಯ | Nationalಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ನವದೆಹಲಿ, ಜ.10- ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ ಹೆಚ್ಚಳ) ಮತ್ತು ಮನೆ ಬಾಡಿಗೆ ಭತ್ಯೆ (ಎಚ್‍ಆರ್‍ಎ)ಯನ್ನು ಹೆಚ್ಚಲಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ತುಟ್ಟಿ ಭತ್ಯೆಯನ್ನು ಶೇ.46ರ ದರದಲ್ಲಿ ಪಡೆಯುತ್ತಿದ್ದಾರೆ. ಕೇಂದ್ರವು ಡಿಎಯನ್ನು ಶೇ.4ರಷ್ಟು ಹೆಚ್ಚಿಸಬಹುದು. ಇದಾದರೆ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ.

ಡಿಎ ಮತ್ತು ಎಚ್‍ಆರ್‍ಎ ಎರಡನ್ನೂ ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ನಿರ್ದಿಷ್ಟ ಹೆಚ್ಚಳ ಪಡೆಯುತ್ತಾರೆ. ಎಚ್‍ಆರ್‍ಎ ಪ್ರಮಾಣವು ನಗರದಿಂದ ನಗರಕ್ಕೆ ಭಿನ್ನವಾಗಿರುತ್ತದೆ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ಯೋಗಿಗಳು ಮಾತ್ರ ಎಚ್‍ಆರ್‍ಎ ಪ್ರಯೋಜನವನ್ನು ಪಡೆಯುತ್ತಾರೆ ಎಂಬುದನ್ನು ಗಮನಿಸಬೇಕು.

ಉದಾಹರಣೆಗೆ, ಶ್ರೇಣಿ-1 ನಗರಗಳಲ್ಲಿ ವಾಸಿಸುವ ಉದ್ಯೋಗಿಗಳು ಶ್ರೇಣಿ-2 ಅಥವಾ ಶ್ರೇಣಿ-3 ನಗರಗಳಲ್ಲಿ ವಾಸಿಸುವ ಉದ್ಯೋಗಿಗಳಿಗಿಂತ ಹೆಚ್ಚಿನ ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಎಐಸಿಪಿಐ ಸೂಚ್ಯಂಕದ ಅರ್ಧ-ವಾರ್ಷಿಕ ಡೇಟಾವನ್ನು ಆಧರಿಸಿ ಜನವರಿ ಮತ್ತು ಜುಲೈನಲ್ಲಿ ಡಿಎ ದರವನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.

2023ರಲ್ಲಿ ಒಟ್ಟು ಶೇ.8ರಷ್ಟು ಡಿಎ ಹೆಚ್ಚಿಸಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆಯಲ್ಲಿ 4% ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಡಿಎ ಹೆಚ್ಚಳವು ಜಾರಿಗೆ ಬಂದರೆ, ಜನವರಿ 2024 ರಿಂದ ಜಾರಿಗೆ ಬರಲಿದೆ ಮತ್ತು 2024 ರ ಹೋಳಿ ಮೊದಲು ಘೋಷಿಸುವ ನಿರೀಕ್ಷೆಯಿದೆ.

ಸಮೀಪಿಸುತ್ತಿದೆ ಲೋಕಸಭೆ ಚುನಾವಣೆ, ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆಗಳು

ಕರ್ನಾಟಕದಲ್ಲೂ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಯಾವಾಗ ಜಾರಿ ಮಾಡಬಹುದು ಎಂದು ಸರ್ಕಾರಿ ನೌಕರರು ನಿರೀಕ್ಷೆ ಹೊಂದಿದ್ದಾರೆ. ಮಾರ್ಚ್‍ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.

ಆಯೋಗದ ಶಿಫಾರಸು ಜಾರಿ ಮಾಡಲು ಮುಂದಾದರೆ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ. ನವೆಂಬರ್ 6ರಂದು ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. 7ನೇ ರಾಜ್ಯ ವೇತನ ಆಯೋಗದ ಅವಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

RELATED ARTICLES

Latest News