Friday, May 17, 2024
Homeರಾಜ್ಯಕನ್ನಡ ಹೋರಾಟಗಾರರನ್ನು ಜೈಲಿಗಟ್ಟುವ ಕಾಂಗ್ರೆಸ್ ಟ್ಯಾಬ್ಲೊ ವಿಷಯದಲ್ಲಿ ಮೊಸಳೆ ಕಣ್ಣೀರಿಡುತ್ತಿದೆ : ವಿಜಯೇಂದ್ರ

ಕನ್ನಡ ಹೋರಾಟಗಾರರನ್ನು ಜೈಲಿಗಟ್ಟುವ ಕಾಂಗ್ರೆಸ್ ಟ್ಯಾಬ್ಲೊ ವಿಷಯದಲ್ಲಿ ಮೊಸಳೆ ಕಣ್ಣೀರಿಡುತ್ತಿದೆ : ವಿಜಯೇಂದ್ರ

ಬೆಂಗಳೂರು,ಜ.10- ಕನ್ನಡ ನಾಮಫಲಕ ಅಳವಡಿಸುವಂತೆ ಹೋರಾಟ ನಡೆಸುವ ಕನ್ನಡಿಗರನ್ನು ಜೈಲಿಗೆ ಅಟ್ಟುವ ಕಾಂಗ್ರೆಸ್ ಸರ್ಕಾರ ಟ್ಯಾಬ್ಲೊ ವಿಷಯದಲ್ಲಿ ಮೊಸಳೆ ಕಣ್ಣೀರು ಸುರಿಸುವ ನಾಟಕವಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಸ್ವತಃ ಸಚಿವರೇ ಹೇಳಿದರೂ ಅವರ ಮೇಲೆ ಏಕೆ ಕ್ರಮ ಜರುಗಿಸಿಲ್ಲ. ನಿಜವಾದ ಕನ್ನಡದ ಬದ್ಧತೆಯಿದ್ದರೆ ಅದನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಕನ್ನಡ ಹೋರಾಟಗಾರರು ನಾಮಫಲಕ ಅಳವಡಿಸಲು ಹೋರಾಟ ನಡೆಸಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಿ ಜೈಲಿಗೆ ಹಾಕುತ್ತೀರಿ. ಜಾಮೀನು ನೀಡಿದ ಮರುಕ್ಷಣವೇ ಮತ್ತೆ ಬಂಸುತ್ತೀರಿ ಅಂದರೆ ಕನ್ನಡ ಭಾಷೆ ಹಾಗೂ ಹೋರಾಟಗಾರರ ಬಗ್ಗೆ ನಿಮಿಗಿರುವ ಕಾಳಜಿ ಇದೇನಾ ಎಂದು ಪ್ರಶ್ನೆ ಮಾಡಿದರು.

ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಹಲವಾರು ಬಾರಿ ಹೇಳಿದ್ದರೂ ಸಚಿವರು ಮತ್ತೆ ಗಡಿ ವಿವಾದವನ್ನು ಕೆದಕಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ. ತಕ್ಷಣವೇ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು.

ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ದೆಹಲಿಯ ಕರ್ತವ್ಯಪಥದಲ್ಲಿ ಇದೇ 26ರಂದು ಗಣರಾಜ್ಯೋತ್ಸವದ ವೇಳೆ ಕರ್ನಾಟಕದ ಸ್ತಬ್ಧಚಿತ್ರ ಪಾಲ್ಗೊಳ್ಳುವಿಕೆಗೆ ಅವಕಾಶ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಜಯೇಂದ್ರ ಬಲವಾಗಿ ಸಮರ್ಥಿಸಿಕೊಂಡರು. ಕರ್ನಾಟಕ ಸತತವಾಗಿ 14 ವರ್ಷಗಳಿಂದ ಸ್ತಬ್ದ ಚಿತ್ರಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದೆ. ಬೇರೆ ರಾಜ್ಯಗಳಿಗೂ ಅವಕಾಶ ಕಲ್ಪಿಸಬೇಕೆಂಬ ಕಾರಣಕ್ಕಾಗಿ ಅವಕಾಶ ನೀಡಿಲ್ಲ. ಇದರಲ್ಲಿ ರಾಜಕಾರಣ ಬೆರೆಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.

ಕಳೆದ ಬಾರಿ ಭಾಗಿಯಾಗಿದ್ದ ಗೋವಾ, ತಮಿಳುನಾಡು, ಉತ್ತರಖಂಡ್ ಸೇರಿದಂತೆ ಹಲವು ರಾಜ್ಯಗಳಿಗೆ ಅವಕಾಶ ಕಲ್ಪಿಸಿಲ್ಲ. ಹೋದ ವರ್ಷವು ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೊನೆಗೆ ಹಿರಿಯರ ಮಧ್ಯಪ್ರವೇಶದಿಂದ ಅವಕಾಶ ನೀಡಲಾಗಿತ್ತು. ಈಗ ಸಮಯ ಮುಗಿದಿರುವುದರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.

RELATED ARTICLES

Latest News