Homeರಾಜ್ಯಮೇಕೆದಾಟು ಕುರಿತ ವಿಜಯ್‌ ಪತ್ರಕ್ಕೆ ವ್ಯಾಪಕ ಟೀಕೆ

ಮೇಕೆದಾಟು ಕುರಿತ ವಿಜಯ್‌ ಪತ್ರಕ್ಕೆ ವ್ಯಾಪಕ ಟೀಕೆ

Vijay's letter on Mekedatu project draws widespread criticism

ಬೆಂಗಳೂರು,ಮೇ27- ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮೇಕೆದಾಟು ನದಿ ನೀರು ಯೋಜನೆಗೆ ಅನುಮತಿ ನೀಡಬಾರದೆಂದು ತಮಿಳುನಾಡು ಸಿಎಂ ಜೋಸೆಪ್‌ ವಿಜಯ್‌, ಪ್ರಧಾನಿ ನರೇಂದ್ರಮೋದಿ ಅವರಿಗೆ ಬರೆದಿರುವ ಪತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಮಿನೆಂಟ್‌ ಇಂಟಲೆಕ್ಚುಲ್‌ ಎಂಬುವರು ಪೋಸ್ಟ್‌ ಮಾಡಿ, ವಿಜಯ್‌ ಅವರ ಪತ್ರಕ್ಕೆ ತೀರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪೋಸ್ಟ್‌ನಲ್ಲಿ ವಿಜಯ್‌ ಅವರಿಗೆ ಹಲವು ಪ್ರಶ್ನೆಗಳನ್ನು ಮಾಡಿರುವ ಅವರು, ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ತಮಿಳುನಾಡಿನಲ್ಲಿ ಯಾವ ಪಕ್ಷದ ಜೊತೆಗೆ ನೀವು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದೀರಿ? ಎಂದು ಖಾರವಾಗಿ ಪ್ರಶ್ನೆಸಿದ್ದಾರೆ.

ಅವರು ಮಾಡಿರುವ ಪೋಸ್ಟ್‌ ನಲ್ಲಿ ಮೇಕೆದಾಟುನಲ್ಲಿ ಅಣೆಕಟ್ಟು ನಿರ್ಮಿಸುವವರು ಯಾರು? ಕರ್ನಾಟಕ.ಕರ್ನಾಟಕವನ್ನು ಯಾರು ಆಳುತ್ತಾರೆ? ಕಾಂಗ್ರೆಸ್‌‍ ವಿಜಯ್‌ ಅವರ ಆಡಳಿತ ಪಾಲುದಾರ ಯಾರು? ಕಾಂಗ್ರೆಸ್‌‍ ಎಂದು ಪ್ರಶ್ನೆಗಳ ವಾಗ್ಬಣ ಬಿಟ್ಟಿದ್ದಾರೆ.

ವಿಜಯ್‌ ಪ್ರಕಾರ ಯಾರ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ? ಸುಪ್ರೀಂ ಕೋರ್ಟ್‌.ಆದರೆ ಅದನ್ನು ಯಾರು ತಡೆಯಬೇಕು? ಮೋದಿ2 ಎಂದು ವ್ಯಂಗ್ಯಭರಿತವಾಗಿ ಪೋಸ್ಟ್‌ ಮಾಡಿದ್ದಾರೆ.
ಕರ್ನಾಟಕದ ಬಹುನಿರೀಕ್ಷಿತ ೞಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆೞಯು ಮತ್ತೊಮೆ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್‌ ಅವರು, ಈ ಯೋಜನೆಯನ್ನು ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಮೇಕೆದಾಟು ಯೋಜನೆಯು ಕಾವೇರಿ ನದಿ ನೀರು ಹಂಚಿಕೆ ಅಂತಿಮ ತೀರ್ಪಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಯೋಜನೆ ಜಾರಿಯಾದರೆ ತಮಿಳುನಾಡಿನ ರೈತರಿಗೆ ಮತ್ತು ಕಾವೇರಿ ನದಿ ಅವಲಂಬಿತ ಪ್ರದೇಶಗಳಿಗೆ ತೀವ್ರ ನೀರಿನ ಅಭಾವ ಉಂಟಾಗುತ್ತದೆ. ಆದ್ದರಿಂದ, ಕೇಂದ್ರ ಸರ್ಕಾರವು ಈ ಯೋಜನೆಗೆ ನೀಡಲಾದ ಯಾವುದೇ ಪ್ರಾಥಮಿಕ ಅನುಮತಿಗಳನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾವೇರಿ ನದಿಯ ಕೆಳಭಾಗದ ರಾಜ್ಯವಾಗಿ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದು ಕೇಂದ್ರದ ಜವಾಬ್ದಾರಿ ಎಂದು ವಿಜಯ್‌ ತಮ ಪತ್ರದಲ್ಲಿ ವಿವರಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿರುವಾಗ, ಪ್ರಧಾನಿಗೆ ಪತ್ರ ಬರೆಯುವ ಮೂಲಕ ರಾಜಕೀಯ ಒತ್ತಡ ಹೇರುವುದು ಸರಿಯಾದ ಕ್ರಮವಲ್ಲ. ಬದಲಾಗಿ, ರಾಜ್ಯಗಳ ನಡುವೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬುದು ಅವರ ವಾದ.

ಮೇಕೆದಾಟು ಯೋಜನೆ ಕೇವಲ ಕುಡಿಯುವ ನೀರಿಗಾಗಿ ರೂಪಿಸಲಾದ ಯೋಜನೆಯಾಗಿದ್ದು, ಇದರಿಂದ ನೆರೆಯ ರಾಜ್ಯಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರ ಪದೇಪದೇ ಸ್ಪಷ್ಟಪಡಿಸುತ್ತಿದೆ.

ಪ್ರಧಾನಿ ಕಚೇರಿಯು ಈ ಪತ್ರವನ್ನು ಪರಿಶೀಲನೆಗೆ ತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ವಿಜಯ್‌ ಅವರ ಈ ನಡೆ ಕಾವೇರಿ ನದಿ ಪಾತ್ರದ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ ನಿಲುವಿನ ಮೇಲೆ ಈ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.

RELATED ARTICLES

Latest News