Saturday, February 24, 2024
Homeರಾಜ್ಯವಿಧಾನಸೌಧದ ಮುಂದೆ ದಂಪತಿ ಹೈಡ್ರಾಮ

ವಿಧಾನಸೌಧದ ಮುಂದೆ ದಂಪತಿ ಹೈಡ್ರಾಮ

ಬೆಂಗಳೂರು,ಜ.10- ಇಂದು ಬೆಳಿಗ್ಗೆ ವಿಧಾನಸೌಧ ಮುಂದೆ ಬಂದ ದಂಪತಿ ಸೀಮೆ ಎಣ್ಣೆ ಸುರಿದುಕೊಂಡು ಹೈಡ್ರಾಮಾ ಮಾಡಿದ್ದಾರೆ. ಜೆಜೆ ನಗರದ ಪಾದರಾಯನಪುರ ನಿವಾಸಿಗಳಾದ ಶಾಯಿಸ್ತಾಬಾಬು ಹಾಗೂ ಮೊಹಮದ್ ಮುನಾಯಿತ್ ದಂಪತಿಯನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ದಂಪತಿ ಚನ್ನಪಟ್ಟಣದಲ್ಲಿರುವ ತಮ್ಮ ಜಮೀನಿನಲ್ಲಿ ಶುಂಠಿ ಬೆಳೆಯಲು ಬ್ಯಾಂಕ್ನಿಂದ ಲೋನ್ ಪಡೆದಿದ್ದು, ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ನವರು ಇವರ ಮನೆ ಹರಾಜು ಮಾಡಿದ್ದಾರೆ. ಅಲ್ಲದೆ ಸ್ಥಳೀಯರು ಸಹ ತಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಲು ವಿಧಾನಸೌಧ ಬಳಿ ಬಂದಿದ್ದರು.

ಕರ್ನಾಟಕ ಪೊಲೀಸ್ ಇಲಾಖೆಗೆ ಸರ್ಜರಿ ಅಗತ್ಯವಿದೆ : ಶಿವರಾಜ್‍ಕುಮಾರ್

ಸಿಎಂ ಭೇಟಿಗೂ ಮುನ್ನ ಸೀಮೆ ಎಣ್ಣೆ ಕ್ಯಾನ್ ಸಮೇತ ವಿಧಾನಸೌಧ ಮುಂದೆ ಬಂದ ದಂಪತಿ ಏಕಾಏಕಿ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ.ತಕ್ಷಣ ಗಮನಿಸಿದ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ಸೀಮೆ ಎಣ್ಣೆ ಕ್ಯಾನ್ ಕಿತ್ತುಕೊಂಡು, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.ದಂಪತಿಯನ್ನು ರಕ್ಷಿಸುವ ವೇಳೆ ಇನ್ಸ್ಪೆಕ್ಟರ್ ಅವರ ಮೈಮೇಲೂ ಸೀಮೆಎಣ್ಣೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

RELATED ARTICLES

Latest News