Monday, November 25, 2024
Homeರಾಜ್ಯಕ್ರೀಡೆಗಳು ಜೀವನ ಪಾಠ ಕಲಿಸುತ್ತದೆ : ಎಸ್.ಮರಿಸ್ವಾಮಿ

ಕ್ರೀಡೆಗಳು ಜೀವನ ಪಾಠ ಕಲಿಸುತ್ತದೆ : ಎಸ್.ಮರಿಸ್ವಾಮಿ

ಬೆಂಗಳೂರು,ಜ.11- ಕ್ರೀಡೆಗಳು ನಮ್ಮ ಜೀವನವನ್ನು ಹೇಗೆ ನಡೆಸಬೇಕೆಂಬುದನ್ನು ಕಲಿಸುತ್ತವೆ. ಏಕೆಂದರೆ ಅಲ್ಲಿ ಸ್ಪರ್ಧೆಯಿದೆ. ಸೋಲು-ಗೆಲುವು, ಮತ್ತು ಅವುಗಳನ್ನು ಸ್ವೀಕರಿಸುವ ವಿಧಾನವನ್ನು ಹೇಳಿಕೊಡುತ್ತದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ತಿಳಿಸಿದ್ದಾರೆ.

ಕೋರಮಂಗಲದ ಕೆಎಸ್‍ಆರ್‍ಪಿ ಕ್ರೀಡಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾ ವಾರ್ಷಿಕೋತ್ಸವ-2023 ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಕ್ರೀಡೆಯಲ್ಲಿನ ಸೋಲು-ಗೆಲುವುಗಳು ನಮಗೆ ತಿಳಿಸುತ್ತವೆ. ಯಾವ ಹಂತದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ತಿಳಿದು ಸಾಧನೆ, ಪ್ರತಿಭೆ, ಉತ್ಸಾಹದ ಮೂಲಕ ಆ ಸ್ಥಾನ ಮತ್ತೆ ಪಡೆದುಕೊಳ್ಳಬಹುದು ಎಂಬುದನ್ನು ಕ್ರೀಡೆ ಕಲಿಸುತ್ತದೆ ಎಂದರು.

ಕರ್ನಾಟಕ ಪೊಲೀಸ್ ಅನೇಕ ಕ್ರೀಡಾ ಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ತೋರಿಸಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳಲ್ಲಿ ರಾಜ್ಯಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಗಳು ನೀಡಿರುವ ಕೊಡುಗೆ ಕಡಿಮೆಯೇನೂ ಇಲ್ಲ ಎಂದು ಹೇಳಿದರು.

ಮಗುವನ್ನು ಕೊಲ್ಲುವ ಮುನ್ನ ಪತಿಯೊಂದಿಗೆ ಮೊಬೈಲ್‍ನಲ್ಲಿ ಜಗಳವಾಡಿದ್ಧ ಸುಚನಾ ಸೇಠ್

ನಮ್ಮಲ್ಲಿ ಪ್ರತಿಭೆಗಳಿವೆ. ಸಾಧನೆ ಮಾಡುವ ಶಕ್ತಿಯಿದೆ. ಅವರಿಗೆ ಉತ್ತೇಜನ ಕೊಡುವ ಕೆಲಸ ನಾವು ಮಾಡಬೇಕು. ಕರ್ನಾಟಕ ಪೊಲೀಸ್ ಕ್ರೀಡಾ ಮಂಡಳಿಯು 15 ತಂಡಗಳನ್ನು ಬೇರೆಬೇರೆ ಕಡೆಗಳಲ್ಲಿ ತರಬೇತಿ ನೀಡುತ್ತಿದೆ. ಅವರು ಮುಂದಿನ ದಿನಗಳಲ್ಲಿ ಬಹಳಷ್ಟು ಸಾಧನೆ ಮಾಡುವ ಸಾಧ್ಯತೆಯಿದೆ ಎಂದರು. ಇಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಯಶಸ್ವಿಯಾಗುವಂತೆ ಹಾರೈಸುತ್ತೇನೆ ಎಂದು ಎಸ್.ಮರಿಸ್ವಾಮಿ ಯವರು ಹೇಳಿದರು.

RELATED ARTICLES

Latest News