ಶಿವಮೊಗ್ಗ,ಜ.12- ಬಿಜೆಪಿಯವರಿಗೆ ಜನರಿಗೆ ಹತ್ತಿರವಾಗುವ ಒಂದೇ ಒಂದು ಕಾರ್ಯಕ್ರಮ ಮಾಡಲು ಯೋಗ್ಯತೆಯಿಲ್ಲ. ಕಾಂಗ್ರೆಸ್‍ನ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಂತೆ ನಾವು ಭರವಸೆ ಕೊಟ್ಟು ಮಾತು ತಪ್ಪುವುದಿಲ್ಲ. ಪಂಚಖಾತ್ರಿ ಯೋಜನೆಗಳನ್ನು ಅನುಷ್ಠಾನ ಮಾಡದೇ ಇದ್ದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಅದನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದರು. ಆದರೆ ಈಗ ಅವರಿಗೆ ಯಾವುದೇ ವಿಚಾರಗಳೂ ಸಿಗುತ್ತಿಲ್ಲ. ಅದಕ್ಕಾಗಿ ಆಧಾರರಹಿತ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪಂಚಖಾತ್ರಿ ಯೋಜನೆಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ 8 ಕೋಟಿ ರೂ.ಗಳಷ್ಟು ಹಣ ಹೋಗುತ್ತಿದೆ. ಜನರ ಜೀವನಮಟ್ಟ ಸುಧಾರಣೆಯಾಗಿದೆ. ಇಂತಹ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿಯವರಿಂದ ತೋರಿಸಿ ಎಂದರು. ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿಯವರು ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ನಾವು ಎಲ್ಲಮ್ಮನ ಜಾತ್ರೆ ಮಾಡುವುದಿಲ್ಲ, ಮಾರಮ್ಮನ ಹಬ್ಬ ಮಾಡುವುದು ಗೊತ್ತು ಎಂದು ಮಾರ್ಮಿಕವಾಗಿ ಹೇಳಿದರು.
ರಾಮಮಂದಿರ ಉದ್ಘಾಟನೆಗೆ ಯೋಗಿ ಬಿಟ್ಟರೆ ಬೇರೆ ಯಾವ ಸಿಎಂಗೂ ಇಲ್ಲ ಆಹ್ವಾನ
ಶಿವಮೊಗ್ಗದಲ್ಲಿ ಯುವನಿ ಯೋಜನೆ ಉದ್ಘಾಟನೆಯ ಕಾರ್ಯಕ್ರಮ ನಡೆಸುವುದು ಹೆಮ್ಮೆಯ ವಿಚಾರ. ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನು ಪ್ರಣಾಳಿಕೆ ಸಮಿತಿಯ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಪಂಚಖಾತ್ರಿ ಯೋಜನೆಗಳ ಬಗ್ಗೆ ಯಾವುದಾದರೂ ಒಂದು ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ನಡೆಸಬೇಕು ಎಂಬ ಅಭಿಲಾಷೆ ಇತ್ತು. ಕೊನೆಯ ಗ್ಯಾರಂಟಿ ಯುವನಿ ಉದ್ಘಾಟನೆ ಇಲ್ಲಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವ್ಯಾಪಕ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಯುವ ಸಮುದಾಯ ಬರುತ್ತಿದೆ. ಅವರ ಸುರಕ್ಷತೆಗಾಗಿ ಕಾಳಜಿ ವಹಿಸುತ್ತೇವೆ. ಹಬ್ಬದ ಮಾದರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದರು. ನಿನ್ನೆಯವರೆಗೂ ಯುವನಿ ಯೋಜನೆಯಡಿ 67 ಸಾವಿರ ಮಂದಿ ನೋಂದಣಿಯಾಗಿದ್ದಾರೆ. ಇದು ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ. ದಾಖಲಾತಿ ಪರಿಶೀಲನೆ ಎಲ್ಲವೂ ಸಹಜ ಪ್ರಕ್ರಿಯೆ ಎಂದು ಹೇಳಿದರು.
ಸಿಎಸ್‍ಕೆ ಸ್ಟಾರ್ ಆಲ್ರೌಂಡರ್‌ಗೆ ಕೊರೊನಾ ಸೋಂಕು
ಪಂಚಖಾತ್ರಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯಸರ್ಕಾರ ಕಷ್ಟಪಡುತ್ತಿದೆ ಎಂದು ಹೇಳುತ್ತಿರುವುದು ಆಧಾರರಹಿತ. ರಾಜ್ಯಸರ್ಕಾರ ಜನಪರವಾಗಿ ಐತಿಹಾಸಿಕ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಬಾಕಿ ಇರುವ ಅಭಿವೃದ್ಧಿ ಕಾಮಗಾರಿ ಕೂಡಾ ಎಂದಿನಂತೆ ಮುಂದುವರೆಯಲಿವೆ ಎಂದರು.