Friday, November 22, 2024
Homeರಾಜ್ಯದೇಶದಲ್ಲೇ ಪ್ರಪ್ರಥಮ ಬಾರಿಗೆ NDPS ಕಾಯ್ದೆ ಚಲಾಯಿಸಿದ ಸಿಸಿಬಿ ಅಧಿಕಾರಿಗಳು

ದೇಶದಲ್ಲೇ ಪ್ರಪ್ರಥಮ ಬಾರಿಗೆ NDPS ಕಾಯ್ದೆ ಚಲಾಯಿಸಿದ ಸಿಸಿಬಿ ಅಧಿಕಾರಿಗಳು

ಬೆಂಗಳೂರು, ಜ.12- ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ಎನ್.ಡಿ.ಪಿ.ಎಸ್ ಕಾಯ್ದೆಯ ಅಧಿಕಾರವನ್ನು ಚಲಾಯಿಸಿದ ಸಿಸಿಬಿ ಅಧಿಕಾರಿಗಳು ವಿದೇಶಿ ಡ್ರಗ್ ಪೆಡ್ಲರ್ ಅಕ್ರಮವಾಗಿ ಗಳಿಸಿದ್ದ 12 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಕಳೆದ ನವೆಂಬರ್‍ನಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದ ಆರೋಪಿಯು ರೂಢಿಗತ ವಿದೇಶಿ ಡ್ರಗ್ ಪೆಡ್ಲರ್ ಆಗಿರುತ್ತಾನೆ.

ಆತನ ಬಳಿ ಹಣ ಮತ್ತು ವಿವಿಧ ಬ್ಯಾಂಕ್‍ಗಳ ಪಾಸ್‍ಬುಕ್, ಡೆಬಿಟ್ ಕಾರ್ಡ್‍ಗಳು ಇರುವ ಬಗ್ಗೆ ಮಾಹಿತಿಯನ್ನು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಕುರಿತು ಪ್ರಕರಣದ ತನಿಖೆಯನ್ನು ಮುಂದುವರಿಸಿ ತನಿಖಾ ಕಾಲದಲ್ಲಿ ವಿದೇಶಿ ಡ್ರಗ್ ಪೆಡ್ಲರ್‍ನ ಪತ್ನಿಯ ಎರಡು ಬ್ಯಾಂಕ್ ಖಾತೆಯಿಂದ 2.55 ಲಕ್ಷ ಹಣ ಹಾಗೂ ಇತರೆ ಹೆಸರಿನಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4.90 ಲಕ್ಷ ರೂ. ಹಣದ ವಿವರಗಳನ್ನು ತನಿಖೆಯಿಂದ ಖಚಿತಪಡಿಸಿಕೊಂಡಿದ್ದಾರೆ.

ಎನ್.ಡಿ.ಪಿ.ಎಸ್ ಕಾಯ್ದೆಯಡಿ ತನಿಖಾಕಾಧಿರಿಗಳಿಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗದು ಹಣ ಮತ್ತು 7 ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದ ಒಟ್ಟು 12,60,282 ರೂ. ಹಣವನ್ನು ಮುಟ್ಟುಗೋಲು ಹಾಕಿಕೊಂಡು ಆದೇಶ ಹೊರಡಿಸಿರುತ್ತಾರೆ. ವಿದೇಶಿ ಡ್ರಗ್ ಪೆಡ್ಲರ್ 2018ರಲ್ಲಿ ಭಾರತಕ್ಕೆ ವೈದ್ಯಕೀಯ ವೀಸಾದಲ್ಲಿ ಬಂದಿದ್ದು, 2022ರಲ್ಲಿ ಮಣಿಪುರ ರಾಜ್ಯದ ಯುವತಿಯನ್ನು ಮದುವೆಯಾಗಿರುತ್ತಾನೆ.

ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ : ಬೊಮ್ಮಾಯಿ

ತದನಂತರದಲ್ಲಿ ಆಕೆಯ ಹೆಸರಿನಲ್ಲಿ ನಗರದಲ್ಲಿ ಎರಡು ಬ್ಯಾಂಕ್ ಖಾತೆಗಳನ್ನು ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾನೆ. ಈ ಖಾತೆಗಳಿಂದ ಗೂಗಲ್ ಪೇ ಪೋನ್ ಪೇ ಮೂಲಕ ಡ್ರಗ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಅಂಶಗಳು ತನಿಖೆಯಿಂದ ತಿಳಿದು ಬಂದಿರುತ್ತದೆ.

RELATED ARTICLES

Latest News