Friday, November 22, 2024
Homeಮನರಂಜನೆಖ್ಯಾತ ಸಂಗೀತ ನಿರ್ದೇಶಕ ಜಾಯ್ ಇನ್ನಿಲ್ಲ

ಖ್ಯಾತ ಸಂಗೀತ ನಿರ್ದೇಶಕ ಜಾಯ್ ಇನ್ನಿಲ್ಲ

ತಿರುವನಂತಪುರಂ, ಜ 15 (ಪಿಟಿಐ) ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಕೆ ಜೆ ಜಾಯ್ ಅವರು ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 77 ವರ್ಷದ ಜಾಯ್ ಅವರು 1970 ರ ದಶಕದಲ್ಲಿ ಕೀಬೋರ್ಡ್‍ನಂತಹ ವಾದ್ಯಗಳ ಬಳಕೆಗಾಗಿ ಮಲಯಾಳಂ ಚಲನಚಿತ್ರ ಸಂಗೀತ ಜಗತ್ತಿನಲ್ಲಿ ಮೊದಲ ಟೆಕ್ನೋ ಮ್ಯೂಸಿಷಿಯನ್ ಎಂದು ಗುರುತಿಸಿಕೊಂಡಿದ್ದರು.

ಪಾಶ್ರ್ವವಾಯುವಿನ ನಂತರ ಸ್ವಲ್ಪ ಸಮಯದವರೆಗೆ ಹಾಸಿಗೆ ಹಿಡಿದಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅವರ ಅಂತ್ಯಕ್ರಿಯೆ ಬುಧವಾರ ಚೆನ್ನೈನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಮಲಯಾಳಂ ಚಿತ್ರ ನಿರ್ದೇಶಕರ ಒಕ್ಕೂಟ ಮತ್ತು ಮಲಯಾಳಂ ಹಿನ್ನೆಲೆ ಗಾಯಕ ಮತ್ತು ಸಂಯೋಜಕ ಎಂ ಜಿ ಶ್ರೀಕುಮಾರ್ ಅವರು ಜಾಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಿಗಮ-ಮಂಡಳಿಗಳಿಗೆ ನೇಮಕ ವಿಳಂಬ, ಕಾರ್ಯಕರ್ತರು ಸಿಡಿಮಿಡಿ

ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಮಾರ್ ಫೇಸ್ ಬುಕ್ ನಲ್ಲಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ನೆಲ್ಲಿಕುನ್ನು ಎಂಬಲ್ಲಿ 1946 ರಲ್ಲಿ ಜನಿಸಿದ ಜಾಯ, ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಅವರು 1975 ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಅವರು ಜನರನ್ನು ಆಕರ್ಷಿಸುವ ಮತ್ತು ಮೋಡಿ ಮಾಡಿದ ಅನೇಕ ಹಾಡುಗಳನ್ನು ರಚಿಸಿ ಮನೆ ಮಾತಾಗಿದ್ದರು. ಜಾಯ್ ಅವರ ಪ್ರಯೋಗಗಳು ಮಲಯಾಳಂ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ತೀವ್ರ ಬದಲಾವಣೆಗೆ ಕಾರಣವಾಯಿತು ಮತ್ತು ಅವರು ಜಯನ್ ನಟಿಸಿದ ಚಿತ್ರಗಳಲ್ಲಿ ಸಂಗೀತ ನಿರ್ದೇಶನಕ್ಕಾಗಿ ಗಮನ ಸೆಳೆದರು.

RELATED ARTICLES

Latest News