Monday, November 25, 2024
Homeರಾಜ್ಯಫೆಬ್ರವರಿ ತಿಂಗಳಿನಲ್ಲೇ ಬಜೆಟ್ ಮಂಡನೆ : CM ಸಿದ್ದರಾಮಯ್ಯ

ಫೆಬ್ರವರಿ ತಿಂಗಳಿನಲ್ಲೇ ಬಜೆಟ್ ಮಂಡನೆ : CM ಸಿದ್ದರಾಮಯ್ಯ

ಹಾವೇರಿ,ಜ.15- ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದರಿಂದ ಫೆಬ್ರವರಿ ತಿಂಗಳಿನಲ್ಲೇ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು, ನರಸೀಪುರ ಗ್ರಾಮ ಹ್ಯಾಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬರ ನಿರ್ವಹಣೆಗೆ ರಾಜ್ಯಸರ್ಕಾರ ತಾತ್ಕಾಲಿಕವಾಗಿ 2 ಸಾವಿರ ರೂ.ಗಳ ಪರಿಹಾರವನ್ನು ಮಾತ್ರ ನೀಡಿದೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ದೊರೆತ ತಕ್ಷಣ ರೈತರಿಗೆ ನಿಯಮಾನುಸಾರ ಹೆಚ್ಚಿನ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು. ರಾಜ್ಯಸರ್ಕಾರ ನೀಡಿರುವ ಪರಿಹಾರ ಸಾಲುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ನೆರವು ಬಂದಿಲ್ಲ. ರಾಜ್ಯದ ಬಿಜೆಪಿ ನಾಯಕರು ಇಲ್ಲಿ ಟೀಕೆ ಮಾಡುವ ಬದಲು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.

2ನೇ ದಿನದ ನ್ಯಾಯಯಾತ್ರೆಯಲ್ಲಿ ಜನರ ಸಮಸ್ಯೆ ಆಲಿಸಿದ ರಾಹುಲ್

ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮರ್ಥಿಸಿಕೊಂಡಿದ್ದಾಗಿದ್ದರೆ ಅವರಿಗೂ ಸಂಸ್ಕøತಿ ಮತ್ತು ಮನುಷ್ಯತ್ವ ಇಲ್ಲ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು. ಅನಂತಕುಮಾರ್ ಹೆಗಡೆ ಈವರೆಗೂ ನಾಪತ್ತೆಯಾಗಿದ್ದರು. ಚುನಾವಣೆಯ ಕಾಲದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಸದರಾಗಿ, ಮಾಜಿ ಸಚಿವರಾಗಿ ಯಾವುದಾದರೂ ಕೆಲಸ ಮಾಡಿದ್ದಾರೆಯೇ? ಜನರ ಕಷ್ಟ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಸಂಸ್ಕøತಿ ಎಂದರೆ ಜನರ ಸಂಕಷ್ಟಗಳನ್ನು ಕೇಳುವುದು. ಅದನ್ನು ಅನಂತಕುಮಾರ್ ಹೆಗಡೆ ಮಾಡಿಲ್ಲ. ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಾರೆಂದು ಹೇಳಿದರು.

RELATED ARTICLES

Latest News