Friday, May 10, 2024
Homeರಾಜ್ಯಸಿದ್ದರಾಮಯ್ಯನವರ ಕಾರ್ಯಗಳು 'ಕಾಲನೇಮಿ' ನಂತಿವೆ

ಸಿದ್ದರಾಮಯ್ಯನವರ ಕಾರ್ಯಗಳು ‘ಕಾಲನೇಮಿ’ ನಂತಿವೆ

ಬೆಂಗಳೂರು,ಜ.15- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮನಿರಬಹುದು. ಆದರೆ ಅವರ ಕಾರ್ಯಗಳು ಕಾಲನೇಮಿ (ಅಸುರ)ನಂತಿವೆ ಎಂದು ಹನುಮಗಿರಿ ದೇವಸ್ಥಾನದ ಅರ್ಚಕ ಮಹಂತ್ ರಾಜು ದಾಸ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯನವರು ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ಆದರೆ ಅವರ ಕಾರ್ಯವೈಖರಿ ಅಸುರನಂತಿದೆ. ಬಾಬರ್ ಬಗ್ಗೆ ಅವರಿಗೆ ಚಿಂತೆ, ದಾಳಿಕೋರರು ಹೆಚ್ಚಿನ ಜನರ ಭಾವನೆಗಳೊಂದಿಗೆ ಅವರು ಆಟವಾಡುತ್ತಿರುವ ರೀತಿ, ಬಿಜೆಪಿ ನಾಯಕ – ಸಿ.ಟಿ.ರವಿ ಹೇಳಿದ್ದು ತಪ್ಪಲ್ಲ ಎಂದು ಮಹಂತ್ ರಾಜು ದಾಸ್ ಸಮರ್ಥಿಸಿಕೊಂಡಿದ್ದಾರೆ. ಎಎನ್‍ಐಗೆ ಸುದ್ದಿ ಸಂಸ್ಥೆಗೆ ಮಾತನಾಡಿರುವ ಅವರು, ಗೈರು ಹಾಜರಾಗಲು ಮುಂದಾಗಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.

ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಜನವರಿ 22 ರಂದು ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆಯ ಮುಖ್ಯ ವಿಧಿಗಳನ್ನು ನಡೆಸಲಿದೆ. ಮಾಜಿ ಸಚಿವ ಸಿ.ಟಿ.ರವಿ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕರು ಹಾಗೂ ಪಕ್ಷವು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗದಿರಲು ಕಾರಣ, ಬಾಬರ್‍ನನ್ನು ಬಿಡಲು ಸಾಧ್ಯವಿಲ್ಲ ಎಂದು ಸಂದೇಶವನ್ನು ಸಾರಿದ್ದಾರೆ ಎಂದು ಹೇಳಿದ್ದಾರೆ.

ಅವರ ಪಕ್ಷವು ಅವರು (ಪ್ರಾಣಪ್ರತಿಷ್ಠಾಪನೆಗೆ) ಹೋಗುವುದಿಲ್ಲ ಎನ್ನುವ ಮೂಲಕ ಕಾರ್ಯಕ್ರವನ್ನು ಬಹಿಷ್ಕಾರ ಹಾಕಿದ್ದಾರೆ. ಅವರು ಬಾಬರ್‍ನನ್ನು ಬಿಟ್ಟು ರಾಮನನ್ನು ಹಿಡಿಯಲು ಸಾಧ್ಯವಿಲ್ಲ. ಬಾಬರ್‍ನನ್ನು ಬಿಟ್ಟರೆ ರಾಮನನ್ನು ಹಿಡಿಯುವುದು ಸುಲಭ. ಆದರೆ, ಅದು ಅವರಿಗೆ ಸಿಗುವುದಿಲ್ಲ. ಬಾಬರ್ ಬಿಟ್ಟರೆ ಆ ಸಮುದಾಯದ ಓಲೈಕೆಗಾಗಿ ದೂರ ಸರಿದಿದ್ದಾರೆ. ರಾಮ ಎಲ್ಲರಿಗೂ ಸೇರಿದವನು. ಪ್ರಾಣ ಪ್ರತಿಷ್ಠಾಪನೆಯನ್ನು ಹಬ್ಬದಂತೆ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

2ನೇ ದಿನದ ನ್ಯಾಯಯಾತ್ರೆಯಲ್ಲಿ ಜನರ ಸಮಸ್ಯೆ ಆಲಿಸಿದ ರಾಹುಲ್

ಈ ತಿಂಗಳ ಆರಂಭದಲ್ಲಿ ಖರ್ಗೆ, ಸೋನಿಯಾ ಮತ್ತು ಅೀಧಿರ್‍ಜನವರಿ 22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದ್ದು, ಇದನ್ನು ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕ್ರಮ ಎಂದು ಟೀಕಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ರಾಮ ಮಂದಿರವನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಇಂಡಿಯಾ ಬ್ಲಾಕ್‍ನ ವಿರೋಧ ಪಕ್ಷಗಳು ಆರೋಪಿಸಿವೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಜನವರಿ 22 ರಂದು ನಡೆಯಲಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾನ ಪ್ರಾಣ-ಪ್ರತಿಷ್ಠಾಪನಾ ಸಮಾರಂಭದ ವೈದಿಕ ವಿವಿಧಾನಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಜನವರಿ 16 ರಂದು ಪ್ರಾರಂಭವಾಗುತ್ತವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ಭವ್ಯ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾನೆಯ ಆಚರಣೆಗಳನ್ನು ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಜನವರಿ 22 ರಂದು ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ವಿಧಿಗಳನ್ನು ನಡೆಸಲಿದೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ ನಡೆಯಲಿದೆ.

RELATED ARTICLES

Latest News