Tuesday, September 17, 2024
Homeಅಂತಾರಾಷ್ಟ್ರೀಯ | Internationalಅಮೆರಿಕದಲ್ಲಿ ಮತ್ತಿಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ಅಮೆರಿಕದಲ್ಲಿ ಮತ್ತಿಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ಹೈದರಾಬಾದ್,ಜ.15- ಅಮೆರಿಕದಲ್ಲಿ ಮತ್ತೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ 28 ರಂದು ಅಮೆರಿಕಕ್ಕೆ ಬಂದಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಕನೆಕ್ಟಿಕಟ್ ರಾಜ್ಯದ ಹಾರ್ಟ್‍ಫೋರ್ಡ್ ಪಟ್ಟಣದ ತಮ್ಮ ಅಪಾರ್ಟ್‍ಮೆಂಟ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ಗಟ್ಟು ದಿನೇಶ್ (22) ತೆಲಂಗಾಣದ ವನಪರ್ತಿ ಜಿಲ್ಲೆಯವರಾಗಿದ್ದು, ನಿಕೇಶ್ (21) ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇಬ್ಬರೂ ಹಾರ್ಟ್‍ಫೋರ್ಡ್‍ನಲ್ಲಿರುವ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ದಿನೇಶ್ ಅವರ ತಾಯಿಯ ಚಿಕ್ಕಪ್ಪ ಸಾಯಿನಾಥ್ ವನಪರ್ತಿಯಲ್ಲಿ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ, ಭಾನುವಾರ ಬೆಳಿಗ್ಗೆ ಇಬ್ಬರೂ ವಿದ್ಯಾರ್ಥಿಗಳು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕನೆಕ್ಟಿಕಟ್ ಪೋಲೀಸರಿಂದ ಕುಟುಂಬ ಸದಸ್ಯರಿಗೆ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.

2ನೇ ದಿನದ ನ್ಯಾಯಯಾತ್ರೆಯಲ್ಲಿ ಜನರ ಸಮಸ್ಯೆ ಆಲಿಸಿದ ರಾಹುಲ್

ಇಬ್ಬರೂ ರಾತ್ರಿ ಊಟದ ನಂತರ ತಮ್ಮ ಕೋಣೆಗೆ ಮರಳಿದರು ಮರುದಿನ ಬೆಳಿಗ್ಗೆ, ಅವರ ಸ್ನೇಹಿತರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ನಂತರ ಅವರು ಪೋಲೀಸರಿಗೆ ಮಾಹಿತಿ ನೀಡಿದರು, ಅವರು ಸ್ಥಳಕ್ಕೆ ತಲುಪಿದರು, ಬಾಗಿಲು ಒಡೆದು ತೆರೆದಾಗ ಅವರು ತಮ್ಮ ಹಾಸಿಗೆಯ ಮೇಲೆ ನಿರ್ಜೀವವಾಗಿ ಪತ್ತೆಯಾಗಿದ್ದರು. ಅವರು ಮೃತದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಸಾಯಿನಾಥ್ ತಿಳಿಸಿದ್ದಾರೆ.

RELATED ARTICLES

Latest News