Monday, November 25, 2024
Homeರಾಷ್ಟ್ರೀಯ | Nationalಮಧ್ಯಪ್ರದೇಶದಲ್ಲಿ ಮತ್ತೊಂದು ಹುಲಿ ಸಾವು

ಮಧ್ಯಪ್ರದೇಶದಲ್ಲಿ ಮತ್ತೊಂದು ಹುಲಿ ಸಾವು

ಉಮಾರಿಯಾ, ಜ 17 (ಪಿಟಿಐ) ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಾಂಧವ್‍ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಬಿಟಿಆರ್) ಹುಲಿಯೊಂದು ಶವವಾಗಿ ಪತ್ತೆಯಾಗಿದ್ದು, ಇದನ್ನು ದೊಡ್ಡ ಹುಲಿ ಕೊಂದಿರಬಹುದು ಎಂದು ಶಂಕಿಸಲಾಗಿದೆ. ಇದು ಬಿಟಿಆರ್ ಪ್ರದೇಶದಲ್ಲಿ ಒಂದು ವಾರದೊಳಗೆ ಎರಡನೆ ಹುಲಿ ಸಾವಿನ ಪ್ರಕರಣವಾಗಿದೆ.

18 ತಿಂಗಳ ವಯಸ್ಸಿನ ಹುಲಿಯ ಶವ ಬಿಟಿಆರ್‍ನ ಧಮೋಖರ್ ವ್ಯಾಪ್ತಿಯ ಕಂದಕದಲ್ಲಿ ಪತ್ತೆಯಾಗಿದೆ ಎಂದು ಅರಣ್ಯ ರಕ್ಷಕ ವಿಜಯ್ ಶಂಕರ್ ಶ್ರೀವಾಸ್ತವ ತಿಳಿಸಿದ್ದಾರೆ. ಮೃತದೇಹವು ಸುಮಾರು 36 ಗಂಟೆಗಳಷ್ಟು ಹಳೆಯದಾಗಿದೆ ಮತ್ತು ವಯಸ್ಕ ಹುಲಿಯೊಂದಿಗೆ ಕಾದಾಟದಲ್ಲಿ ಹುಲಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಅವರು ಹೇಳಿದರು. ಸುತ್ತಮುತ್ತಲ ಪ್ರದೇಶದಲ್ಲಿ ಎರಡನೇ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ ಇದರ ಜೊತೆಗೆ ಹುಲಿಯ ಮೃತದೇಹವನ್ನು ಮತ್ತೊಂದು ಹುಲಿ ಎಳೆದೊಯ್ದ ಗುರುತುಗಳೂ ಪತ್ತೆಯಾಗಿವೆ ಎಂದರು.

ಡಿಕೆಶಿಗೆ ಸಿಎಂ ಹುದ್ದೆ ಚರ್ಚೆ ಮತ್ತೆ ಮುನ್ನೆಲೆಗೆ

ಮೃತದೇಹದ ಕತ್ತಿನ ಮೂಳೆ ಮುರಿದಿರುವುದು ಕಂಡುಬಂದಿದ್ದು, ಹಲ್ಲಿನ ಗುರುತುಗಳು ಕೂಡ ಕಂಡುಬಂದಿದ್ದು, ಮತ್ತೊಂದು ಹುಲಿಯೊಂದಿಗೆ ಕಾದಾಟದಲ್ಲಿ ಇದು ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಶವ ಪರೀಕ್ಷೆಯ ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‍ಟಿಸಿಎ) ಮಾರ್ಗಸೂಚಿಗಳ ಪ್ರಕಾರ ಶವವನ್ನು ವಿಲೇವಾರಿ ಮಾಡಲಾಗಿದೆ ಮತ್ತು ಅದರ ದೇಹದ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News