ಬೆಂಗಳೂರು,ಜ.17- ಸುಳ್ಳು ಹೇಳುವುದು, ಜನರನ್ನು ವಂಚಿಸುವುದು, ಫೇಕ್ ಸುದ್ದಿ ಸೃಷ್ಟಿಸುವುದು, ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚೆನ್ನಾಗಿಯೇ ಸಿದ್ಧಿಸಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಸಂದೇಶ ಪ್ರಕಟಿಸಿರುವ ರಾಜ್ಯ ಬಿಜೆಪಿ, ನಕಲಿ ಸುದ್ದಿಗಳನ್ನು ರಚಿಸುತ್ತಾ ಕಾಲಹರಣ ಮಾಡುವ ಬದಲು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮುಖ್ಯಮಂತ್ರಿ ಯೋಚಿಸಿದ್ದರೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರಲಿಲ್ಲ, ಮಹಿಳೆಯರ ಮೇಲೆ ಹಲ್ಲೇ ನಡೆಯುತ್ತಿರಲಿಲ್ಲ ಎಂದು ಉಲ್ಲೇಖಿಸಿದೆ. ಜತೆಗೆ ಎಡಿಟಿಂಗ್ ಮಾಸ್ಟರ್ ಎಂದು ಸಿದ್ದರಾಮಯ್ಯ ಅವರನ್ನು ಕುಹಕವಾಡಿದೆ.
ಎಲ್ಲೇದರಲ್ಲಿ ನಿದ್ದೆಗೆ ಜಾರುವುದು ನೀವೇ (ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ) ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಯವರನ್ನು ಅವಹೇಳನ ಮಾಡಿದರೆ ಜನರು ನಂಬುತ್ತಾರೆ ಎಂಬ ಭ್ರಮೆಯಿಂದ ಆದಷ್ಟು ಬೇಗ ಹೊರ ಬನ್ನಿ. ಸರ್ಕಾರವನ್ನು ಮೋದಿ ಮಾದರಿಯಲ್ಲಿ ಮುನ್ನಡೆಸಿ ಜನರ ಸಮಸ್ಯೆ ಬಗೆಹರಿಸಿ ಎಂದು ಬಿಜೆಪಿ ಹೇಳಿದೆ.
ಮುಂದುವರಿದು, ಮಜವಾದಿ ಸಿದ್ದರಾಮಯ್ಯ ಅವರು ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಒಂದಿಷ್ಟು ವಿಚಾರಗಳನ್ನು ಪಟ್ಟಿ ಮಾಡಿದೆ. ರೈತರಿಗೆ ಕೊಡುವ ಪರಿಹಾರ, ಕರ್ನಾಟಕಕ್ಕೆ ಕಾವೇರಿ ನೀರು, ಮಹಿಳೆಯರಿಗೆ ಕೊಡಬೇಕಾದ ರಕ್ಷಣೆ, ಹಿಂದೂ ದೇವಾಲಯಗಳಿಗೆ ಅನುದಾನ, ಈಡೇರಿಸಲಾಗದ ಗ್ಯಾರಂಟಿಗಳು ಇವು ಸಿದ್ದರಾಮಯ್ಯ ನಿದ್ದೆಗೆ ಶರಣಾಗುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಟೀಕಿಸಿದೆ.
ಮೌಲ್ವಿಗಳಿಗೆ 10 ಸಾವಿರ ಕೋಟಿ ರೂಪಾಯಿ ಕೊಡಬೇಕು, ಮತಾಂಧ ಜಿಹಾದಿಗಳನ್ನು ರಕ್ಷಣೆ ಮಾಡಬೇಕು, ಪಿಎಫ್‍ಐ ಗೂಂಡಾಗಳನ್ನು ಅಮಾಯಕರೆಂದು ಬಿಡಬೇಕು, ಶಾಲೆಗಳಲ್ಲಿ ಹಿಜಾಬ್ ಹಾಕಿಕೊಂಡು ಹೋಗಬಹುದು, ಗ್ಯಾಂಗ್ ರೇಪ್ ಮಾಡಿದವರನ್ನು ಹೊರ ಬಿಡಬೇಕು ಎಂಬುದು ಸಿದ್ದರಾಮಯ್ಯ ಸಾಹೇಬರು ನಿದ್ದೆಯಿಂದ ತಕ್ಷಣವೇ ಎಚ್ಚರಗೊಳ್ಳುವಂತೆ ಮಾಡುವ ಅಂಶಗಳು ಎಂದು ಬಿಜೆಪಿ ಲೇವಡಿ ಮಾಡಿದೆ. ಜತೆಗೆ, ಇದೇ ಮಜವಾದಿಯ ತುಘಲಕ್ ದರ್ಬಾರ್ ಎಂದು ಬಿಜೆಪಿ ಟೀಕಿಸಿದೆ.
ಅಶೋಕ್ ವಾಗ್ದಾಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೂಡಾ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಅಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಮೂಲಕ ನಿಮ್ಮ ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಿ ಅಲುಗಾಡುತ್ತಿರುವ ತಮ್ಮ ಕುರ್ಚಿ ಉಳಿಸಿಕೂಳ್ಳಬಹುದು ಎಂಬ ಕನಸು ಕಾಣಬೇಡಿ. ತಾವು ಎಷ್ಟೇ ಹಾರಾಡಿದರೂ, ಚೀರಾಡಿದರೂ ಲೋಕಸಭೆ ಚುನಾವಣೆವರೆಗೆ ಮಾತ್ರ ತಮ್ಮ ಕುರ್ಚಿ ಭದ್ರ ಎಂಬುದು ಈಗ ಗುಟ್ಟಾಗಿ ಏನು ಉಳಿದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶ್ವನಾಥ್ ಹಿಂದಿಕ್ಕಿ ಆಗ್ರ ಶ್ರೇಯಾಂಕದ ಚೆಸ್ ಆಟಗಾರನಾದ ಪ್ರಜ್ಞಾನಂದ
ಇಡೀ ವಿಶ್ವವೇ ಮೆಚ್ಚಿರುವ, ಇಡೀ ದೇಶವೇ ಪ್ರೀತಿಸುವ ಅದ್ವಿತೀಯ ನಾಯಕ ನಮ್ಮ ಪ್ರಧಾನಿ ಮೋದಿ ಅವರು. ಅವರ ಶಿಸ್ತಿನ ಜೀವನ, ಪರಿಶ್ರಮದ ಸ್ವಭಾವ, ಹಿಡಿದ ಕೆಲಸ ಮಾಡಿ ಮುಗಿಸುವ ಬದ್ಧತೆ ಇವೆಲ್ಲವೂ ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿದೆ ಎಂದು ಕುಹಕವಾಡಿದ್ದಾರೆ.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದೇನಬೇಕು!
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ದೇವನೆಂತೊಲಿವನಯ್ಯ ?
ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ.