Wednesday, May 1, 2024
Homeಕ್ರೀಡಾ ಸುದ್ದಿವಿಶ್ವನಾಥ್ ಹಿಂದಿಕ್ಕಿ ಆಗ್ರ ಶ್ರೇಯಾಂಕದ ಚೆಸ್ ಆಟಗಾರನಾದ ಪ್ರಜ್ಞಾನಂದ

ವಿಶ್ವನಾಥ್ ಹಿಂದಿಕ್ಕಿ ಆಗ್ರ ಶ್ರೇಯಾಂಕದ ಚೆಸ್ ಆಟಗಾರನಾದ ಪ್ರಜ್ಞಾನಂದ

ನವದೆಹಲಿ,ಜ.17- ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಭಾರತದ ಚೆಸ್ ಆಟಗಾರ ಪ್ರಜ್ಞಾನಂದ ಅವರು ಆಗ್ರ ಶ್ರೇಯಾಂಕದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಟಾಟಾ ಸ್ಟೀಲ್ ಮಾಸ್ಟರ್ಸ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಪ್ರಜ್ಞಾನಂದ ಅವರು ಈ ಸಾಧನೆ ಮಾಡಿದ್ದಾರೆ.

ಅವರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪ್ರಜ್ಞಾನಂದ ಅವರು ಭಾರತದ ಅಗ್ರ ಶ್ರೇಯಾಂಕದ ಪುರುಷರ ಚೆಸ್ ಆಟಗಾರರಾಗಿ ಹೊರಹೊಮ್ಮುವ ಮೂಲಕ ಅನುಭವಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಇಂದು ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಮೆಂಟ್‍ನ 4ನೇ ಸುತ್ತಿನಲ್ಲಿ ಪ್ರಸಕ್ತ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ ನಂತರ ಅವರು ಈ ಮೈಲಿಗಲ್ಲು ಸಾಧಿಸಿದ್ದಾರೆ. ಅದಾನಿ ಗ್ರೂಪ್‍ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ನಂ.1 ಭಾರತೀಯ ಚೆಸ್ ಆಟಗಾರರಾಗಿ ಹೊರ ಹೊಮ್ಮಿರುವ ಪ್ರಜ್ಞಾನಂದ ಅವರನ್ನು ಶ್ಲಾಘಿಸಿದರು.

ಕ್ರಿಯಾತ್ಮಕ ಪ್ರಜ್ಞಾನಂದ ಅವರನ್ನು ಬೆಂಬಲಿಸಲು ನಾವು ತುಂಬಾ ಹೆಮ್ಮೆಪಡುತ್ತೇವೆ. ಅವರು ಕ್ರೀಡೆಯಲ್ಲಿ ಪ್ರಗತಿ ಸಾಧಿಸಿದ ವೇಗ ಮತ್ತು ದಕ್ಷತೆಯು ಗಮನಾರ್ಹವಾದದ್ದು ಮತ್ತು ನಿಜವಾಗಿಯೂ ಎಲ್ಲರಿಗೂ ಉದಾಹರಣೆಯಾಗಿದ್ದಾರೆ. ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಅತ್ಯುನ್ನತ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದಕ್ಕಿಂತ ಹೆಚ್ಚು ಉದಾತ್ತವಾದದ್ದು ಮತ್ತೊಂದಿಲ್ಲ ಮತ್ತು ಅದಾನಿ ಸಮೂಹವು ಈ ಪ್ರಯಾಣದಲ್ಲಿ ಕ್ರೀಡಾಪಟುಗಳನ್ನು ಬೆಂಬಲಿಸಲು ಪೂರ್ಣ ಹೃದಯದಿಂದ ಮೀಸಲಿಟ್ಟಿದೆ ಎಂದು ಅದಾನಿ ಹೇಳಿದ್ದಾರೆ.

ಬಿಹಾರದ 94 ಲಕ್ಷ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಆರ್ಥಿಕ ನೆರವು

ನನ್ನ ದೇಶವು ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಆಡಿದಾಗಲೆಲ್ಲೇ, ರಾಷ್ಟ್ರಕ್ಕಾಗಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವುದು ನನ್ನ ಏಕೈಕ ಗುರಿಯಾಗಿದೆ. ನನ್ನ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಅದಾನಿ ಗ್ರೂಪ್‍ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪ್ರಜ್ಞಾನಂದ ಹೇಳಿದರು.

2023 ರಲ್ಲಿ ಅವರು ವಿಶ್ವ ಕಪ್ ಫೈನಲ್ ತಲುಪಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರರಾದರು ಮತ್ತು ವಿಶ್ವನಾಥನ್ ಆನಂದ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯರಾದರು. 2022 ರಲ್ಲಿ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್‍ಸೆನ್ ಅವರನ್ನು ಹಲವು ಬಾರಿ ಸೋಲಿಸುವ ಮೂಲಕ ಚೆಸ್ ಜಗತ್ತಿನಲ್ಲಿ ತಲೆತಿರುಗುವಂತೆ ಮಾಡಿದ್ದರು. ಗಣಿತವನ್ನು ಇಷ್ಟಪಡುವ ಮತ್ತು ಟಿವಿ ನೋಡುವ ಅಥವಾ ತಮಿಳು ಸಂಗೀತವನ್ನು ಕೇಳುವ ಮೂಲಕ ವಿಶ್ರಾಂತಿ ಪಡೆಯುವ ಚೆನ್ನೈ ಮೂಲದ ಪ್ರಜ್ಞಾನಂದ ಅವರು 2023 ರಲ್ಲಿ ಹ್ಯಾಂಗ್‍ಝೌ ಏಷ್ಯನ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.

RELATED ARTICLES

Latest News