Sunday, December 1, 2024
Homeಇದೀಗ ಬಂದ ಸುದ್ದಿಸರ್ಕಾರದ ಖಜಾನೆ ಖಾಲಿಯಾಗಿದೆ : ಆರ್‌.ಅಶೋಕ್‌ ಆರೋಪ

ಸರ್ಕಾರದ ಖಜಾನೆ ಖಾಲಿಯಾಗಿದೆ : ಆರ್‌.ಅಶೋಕ್‌ ಆರೋಪ

ಬೆಂಗಳೂರು,ಮೇ1- ರೈತರಿಗೆ ಕೊಡುತ್ತಿದ್ದ ಹಾಲಿನ 5 ರೂ. ಪ್ರೋತ್ಸಾಹ ಧನವನ್ನೂ ಕೂಡ ನಿಲ್ಲಿಸಿದ್ದಾರೆ, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಖಜಾನೆ ಖಾಲಿಯಾಗಿದೆ ಅನ್ನುವುದಕ್ಕಿಂತ ಮೋದಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ದೂರುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಸರ್ಕಾರ ಬಂದು ಒಂದು ವರ್ಷವಾಗಿದೆ. ರಾಜ್ಯದ ಜನರ ಮೇಲೆ ತೆರಿಗೆ ಬಾರ ಹೇರಿದ್ದಾರೆ. ಅವರ ಜೇಬಿಗೆ ಕತ್ತರಿ ಹಾಕಿ, ಮಹಿಳೆಯರಿಗೆ ಕೊಡುತ್ತಿದ್ದೇವೇ ಎಂದು ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇನು ತಮ್ಮ ಮನೆಯಿಂದ ಕೊಡುತ್ತಿಲ್ಲ. ವಿಶ್ವ ಬ್ಯಾಂಕ್‌ನಿಂದ ಸಾಲ ತಂದು ಕೊಡುತ್ತಿಲ್ಲ. ನಮ್ಮ ದುಡ್ಡನ್ನೇ ಕಿತ್ತು ನಮಗೆ ಕೊಡುತ್ತಿದ್ದಾರೆ, ಇದು ಜನರಿಗೂ ಗೊತ್ತಾಗಿದೆ ಎಂದರು.ಕಾಂಗ್ರೆಸ್‌ಗೆ ಯೋಗ್ಯತೆ ಇದ್ದರೆ, ಕಳೆದ 20 ವರ್ಷದಲ್ಲಿ ನಾವು ಕೊಟ್ಟ ತೆರಿಗೆ ಎಷ್ಟು, ಕೇಂದ್ರದಿಂದ ರಾಜ್ಯಕ್ಕೆ ಬಂದಿದ್ದು ಎಷ್ಟು? ಎಂಬುದನ್ನು ಬಿಡುಗಡೆ ಮಾಡಿ ಎಂದು ಅಶೋಕ್‌ ಸವಾಲು ಹಾಕಿದರು.

ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಕುರಿತ ಹಾಗೂ ಪ್ರಧಾನಿ ನರೇಂದ್ರಮೋದಿ ಸರ್ಕಾರದ ಪ್ರಧಾನಿ ಮೋದಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತ ಆಡಿಯೋ, ವಿಡಿಯೋಗವನ್ನು ಬಿಡುಗಡೆ ಮಾಡಿದರು.

RELATED ARTICLES

Latest News