Saturday, May 4, 2024
Homeರಾಷ್ಟ್ರೀಯರಾಮಮಂದಿರ ಪ್ರವೇಶಿಸಿದ ರಾಮ್‍ಲಲ್ಲಾ ವಿಗ್ರಹ

ರಾಮಮಂದಿರ ಪ್ರವೇಶಿಸಿದ ರಾಮ್‍ಲಲ್ಲಾ ವಿಗ್ರಹ

ಆಯೋದ್ಯೆ,ಜ.17-ಒಂದು ವಾರದ ಪ್ರಾಣ ಪ್ರತಿಷ್ಠಾ ಸಮಾರಂಭದ ಎರಡನೇ ದಿನವಾದ ಇಂದು ಭಗವಾನ್ ರಾಮ ಲಲ್ಲಾನ ವಿಗ್ರಹವನ್ನು ಮೊದಲ ಬಾರಿಗೆ ರಾಮಮಂದಿರದೊಳಗೆ ತರಲಾಯಿತು. ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ರಾಮ ಲಲ್ಲಾ ಅಥವಾ ಶಿಶು ರಾಮನ ವಿಗ್ರಹವನ್ನು ಮೆರವಣಿಗೆ ಮೂಲಕ ಇಂದು ದೇವಸ್ಥಾನಕ್ಕೆ ತರಲಾಯಿತು.

ಹೊಸ ರಾಮಮಂದಿರದ ಸಂಕೀರ್ಣಕ್ಕೆ ವಿಗ್ರಹವನ್ನು ಕೊಂಡೊಯ್ಯಲು ನಿನ್ನೆ ರಾತ್ರಿಯಿಂದಲೇ ಸಿದ್ಧತೆ ನಡೆದಿತ್ತು. 150ರಿಂದ 200 ಕೆಜಿ ನಡುವೆ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಮೆರವಣಿಗೆಗಾಗಿ ತಡರಾತ್ರಿ ಹೂವಿನಿಂದ ಅಲಂಕರಿಸಿದ ಟ್ರಕ್ ಮೇಲೆ ಇರಿಸಲಾಯಿತು.

ವಿಗ್ರಹವು ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಹಲವಾರು ವಿಧಿವಿಧಾನಗಳನ್ನು ನಡೆಸಲಾಯಿತು. ಜಲ ಯಾತ್ರೆ, ತೀರ್ಥ ಪೂಜೆ, ಬ್ರಾಹ್ಮಣ-ಬಟುಕ್ – ಕುಮಾರಿ-ಸುವಾಸಿನಿ ಪೂಜೆ, ರ್ವನಿ ಪೂಜೆ, ಕಲಾಯಾತ್ರೆಯನ್ನು ಪ್ರಸಾದ್ ಸಂಕೀರ್ಣದಲ್ಲಿರುವ ರಾಮ್ ಲಲ್ಲಾ ವಿಗ್ರಹದ ಮುಂದೆ ನಡೆಸಲಾಯಿತು. ಜಲಯಾತ್ರೆ, ತೀರ್ಥ ಪೂಜೆ, ಬ್ರಾಹ್ಮಣ-ಬಟುಕ್, ಕುಮಾರಿ-ಸುವಾಸಿನಿ ಪೂಜೆ, ರ್ವನಿ ಪೂಜೆ, ಕಲಶಯಾತ್ರೆ ಮತ್ತು ಪ್ರಸಾದ ಆವರಣದಲ್ಲಿ ಭಗವಾನ್ ರಾಮ ಲಲ್ಲಾನ ವಿಗ್ರಹದ ಪ್ರದಕ್ಷಿಣೆ ನಡೆಯಿತು.

ಬಿಹಾರದ 94 ಲಕ್ಷ ಕುಟುಂಬಗಳಿಗೆ ತಲಾ 2 ಲಕ್ಷ ರೂ.ಆರ್ಥಿಕ ನೆರವು

ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯಕ್ಕೆ ಬಂದಿರುವ ರಾಮ ಲಲ್ಲಾ ವಿಗ್ರಹವನ್ನು ನಾಳೆ ಅಧಿಕೃತವಾಗಿ ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. 6 ದಿನಗಳ ಕಾಲ ನಡೆಯುವ ಧಾರ್ಮಿಕ ವಿವಿಧಾನಗಳು ಜನವರಿ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸುವ ಮಹಾ ಸಮರ್ಪಣೆ ಅಥವಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮುಕ್ತಾಯಗೊಳ್ಳಲಿವೆ. ಜನವರಿ 23 ರಿಂದ ರಾಮಜನ್ಮಭೂಮಿ ದೇಗುಲ ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗಲಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

RELATED ARTICLES

Latest News