ಬೆಂಗಳೂರು, ಜ.18- ಮೊಬೈಲ್‌ನಲ್ಲಿ ಯೂ ಟ್ಯೂಬ್ ಗಮನಿಸುತ್ತಾ ಅದರಲ್ಲಿನ ಫೇಕ್ ವಿಡಿಯೋ ನೋಡಿದ ವೃದ್ಧರೊಬ್ಬರು ಹಣದಾಸೆಯಿಂದಾಗಿ 2.3 ಲಕ್ಷ ರೂ. ಕಳೆದುಕೊಂಡಿದ್ದು, ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ವೃದ್ಧರೊಬ್ಬರು ಯೂ ಟ್ಯೂಬ್ ಫಾಲೋ ಮಾಡುತ್ತಿದ್ದರು. ಸೈಬರ್ ವಂಚಕರು ಸೃಷ್ಟಿಸಿದ್ದ 2 ರೂ. ಹಾಗೂ 5 ರೂ. ನಾಣ್ಯಗಳಿದ್ದರೆ ಅದಕ್ಕೆ ಬದಲಾಗಿ ಲಕ್ಷಾಂತರ ಹಣ ಕೊಡುವುದಾಗಿ ಬಿತ್ತರವಾಗಿದ್ದ ನಕಲಿ ವಿಡಿಯೋವನ್ನು ಗಮನಿಸಿ ದುರಾಸೆ ಬಂದಿದೆ.
ನಂತರ ವಿಡಿಯೋದಲ್ಲಿದ್ದ ಫೋನ್ ನಂಬರ್ಗೆ ಕರೆ ಮಾಡಿದ ವೃದ್ಧ, ತನ್ನ ಬಳಿ 2 ರೂ. ಹಾಗೂ 5 ರೂ. ನಾಣ್ಯ ಇದೆ ಎಂದು ಹೇಳಿದಾಗ, ಸೈಬರ್ ಅಪರಾಧಿಗಳು ತಮ್ಮದು ಅಸಲಿ ವ್ಯವಹಾರವೆಂದು ನಂಬಿಸಿ ಹಳೆಯ ನಾಣ್ಯಗಳನ್ನು ಎಣಿಸುವ ದೃಶ್ಯ ತೋರಿಸಿದ್ದಾರೆ.
ತಮಗೆ ನಾಣ್ಯಗಳ ಫೋಟೋ ತೆಗೆದು ಕಳುಹಿಸಿ ಎಂದು ವಂಚಕರು ಹೇಳಿದಾಗ, ಅದರಂತೆ 2, 5 ಹಾಗೂ 1 ರೂ. ನಾಣ್ಯಗಳ ಫೋಟೋ ತೆಗೆದು ಕಳುಹಿಸಿದಾಗ ಇವು 31 ಲಕ್ಷ ರೂ. ಬೆಲೆಬಾಳುತ್ತೆ ಎಂದು ನಂಬಿಸಿದ್ದಾರೆ. ನಂತರ ಸೈಬರ್ ವಂಚಕರು ವೃದ್ಧನಿಗೆ ಕರೆ ಮಾಡಿ ತೆರಿಗೆ ನಿಯಮ ಉಲ್ಲೇಖಿಸಿ ನೀವು ಕಮಿಷನ್ ಕೊಡಬೇಕು ಎಂದು ಹೇಳಿದ್ದಾರೆ.
ಹಣ ವರ್ಗಾವಣೆಗಾಗಿ ವೃದ್ಧ ಆನ್ಲೈನ್ ನಂಬರ್ ಕೊಟ್ಟು, ಒಟಿಪಿ ಸಹ ಹೇಳಿದ್ದಾರೆ. ತಕ್ಷಣ ವಂಚಕರು ವೃದ್ಧನ ಖಾತೆಯಿಂದ 2.3 ಲಕ್ಷ ರೂ. ಎಗರಿಸಿದ್ದಾರೆ. ಅಲ್ಲದೆ, ಮತ್ತೆ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ಕೇಳಿದಾಗ, ಅನುಮಾನ ಬಂದು, ಹಣ ಕಳುಹಿಸಲು ಆಗುವುದಿಲ್ಲವೆಂದಾಗ, ಆರೋಪಿಗಳು ಅಲರ್ಟ್ ಆಗಿದ್ದಾರೆ.ನಂತರದ ದಿನಗಳಲ್ಲಿ ಸೈಬರ್ ವಂಚಕರು ವೃದ್ಧನಿಗೆ ಕರೆ ಮಾಡಿ ನಾವು ಮುಂಬೈ ಪೊಲೀಸರೆಂದು ಕರೆ ಮಾಡಿ, ನಿಮ್ಮ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣ ಇದೆಯೆಂದು ಹೇಳಿ; ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾರೆ.
ಇದರಿಂದ ಗಾಬರಿಯಾದ ವೃದ್ಧ, ಹಲಸೂರು ಠಾಣೆ ಪೊಲೀಸರ ಮೊರೆ ಹೋಗಿ, ತಾನು ಯಾವುದೇ ತಪ್ಪು ಮಾಡಿಲ್ಲ, ಯೂ ಟ್ಯೂಬ್ನಲ್ಲಿನ ವಿಡಿಯೋ ನೋಡಿ ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸೈಬರ್ ವಂಚಕರ ಮೊಬೈಲ್ ಕರೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಸೈಬರ್ ವಂಚಕರು ಮತ್ತೆ ವೃದ್ಧನಿಗೆ ಕರೆ ಮಾಡಿ ನಾವು ಕೇಂದ್ರ ತನಿಖಾ ಸಂಸ್ಥೆಯ ಅಕಾರಿಗಳು, ನಿಮ್ಮ ಪೊಲೀಸರಿಗೆ ಹೆದರುವುದಿಲ್ಲ. ನಿಮ್ಮನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅನುಚಿತ ವರ್ತನೆ ಯುವಕನಿಗಾಗಿ ಶೋಧ..
ಬೆಂಗಳೂರು,ಜ.18- ನಗರದ ಹೋಟೆಲ್ವೊಂದರ ಬಳಿ ಕಾಮುಕನೊಬ್ಬ ಹಿಂದಿನಿಂದ ಯುವತಿಯನ್ನು ಸ್ಪರ್ಶಿಸಿ ವಿಕೃತಿ ಮೆರೆದಿದ್ದು, ಆತನಿಗಾಗಿ ವಿಜಯನಗರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ. ವಿಜಯನಗರ ಆರ್ಪಿಸಿ ಲೇಔಟ್ನಲ್ಲಿರುವ ಹೋಟೆಲ್ವೊಂದಕ್ಕೆ ಡಿ.31ರಂದು ಮೂವರು ಯುವಕರು ಬಂದು ದೋಸೆ ತಿನ್ನುತ್ತಾ ಹರಟೆ ಹೊಡೆಯುತ್ತಿದ್ದರು.
ಉಡುಪಿಯ ಸಾಂಸ್ಕೃತಿಕ ಶ್ರೀಮಂತಿಕೆ ವಿಶ್ವಕ್ಕೆ ಮಾದರಿ : ಲಕ್ಷ್ಮಿ ಹೆಬ್ಬಾಳ್ಕರ್
ಆ ಸಂದರ್ಭದಲ್ಲಿ ಹೋಟೆಲ್ಗೆ ಬಂದ ಯುವತಿ ಕ್ಯಾಶ್ ಕೌಂಟರ್ ಬಳಿ ಹೋಗಿ ನಿಂತಿದ್ದಾಗ ಈ ಮೂವರು ಯುವಕರ ಪೈಕಿ ಒಬ್ಬಾತ ಹಣ ಕೊಡಲು ಕೌಂಟರ್ ಬಳಿ ಹೋಗುತ್ತಾ ಅಲ್ಲೇ ನಿಂತಿದ್ದ ಯುವತಿಗೆ ಹಿಂದಿನಿಂದ ಸ್ಪರ್ಶಿಸಿ ಅನುಚಿತವಾಗಿ ವರ್ತಿಸಿದಾಗ, ಉಳಿದಿಬ್ಬರು ಸ್ನೇಹಿತನ ವರ್ತನೆ ನೋಡಿ ಖುಷಿಪಟ್ಟಿದ್ದಾರೆ.ತಕ್ಷಣ ಯುವತಿ ಈ ಬಗ್ಗೆ ಪ್ರಶ್ನಿಸಿದಾಗ ಯುವಕ-ಯುವತಿ ನಡುವೆ ಗಲಾಟೆ ನಡೆದು ಕೂಗಾಡಿದಾಗ ಸ್ಥಳೀಯರು ಜಮಾಯಿಸುತ್ತಿದ್ದಂತೆ ಮೂವರು ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಗೆ ಹೋಟೆಲ್ ಕ್ಯಾಶಿಯರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಸಭ್ಯ ತೋರಿದ ಯುವಕನಿಗಾಗಿ ಶೋಧ ಕೈಗೊಂಡಿದ್ದಾರೆ.