Thursday, December 12, 2024
Homeರಾಷ್ಟ್ರೀಯ | National857 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ

857 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ

ಬೆಂಗಳೂರು,ಜ.18- ಮೆಟ್ರೋ ರೈಲು ಹಳಿಗಳಿಗೆ ಜಿಗಿಯುವವರಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳಲ್ಲಿ ಸಿಬಿಟಿಸಿ ಸಿಗ್ನಲಿಂಗ್ ಮತ್ತು ಪ್ಲಾಟ್ ಫಾರ್ಮ್ ಸ್ಟ್ರೀನ್ ಡೋರ್ (ಪಿಎಸ್‌ಡಿ ) ಅಳವಡಿಕೆಯ ಟೆಂಡರ್ ಫೈನಲ್ ಆಗಿದೆ. ಸಿಬಿಟಿಸಿ ಸಿಗ್ನಲಿಂಗ್ ಮತ್ತು ಪಿಎಸ್‌ಡಿ ಅಳವಡಿಕೆಗೆ 857 ಕೋಟಿ ರೂ.ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್ ಶಂಕರ್ ತಿಳಿಸಿದ್ದಾರೆ.

ಮೆಟ್ರೋ ಹಳಿಯ ಮೇಲೆ ಜಿಗಿಯುವವರ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿದೆ. ಜನವರಿ ಮೊದಲ ವಾರದಲ್ಲಿ ಎರಡು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇಂತಹ ಅವಘಡಗಳನ್ನು ತಡೆಯುವ ಉದ್ದೇಶದಿಂದ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಲಾಗಿದೆ. ಒಟ್ಟು 9 ಪ್ಲಾಟ್ ಫಾರಂಗಳಲ್ಲಿ ಹೆಚ್ಚುವರಿಯಾಗಿ 326 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ರೈಲುಗಳು ಸಂಚರಿಸುವಾಗ ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡಲು 326 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ರೈಲುಗಳ ಆಗಮನದ ಮೊದಲು ಪ್ರಯಾಣಿಕರನ್ನು ಸರದಿ ಪ್ರಕಾರ ನಿಲ್ಲಿಸುವುದು, ಹಳದಿ ಗೆರೆ ದಾಟದಂತೆ ನೋಡಿಕೊಳ್ಳುವುದು ಭದ್ರತಾ ಸಿಬ್ಬಂದಿ ಗಳ ಕೆಲಸವಾಗಿರುತ್ತದೆ. ಮುಂದುವರೆದು ಸುರಕ್ಷತೆ ದೃಷ್ಟಿಯಿಂದ ಪ್ಲಾಟ್ಫಾರಂ ಸ್ಟ್ರೀನ್ ಡೋರ್ (ಪಿಎಸ್‌ಡಿ ) ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

ನಮ್ಮ ಮೆಟ್ರೊದ ಗುಲಾಬಿ ಮತ್ತು ನೀಲಿ ಮಾರ್ಗದ ಹೊಸ ನಿಲ್ದಾಣಗಳು ಪ್ಲಾಟ್ ಫಾರ್ಮ್ ಪರದೆಯ ಬಾಗಿಲುಗಳಲ್ಲಿ ಪಿಎಸ್ಡಿ ಅಳವಡಿಸುವ ಕಾರ್ಯವನ್ನು ಅಲ್ಸ್ಟಾಮ್ ಟ್ರಾನ್ಸ್ ಪೋರ್ಟ್ ಇಂಡಿಯ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪರ್ಯಾಯ ಪೀಠಾರೋಹಣ ಮಾಡಿದ ಸುಗುಣೇಂದ್ರ ತೀರ್ಥರು

ಹಾಕಲು ಟೆಂಟರ್
21 ಕಿ.ಮೀ ಉದ್ದದ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ ಟೂ ನಾಗವಾರ ಮತ್ತು 56 ಕಿ.ಮೀ. ನೀಲಿ ಮಾರ್ಗ (ಸೆಂಟ್ರಲ್ ಸಿಲ್ಕ ಬೋರ್ಡ್ – ಕೆಆರ್ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ, ನಿಲ್ದಾಣಗಳಲ್ಲಿ ಪಿಎಸ್ಡಿ ಅಳವಡಿಕೆಗೆ ಟೆಂಡರ್ ಫೈನಲ್ ಆಗಿದೆ.

ಪೂರ್ಣ-ಎತ್ತರದ ಪ್ಲಾಟ್ಫಾರ್ಮ್ ಪರದೆಯ ಬಾಗಿಲುಗಳನ್ನು (ಪಿಎಸ್ಡಿ) 13 ಭೂಗತ ಹಾಗೂ 37 ಎಲಿವೇಟೆಡ್ ನಿಲ್ದಾಣಗಳಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಹಳದಿ ಮಾರ್ಗದ ಇನೋಸಿಸ್ ನಿಲ್ದಾಣದಲ್ಲಿ ಇನೋಸಿಸ್ ಫೌಂಡೇಶನ್, ಪ್ಲಾಟ್ಫಾರಂ ಸ್ಟ್ರೀನ್ ಡೋನ್ (ಪಿಎಸ್‌ಡಿ) ಅಳವಡಿಸಲು ಮನವಿ ಮಾಡಿಕೊಂಡಿತ್ತು. ಸಿಎಸ್ ಡಿ ಸ್ಟ್ರೀನ್ ಡೋರ್ ಗಾಗಿ ಹೆಚ್ಚುವರಿ ವೆಚ್ಚ ಭರಿಸಲು ಇನೋಸಿಸ್ ಒಪ್ಪಿಗೆ ನೀಡಿದೆ.

RELATED ARTICLES

Latest News