ಬೆಂಗಳೂರು, ಜೂ.9- ಕಳೆದ ಹತ್ತು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ಇಂದು ಏರಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ.ನಿನ್ನೆ ಕೂಡಾ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿತ್ತು. ಇಂದು ಚಿನ್ನದ ದರ ಏರಿಕೆಯಾಗಿದ್ದರೆ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರೆದಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನ 1 ಗ್ರಾಂಗೆ 147 ರೂ. ಹೆಚ್ಚಳವಾಗಿದ್ದು, 15,316 ರೂ.ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 135 ರೂ. ಹೆಚ್ಚಳವಾಗಿದ್ದು, 14,040 ರೂ.ನಷ್ಟಿದೆ.
ನಿನ್ನೆ ಕ್ರಮವಾಗಿ 24 ಕ್ಯಾರೆಟ್ ಚಿನ್ನ 104 ರೂ. 22 ಕ್ಯಾರೆಟ್ ಚಿನ್ನ 95 ರೂ.ನಷ್ಟು ಇಳಿಕೆಯಾಗಿತ್ತು. ಇಂದು 18 ಕ್ಯಾರೆಟ್ ಚಿನ್ನ ಒಂದು ಗ್ರಾಂಗೆ 110 ರೂ.ಗೆ ಹೆಚ್ಚಳವಾಗಿದ್ದು, 11,487 ರೂ.ಗೆ ತಲುಪಿದೆ.
ಕಳೆದ ಹತ್ತ್ತನ್ನೆರಡು ದಿನಗಳಿಂದ ಇಳಿಮುಖವಾಗಿದ್ದ ಬೆಳ್ಳಿಯ ದರ ನಿನ್ನೆ ಸಹ ಒಂದು ಕೆಜಿಗೆ 5 ಸಾವಿರ ರೂ.ಗಳಷ್ಟು ಕಡಿಮೆಯಾಗಿ 2,60,000 ರೂ.ಗೆ ತಲುಪಿತ್ತು. ಇಂದು ಯಾವುದೇ ಏರಿಳಿತವಿಲ್ಲದೆ ಅದೇ ದರ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ಜಾಗತಿಕವಾಗಿ ಉಂಟಾಗುವ ಬದಲಾವಣೆಗಳ ಪರಿಣಾಮ ಚಿನಿವಾರಪೇಟೆಯ ಮೇಲೂ ಆಗಲಿದ್ದು, ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಆಗಾಗ್ಗೆ ಏರಿಳಿತವಾಗುವುದು ಸಹಜ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
