Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2026)

Today's Horoscope

ನಿತ್ಯ ನೀತಿ । ಬಯಸಿದ್ದೆಲ್ಲ ಸಿಗುವಂತಿದ್ದರೆ ಬದುಕಿಗೆ ಬೆಲೆ ಇರುತ್ತಿರಲಿಲ್ಲ, ಅನಿಸಿದ್ದೆಲ್ಲ ಹೇಳುವಂತಿದ್ದರೆ ವೌನಕ್ಕೆ ಅರ್ಥ ಇರುತ್ತಿರಲಿಲ್ಲ!!

ಪಂಚಾಂಗ : ಮಂಗಳವಾರ, 09-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ನವಮಿ / ನಕ್ಷತ್ರ: ಪೂ.ಭಾ. / ಯೋಗ: ಪ್ರೀತಿ / ಕರಣ: ತೈತಿಲ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.45
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30

ರಾಶಿಭವಿಷ್ಯ :
ಮೇಷ: ಸಮಾಧಾನದಿಂದ ವಿಚಾರ ವಿನಿಮಯ ಮಾಡಿಕೊಂಡರೆ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ.
ವೃಷಭ: ಆರ್ಥಿಕವಾಗಿ ಅನುಕೂಲಕರ ದಿನವಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮಿಥುನ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತ ರಿಗೆ ಸಹಾಯ ಮಾಡುವಿರಿ.

ಕಟಕ: ಎಲ್ಲರಿಂದಲೂ ತಪ್ಪಾಗುವುದು ಸಹಜ. ಧೈರ್ಯವಾಗಿ ಮುನ್ನುಗ್ಗಬೇಕು.
ಸಿಂಹ: ಕೆಲಸಗಳು ಸರಾಗವಾಗಿ ನಡೆದು ಮನಸ್ಸು ನಿರಾಳವಾಗಲಿದೆ. ಉತ್ತಮ ದಿನ.
ಕನ್ಯಾ: ತಾಂತ್ರಿಕ ಕ್ಷೇತ್ರ ದವರಿಗೆ ಮೇಲಧಿಕಾರಿ ಗಳಿಂದ ಹೆಚ್ಚಿನ ಒತ್ತಡಗಳು ಎದುರಾಗಲಿವೆ.

ತುಲಾ: ಸ್ನೇಹಿತರು ಹಾಗೂ ನೆರೆಹೊರೆಯವರಿಂದ ಆರ್ಥಿಕವಾಗಿ ನೆರವು ದೊರೆಯಲಿದೆ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಬಹು ದಿನಗಳ ಕನಸು ನನಸಾಗಲಿದೆ.
ಧನುಸ್ಸು: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

ಮಕರ: ಮಕ್ಕಳ ವಿಷಯದಲ್ಲಿ ಜಾಗ್ರತೆಯಿಂದಿರಿ. ಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ಗಣ್ಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ಮೇಲಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯಲಿದೆ.

RELATED ARTICLES

Latest News