ಚೆನ್ನೈ, ಜೂ.8- ಐತಿಹಾಸಿಕ ನಾರ್ವೆ ಚೆಸ್ ಟೂರ್ನಿಮೆಂಟ್ನಲ್ಲಿ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ ಚೆಸ್ ಲಿಟ್ಲಲ್ ಮಾಸ್ಟರ್ ಪ್ರಜ್ಞಾನಂದ ಅವರೊಂದಿಗೆ ತಮಿಳುನಾಡಿನ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಚೆಸ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ನಾರ್ವೆ ಚೆಸ್ ಟೂರ್ನಿಮೆಂಟ್ನ ವಿಸ್ಲೆ ಸೋ ಅವರನ್ನು ಮಣಿಸುವ ಮೂಲಕ ಪ್ರಜ್ಞಾನಂದ ಅವರು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪ್ರಜ್ಞಾನಂದ ಅವರು ಭಾರತದವರೇ ಆದ ಜಿ.ಗುಕೇಶ್, ವಿಶ್ವದ ನಂಬರ್ ಆಟಗಾರ ಮಾಗ್ಯೂಸ್ ಕ್ಲಾರ್ಲೆಸ್ರನ್ನು ಮಣಿಸುವ ಮೂಲಕ ಫೈನಲ್ ಹಂತಕ್ಕೆ ತಲುಪಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ಞಾನಂದ್ ಅವರು, ವಿಜಯ್ ಅವರೊಂದಿಗೆ ಚೆಸ್ ಆಡಿದ್ದಲ್ಲದೆ ಅವರಿಗೆ (ವಿಜಯ್) ಅವರಿಗೆ ಈ ಆಟದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ, ಆವರೊಂದಿಗೆ ಚೆಸ್ ಆಡಿದ್ದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ಈ ವೇಳೆ ಪ್ರಜ್ಞಾನಂದ ಅವರ ಮುಂದಿನ ಚೆಸ್ ಭವಿಷ್ಯಕ್ಕೆ ಸಿಎಂ ವಿಜಯ್ 50 ಲಕ್ಷ ರೂ.ಗಳನ್ನು ವಿತರಿಸಿದರು. ಈ ವೇಳೆ ಪ್ರಜ್ಞಾನಂದರವರ ತಾಯಿ ನಾಗಲಕ್ಷಿ, ಲೋಕೋ ಪಯೋಗಿ ಇಲಾಖೆ ಸಚಿವ ಆಧವ್ ಅರ್ಜುನ್ ಉಪಸ್ಥಿತರಿದ್ದರು.
