ನಿತ್ಯ ನೀತಿ : ನೀವು ಸಾವಿರ ಒಳ್ಳೆಯ ಕೆಲಸ ಮಾಡಿದರೂ ಅದರ ಆಯಸ್ಸು ಒಂದು ತಪ್ಪು ಮಾಡುವವರೆಗೆ ಮಾತ್ರ.
ಪಂಚಾಂಗ : ಭಾನುವಾರ, 26-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಐಂದ್ರ / ಕರಣ: ಕೌಲವ
ಸೂರ್ಯೋದಯ – ಬೆ.6.04
ಸೂರ್ಯಾಸ್ತ – 06.50
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಪ್ರತಿ ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸಿ. ಕಚೇರಿಯಲ್ಲಿ ವಿನಾಕಾರಣ ಕಿರುಕುಳ ಉಂಟಾದೀತು.
ವೃಷಭ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಮಿಥುನ: ಕಾಗದದ ಆಮದು ಹಾಗೂ ಉದ್ಯಮದಾರರಿಗೆ ಉತ್ತಮ ಆದಾಯವಿರುವುದು.
ಕಟಕ: ತಂದೆಯಿಂದ ನಿಮ್ಮ ವೃತ್ತಿಗೆ ಸಹಾಯ ದೊರೆಯುತ್ತದೆ. ಶತ್ರುಗಳ ಕಾಟ ತಪ್ಪಲಿದೆ.
ಸಿಂಹ: ಬರುವ ಅವಕಾಶ ಸದುಪಯೋಗಪಡಿಸಿ ಕೊಳ್ಳಿ.
ಕನ್ಯಾ: ಒಳ್ಳೆಯ ಜನ ರೊಂದಿಗೆ ಸಂಪರ್ಕ ಹೊಂದುವಿರಿ. ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ.
ತುಲಾ: ದೂರ ಪ್ರಯಾಣ ಮಾಡುವುದರಿಂದ ಲಾಭ ದಾಯಕವಾಗಿ ರುತ್ತದೆ.
ವೃಶ್ಚಿಕ: ಹಿರಿಯರ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಧನುಸ್ಸು: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ಮಕರ: ಗುರು-ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಸಮಸ್ಯೆಗಳು ಬಗೆಹರಿಯಲಿವೆ.
ಕುಂಭ: ಮಹಿಳೆಯರು ಮೋಸ ಹೋಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮೀನ: ಉದ್ಯೋಗ ಸ್ಥಳದಲ್ಲಿ ಮೇಲಽಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
