Friday, November 22, 2024
Homeಮನರಂಜನೆ8 ಅಡಿ ಎತ್ತರದ ಪುನೀತ್ ಕಂಚಿನ ಪುತ್ಥಳಿ ಲೋಕಾರ್ಪಣೆ

8 ಅಡಿ ಎತ್ತರದ ಪುನೀತ್ ಕಂಚಿನ ಪುತ್ಥಳಿ ಲೋಕಾರ್ಪಣೆ

ಕೆಆರ್ ಪೇಟೆ ,ಅ.3- ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಪುನೀತ್ ಯುವ ಸಾಮ್ರಾಜ್ಯದ ವತಿಯಿಂದ ನೂತನವಾಗಿ ನಿರ್ಮಿಸಿರುವ ಎಂಟು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅಶ್ವಿನಿ ಪುನೀತ್‍ರಾಜಕುಮಾರ್ ಅವರು ಲೋಕಾರ್ಪಣೆ ಮಾಡಿದರು. ಪುನೀತ್‍ಯುವ ಸಾಮ್ರಾಜ್ಯದ ಬಳಗದ ವತಿಯಿಂದ ನಿರ್ಮಾಣ ಮಾಡಿರುವ ಪುನೀತ್ ರಾಜಕುಮಾರ್ ಅವರ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಸ್ವತಃ ಪುನೀತ್ ಧರ್ಮಪತ್ನಿ ಅಶ್ವಿನಿ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪುನೀತ್ ಸಾಮ್ರಾಜ್ಯದ ಯುವ ಬಳಗದ ಪದಾಧಿಕಾರಿಗಳು ಪಟಾಕಿಗಳನ್ನು ಸಿಡಿಸಿ ಪುಷ್ಪವೃಷ್ಟಿ ಮಾಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದರು. ಈ ವೇಳೆ ಕನ್ನಡ ಬಾವುಟಗಳು ಹಾರಾಡಿದವು. ಪುನೀತ್ ಅವರ ಪರವಾಗಿ ಜಯಘೋಷಗಳು ಮೊಳಗಿದವು.

ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಜಗದೀಶ್ ಮಾತನಾಡಿ, ಯುವಜನರು ಪುನೀತ್ ಅವರಂತೆಯೇ ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಮುನ್ನ ಡೆದು ಗುರಿಸಾಧನೆ ಮಾಡಬೇಕು. ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸ ಬೇಕು ಎಂದು ಮನವಿ ಮಾಡಿದರು.

ಕೃಷ್ಣರಾಜಪೇಟೆ ಪಟ್ಟಣದ ಹೈಸ್ಕೂಲ್ ಆಫ್ ಡ್ಯಾನ್ಸ್, ಪ್ರಿನ್ಸೆಸ್ ಸ್ಕೂಲ್‍ಆಫ್ ಡ್ಯಾನ್ಸ್, ನಾಟ್ಯ ನೃತ್ಯ ಶಾಲೆ, ನೃತ್ಯಪಯಣ ನಾಟ್ಯ ಶಾಲೆಯ ವಿದ್ಯಾರ್ಥಿಗಳು ಆದರ್ಶಕ ನೃತ್ಯ ಪ್ರದರ್ಶನ ಮಾಡಿ ಶಾಸ್ತ್ರೀಯ ಭರತನಾಟ್ಯ ಪ್ರದರ್ಶನ ನೀಡಿ ರಂಜಿಸಿದರು. ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಪುರಸಭೆ ಅಧ್ಯಕ್ಷ ನಟರಾಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ, ಮನೋಹರಗೌಡ, ಮಂಡ್ಯ ರವಿ, ಶೀಳನೆರೆಕೇಶವ್, ಮಡವಿನಕೋಡಿ ಮಂಜುನಾಥ್, ಸಕಲೇಶಪುರದ ಜೂನಿಯರ್ ಪುನೀತ್‍ಅಪ್ಪು ಸೇರಿದಂತೆ ಸಾವಿರಾರು ಪುನೀತ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಕಲ್ಲಹಳ್ಳಿಯ ಭೂವರಹನಾಥ ದೇವಾಲಯದ ವತಿಯಿಂದ ಸುಮಾರು 5000 ಜನರಿಗೆ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಭಿಮಾನಿಗಳಿಂದ ರಕ್ತದಾನ: ಪುನೀತ್ ಪುತ್ಥಳಿ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಮಂಡ್ಯದ ಸಂಜೀವಿನಿ ರಕ್ತನಿ ಸಂಚಾರಿ ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ನೂರೈವತ್ತಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದರೆ, ಒಂದು ಸಾವಿರಕ್ಕೂ ಹೆಚ್ಚು ಯುವಕರು ನೇತ್ರದಾನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಅಗಲಿದ ಪುನೀತ್ ರಾಜಕುಮಾರ್ ಅವರ ಮಹಾಚೇತನಕ್ಕೆ ಭಕ್ತಿ ನಮನ ಸಲ್ಲಿಸಿದರು. ಮಂಡ್ಯ ಜಿಲ್ಲಾಧ್ಯಕ್ಷ ಡಾ.ಯೋಗಣ್ಣ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಸಮಾಜ ಸೇವಕರಾದ ವಿಜಯ್‍ರಾಮೇಗೌಡ, ಆಲಂಬಾಡಿಕಾವಲು ಮಲ್ಲಿಕಾರ್ಜುನ ಹಾಗೂ ಪುನೀತ್ ಯುವ ಸಾಮ್ರಾಜ್ಯದ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.

RELATED ARTICLES

Latest News