Friday, July 19, 2024
Homeರಾಜ್ಯರಾಜ್ಯದಲ್ಲಿ ಮತ್ತೆ ಮಳೆ ಬರುವ ಸಾಧ್ಯತೆ ವಿರಳ

ರಾಜ್ಯದಲ್ಲಿ ಮತ್ತೆ ಮಳೆ ಬರುವ ಸಾಧ್ಯತೆ ವಿರಳ

ಬೆಂಗಳೂರು,ಅ.3- ರಾಜ್ಯದಲ್ಲಿ ಇನ್ನೊಂದು ವಾರ ಕಾಲ ಒಣಹವೆ ಮುಂದುವರೆಯಲಿದ್ದು, ಮಳೆ ಬರುವ ಸಾಧ್ಯತೆಗಳು ಕಡಿಮೆ. ಕಳೆದ ಒಂದು ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗುವ ಆಶಾಭಾವನೆ ಮೂಡಿಸಿತ್ತು. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಸದ್ಯಕ್ಕೆ ಮಳೆ ಬರುವಂತಹ ಯಾವುದೇ ರೀತಿಯ ಬದಲಾವಣೆಗಳು ಕಂಡುಬರುತ್ತಿಲ್ಲ. ಹೀಗಾಗಿ ಇನ್ನು ಒಂದು ವಾರ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ತೀರ ವಿರಳ ಎಂದು ಹವಾಮಾನ ತಜ್ಞರು ತಿಳಿಸಿದರು.

ವಾರದ ನಂತರ ಒಂದೆರಡು ದಿನ ಮಳೆಯಾಗುವ ಮುನ್ಸೂಚನೆಗಳಿವೆ. ಸದ್ಯಕ್ಕೆ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಒಂದೆರಡು ಕಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಆಗಸ್ಟ್, ಸೆಪ್ಟೆಂಬರ್‍ನಂತೆ ಅಕ್ಟೋಬರ್‍ನಲ್ಲೂ ಮಳೆ ಕೊರತೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅವರು ಹೇಳಿದ್ದಾರೆ.

ಭೀಕರ ಅಪಘಾತ : ತಾಯಿ-ಮಗು ಸಜೀವ ದಹನ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆ.26ರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.65, ಉತ್ತರ ಒಳನಾಡಿನಲ್ಲಿ ಶೇ.42ರಷ್ಟು ಮಳೆ ಕೊರತೆಯಾಗಿದ್ದರೆ, ಮಲೆನಾಡಿನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹಾಗೂ ಕರಾವಳಿಯಲ್ಲಿ ಶೇ.130ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ ವಾಡಿಕೆಗಿಂತ ಶೇ.17ರಷ್ಟು ಕಡಿಮೆ ಮಳೆಯಾದ ವರದಿಯಾಗಿದೆ. ಮಲೆನಾಡು ಭಾಗದಲ್ಲಿ ವಾಡಿಕೆ ಪ್ರಮಾಣದ ಮಳೆಯಾದ ಹಿನ್ನಲೆಯಲ್ಲಿ ಪ್ರಮುಖ ಜಲಾಶಯಗಳ ಒಳಹರಿವು ಸ್ವಲ್ಪ ಹೆಚ್ಚಳವಾಗಿತ್ತು.

ನಿನ್ನೆಯ ಮಾಹಿತಿ ಪ್ರಕಾರ ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ವರಾಹಿ ಹಾಗೂ ಸೂಪಾ ಜಲಾಶಯಗಳಿಗೆ ಒಟ್ಟಾರೆ 22933 ಕ್ಯೂಸೆಕ್ಸ್‍ನಷ್ಟು ಒಳಹರಿವಿತ್ತು. ಕಾವೇರಿ ಕೊಳ್ಳದ ಹಾರಂಗಿ-3000, ಹೇಮಾವತಿ-8900, ಕೆಆರ್‍ಎಸ್- 5800 ಹಾಗೂ ಕಬಿನಿ ಜಲಾಶಯಕ್ಕೆ 8000 ಕ್ಯೂಸೆಕ್‍ಗೂ ಹೆಚ್ಚು ಒಳಹರಿವು ಇತ್ತು.

ತಮಿಳುನಾಡಿಗೆ ಕಾವೇರಿಕೊಳ್ಳದಿಂದ ನೀರು ಹರಿಸಿದ ಪರಿಣಾಮ ಈ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಒಟ್ಟಾರೆ ಶೇ.54ರಷ್ಟು ಮಾತ್ರ ನಾಲ್ಕು ಜಲಾಶಯಗಳಲ್ಲಿ ನೀರು ಸಂಗ್ರಹವಾಗಿದೆ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ಈ ನಾಲ್ಕು ಜಲಾಶಯಗಳ ಒಟ್ಟು ಸಾಮಥ್ರ್ಯ 114.57 ಟಿಎಂಸಿ ಅಡಿ ಆಗಿದ್ದು, ಪ್ರಸ್ತುತ 62.38 ಟಿಎಂಸಿ ಅಡಿ ಮಾತ್ರ ಇದೆ. ಕಳೆದ ವರ್ಷ ಇದೇ ಅವಯಲ್ಲಿ 110.09 ಟಿಎಂಸಿ ಅಡಿ ನೀರಿತ್ತು. ರಾಜ್ಯದ ಪ್ರಮುಖ ಜಲಾಶಯಗಳ ಪೈಕಿ ವರಾಹಿಯನ್ನು ಹೊರತುಪಡಿಸಿದರೆ ಅತಿ ಕಡಿಮೆ ನೀರು ಸಂಗ್ರಹವಾಗಿರುವ ಜಲಾಶಯ ಕೆಆರ್‍ಎಸ್. ಈ ಜಲಾಶಯದಲ್ಲಿ ಕೇವಲ ಶೇ44ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.

ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದ ಒಳಹರಿವು ಮಳೆ ಕಡಿಮೆಯಾಗಿರುವುದರಿಂದ ಇಳಿಕೆಯಾಗಲಿದೆ. ಸದ್ಯಕ್ಕೆ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಇಲ್ಲದಿರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗುವ ಸಾಧ್ಯತೆಗಳು ಇಲ್ಲ ಎನ್ನಬಹುದಾಗಿದೆ.

RELATED ARTICLES

Latest News