ತಿರುಪತಿ,ಜ.20- ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಗೆ ತಿರುಪತಿ ಲಡ್ಡು ಆಗಮನವಾಗಿದೆ. ತಿರುಮಲ ತಿರುಪತಿ ದೇವಸ್ಥಾನ ಒಂದು ಲಕ್ಷ ವಿಶ್ವವಿಖ್ಯಾತ ತಿರುಪತಿ ಲಡ್ಡುಗಳನ್ನು ಅಯೋಧ್ಯೆಗೆ ರವಾನಿಸಿದೆ. ತಿರುಪತಿ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ತಿರುಪತಿ ಲಡ್ಡುಗಳನ್ನು ರವಾನೆ ಮಾಡಲಾಗಿದೆ. ಲಡ್ಡು ಪ್ರಸಾದವನ್ನು ಜ. 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವ ಭಕ್ತರಿಗೆ ವಿತರಿಸಲಾಗುತ್ತದೆ.
ಈ ಪ್ರತಿ ಲಡ್ಡು ಸುಮಾರು 25 ಗ್ರಾಂ ತೂಗುತ್ತದೆ. ರಾಮಭಕ್ತರಿಗೆ ವಿತರಿಸಲು ಅವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಪ್ಯಾಕ್ ಮಾಡಲಾಗಿದೆ. ಶ್ರೀವಾರಿ ಸೇವಕರು ಸುಮಾರು 350 ಬಾಕ್ಸ್‍ಗಳಲ್ಲಿ ಲಡ್ಡುಗಳನ್ನು ಪ್ಯಾಕ್ ಮಾಡಿದ್ದಾರೆ. ವಿಶೇಷ ವಿಮಾನದ ಮೂಲಕ ತಿರುಪತಿ ವಿಮಾನ ನಿಲ್ದಾಣದಿಂದ ನೇರವಾಗಿ ಅಯೋಧ್ಯೆಗೆ ಈ ಲಡ್ಡುಗಳನ್ನು ಕಳುಹಿಸಲಾಗಿದೆ. ಶ್ರೀವಾರಿ ಲಡ್ಡುಗಳನ್ನು ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ಗೆ ಹಸ್ತಾಂತರಿಸಲಾಗುವುದು.
ಐತಿಹಾಸಿಕ ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆ ಸಂದರ್ಭದಲ್ಲಿ ತಿರುಪತಿ ಟ್ರಸ್ಟ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಇಒ ಎವಿ ಧರ್ಮಾ ರೆಡ್ಡಿ ನೇತೃತ್ವದಲ್ಲಿ ತಿರುಪತಿ ಲಡ್ಡುಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ (ಎಫ್‍ಎಸಿ) ವಿ. ವೀರಬ್ರಹ್ಮಮ್ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ನಕಲಿ ಪಾಸ್‍ಪೋರ್ಟ್, ವೀಸಾ ತಯಾರಕ
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನವಾದ ಜ.22ರಂದು ತಿರುಪತಿಯ ಲಡ್ಡು ಭಕ್ತರಿಗೆ ನೀಡಲಾಗುತ್ತದೆ. ಈ ಒಂದು ಲಕ್ಷ ಲಡ್ಡು ತಯಾರಿಸಲು ಬಳಸಲು 2000 ಕೆಜಿ ಶುದ್ಧ ದೇಸಿ ತುಪ್ಪವನ್ನು ಮೈ ಹೋಮ್ ಗ್ರೂಪ್ ಅಧ್ಯಕ್ಷ ಜೆ.ರಾಮೇಶ್ವರ್ ಅವರು ನೀಡಿದ್ದಾರೆ. ಇನ್ನೂ ಈ ಲಡ್ಡುಗಳನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಸೇವಾ ಸದನದ ಇಡೀ ಆವರಣವು ಜೈ ಶ್ರೀ ರಾಮ್ ಮತ್ತು ಗೋವಿಂದಾ ನಮಸ್ಕಾರಗಳೊಂದಿಗೆ ಉತ್ಸಾಹಭರಿತವಾಗಿ ಕೂಡಿತ್ತು. ಲಡ್ಡುಗಳನ್ನು ವಿತರಿಸುವ ಸಮಯದಲ್ಲಿ ಭಕ್ತರು ದೈವಿಕ ನಾಮಗಳನ್ನು ಪಠಿಸಿದರು. ಈ ವೇಳೆ ಸಿಪಿಆರ್‍ಒ ಡಾ.ಟಿ.ರವಿ, ಡಿವೈಇಒ ಜನರಲ್ ಶಿವಪ್ರಸಾದ್ ಇತರರು ಇದ್ದರು.
ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ಶ್ರೀಮಂತ ಹಿಂದೂ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ತಾನಂ ಟ್ರಸ್ಟ್ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜಗತ್ತಿನಾದ್ಯಂತದ ಭಕ್ತರಿಗೆ ಒಂದು ಲಕ್ಷ ವಿಶ್ವ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ವಿತರಿಸುವ ಯೋಜನೆಯನ್ನು ಪ್ರಕಟಿಸಿತ್ತು. ಅದರ ನಿರ್ಧಾರಕ್ಕೆ ಅನುಗುಣವಾಗಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ವಿ ವೀರಬ್ರಹ್ಮಮ್ ನೇತೃತ್ವದ ತಿರುಪತಿ ಟ್ರಸ್ಟ್ ಒಂದು ಲಕ್ಷ ಲಡ್ಡುಗಳ ತಯಾರಿ ಆರಂಭಿಸಿತ್ತು. ಸದ್ಯ ಆ ಲಡ್ಡುಗಳು ರಾಮಲಲ್ಲಾನ ಸನ್ನಿಧಾನವನ್ನು ತಲುಪಿವೆ.
ತಿರುಪತಿ ಲಡ್ಡು ಅಥವಾ ಶ್ರೀವಾರಿ ಲಡ್ಡು ಭಾರತದ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ನೈವೇದ್ಯವಾಗಿ ನೀಡುವ ಸಿಹಿ. ಇದನ್ನು ಹಿಟ್ಟು, ಸಕ್ಕರೆ ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್‍ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಏಳು ಬೆಟ್ಟದೊಡೆಯ, ಭಾರತದ ಶ್ರೀಮಂತ ದೇಗುಲಗಳಲ್ಲೊಂದಾದ ತಿರುಪತಿಯ ದರ್ಶನಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. ತಿಮ್ಮಪ್ಪನ ಸನ್ನಿ ಎಷ್ಟು ವೈಶಿಷ್ಯ ಹೊಂದಿದ್ಯೋ ಅಷ್ಟೇ ಏಳುಕೊಂಡಲವಾಡನ ದರ್ಶನ ಪಡೆದ ಬಳಿಕ ಕೊಡೋ ಲಡ್ಡು ಕೂಡ ವಿಶ್ವದಾದ್ಯಂತ ಪ್ರಸಿದ್ಧ. ತಿಮ್ಮಪ್ಪನ ದರ್ಶನದ ಬಳಿಕ ಭಕ್ತರಿಗೆ ಈ ಲಡ್ಡಿ ವಿತರಿಸಲಾಗುತ್ತದೆ.