Monday, November 25, 2024
Homeರಾಷ್ಟ್ರೀಯ | Nationalಗಣರಾಜ್ಯೋತ್ಸವದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಅನಾವರಣ

ಗಣರಾಜ್ಯೋತ್ಸವದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಅನಾವರಣ

ನವದೆಹಲಿ, ಜ 26 (ಪಿಟಿಐ) ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಕರ್ತವ್ಯ ಪಥದಲ್ಲಿ ಭಾರತವು ತನ್ನ ಮಿಲಿಟರಿ ಶಕ್ತಿ ಮತ್ತು ಶ್ರೀಮಂತ ಸಾಂಸ್ಕøತಿಕ ಪರಂಪರೆಯ ಪ್ರಭಾವಶಾಲಿ ಪ್ರದರ್ಶನದೊಂದಿಗೆ ಇಂದು ತನ್ನ 75 ನೇ ಗಣರಾಜ್ಯೋತ್ಸವವನ್ನು ಆಚರಿಸಿತು.

ರಾಷ್ಟ್ರದ ಮಹಿಳಾ ಶಕ್ತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಮುಖ ವಿಷಯದೊಂದಿಗೆ ಮಹಾ ಆಚರಣೆಗಳು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ 90 ನಿಮಿಷಗಳ ಪರೇಡ್‍ಗೆ ವಿದ್ಯುಕ್ತ ಚಾಲನೆ ನೀಡಿದರು.

ಸಶಸ್ತ್ರ ಪಡೆಗಳು ಪರೇಡ್‍ನಲ್ಲಿ ಕ್ಷಿಪಣಿಗಳು, ಡ್ರೋನ್ ಜಾಮರ್‍ಗಳು, ಕಣ್ಗಾವಲು ವ್ಯವಸ್ಥೆಗಳು, ವಾಹನ-ಆರೋಹಿತವಾದ ಮಾರ್ಟರ್‍ಗಳು ಮತ್ತು ಪದಾತಿ ದಳದ ಯುದ್ಧ ವಾಹನಗಳಂತಹ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ಶ್ರೇಣಿಗಳನ್ನು ಪ್ರದರ್ಶಿಸಲಾಯಿತು. ಇದೆ ಮೊದಲ ಬಾರಿಗೆ, ಎಲ್ಲಾ ಮಹಿಳಾ ತ್ರಿ-ಸೇವಾ ತುಕಡಿಯು ಗಣ ರಾಜ್ಯೋತ್ಸದ ಭಾಗವಾಗಿದ್ದವು.

ಅಲ್ಲದೆ, ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‍ಗಳ ಬದಲಿಗೆ ಮೊದಲ ಬಾರಿಗೆ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳಾದ ಸಂಖ್, ನಾದಸ್ವರಂ ಮತ್ತು ನಾಗಾರವನ್ನು ನುಡಿಸಿದರು. ಸುಮಾರು 15 ಮಹಿಳಾ ಪೈಲಟ್‍ಗಳು ನಾರಿ ಶಕ್ತಿಯನ್ನು ಪ್ರತಿನಿಸುವ ಭಾರತೀಯ ವಾಯುಪಡೆಯ ಫ್ಲೈ-ಪಾಸ್ಟ್ ಸಮಯದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಗಳು ಮಹಿಳಾ ಸಿಬ್ಬಂದಿಗಳು ಹಾಜರಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡು ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭವಾದ ಪರೇಡ್ ಕಾರ್ಯಕ್ರಮಗಳು 90 ನಿಮಿಷಗಳ ಕಾಲ ನಡೆಯಿತು.

105 ಎಂಎಂ ಭಾರತೀಯ ಫೀಲ್ಡ ಗನ್‍ಗಳ ಸ್ವದೇಶಿ ಬಂದೂಕು ವ್ಯವಸ್ಥೆಯೊಂದಿಗೆ 21-ಗನ್ ಸೆಲ್ಯೂಟ್‍ನೊಂದಿಗೆ ರಾಷ್ಟ್ರಗೀತೆ ಹಾಡಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು. 105 ಹೆಲಿಕಾಪ್ಟರ್ ಘಟಕದ ನಾಲ್ಕು ಎಂಐ -17 ಐವಿ ಹೆಲಿಕಾಪ್ಟರ್‍ಗಳು ಕರ್ತವ್ಯ ಪಥದಲ್ಲಿರುವ ಪ್ರೇಕ್ಷಕರ ಮೇಲೆ ಹೂ ಮಳೆ ಸುರಿಸಿದವು. ನಂತರ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ಆವಾಹನ್ ಬ್ಯಾಂಡ್ ನಡೆಸಿಕೊಟ್ಟರು. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪಥಸಂಚಲನ ನಡೆಯಿತು.

ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ

ಇದರ ನೇತೃತ್ವವನ್ನು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಭವ್ನಿಶ್ ಕುಮಾರ್ ವಹಿಸಿದ್ದರು. ಕರ್ತವ್ಯ ಪಥವು ಫ್ರೆಂಚ್ ಸಶಸ್ತ್ರ ಪಡೆಗಳ ಸಂಯೋಜಿತ ಬ್ಯಾಂಡ್ ಮತ್ತು ಮಾರ್ಚಿಂಗ್ ತುಕಡಿಯಿಂದ ಮಾರ್ಚ್ ಪಾಸ್ಟ್‍ಗೆ ಸಾಕ್ಷಿಯಾಯಿತು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 16 ಟ್ಯಾಬ್ಲೋಗಳು ಮತ್ತು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಒಂಬತ್ತು ಟ್ಯಾಬ್ಲೋಗಳು ಪರೇಡ್‍ನಲ್ಲಿ ಭಾಗವಹಿಸಿದ್ದವು.ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‍ಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರ ಪ್ರದೇಶ, ತೆಲಂಗಾಣ ಮತ್ತಿತರ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಪರೇಡ್‍ನಲ್ಲಿ ಹಾಜರಿದ್ದವು.

RELATED ARTICLES

Latest News